ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಇವುಗಳ ಆಶ್ರಯದಲ್ಲಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯವೆಂಬ ತವನಿಧಿಯನ್ನು ತೆಗೆದುಕೊಟ್ಟ ಹಳಕಟ್ಟಿಯವರು ಕೇವಲ ನೇಕಾರ ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲಕ್ಕೆ ಸೀಮಿತವಾಗಿರುವ ವ್ಯಕ್ತಿ ಎಂದು ಅವರು ಬಣ್ಣಿಸದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರಗತಿಪರ ಚಿಂತಕಿ ಡಾ. ಮೀನಾಕ್ಷಿ ಬಾಳಿ, ಎಲ್ಲವನ್ನು, ಎಲ್ಲರನ್ನೂ ವೈದಿಕೀಕರಣಗೊಳಿಸಿದ ಪುರೋಹಿತಶಾಹಿ ವ್ಯವಸ್ಥೆ, ಬಸವಣ್ಣನವರನ್ನು ಅವತಾರ ಪುರುಷನನ್ನಾಗಿ ಮಾಡಲಾಗಿಲ್ಲ. ವಚನ ಸಾಹಿತ್ಯವನ್ನು ಕುರಿತು ಕೇವಲ ಮಾತನಾಡಿದರೆ ಸಾಲದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಿದ್ದ ಹಳಕಟ್ಟಿಯವರು, ಸುಮಾರು 12, 000 ವಚನಗಳನ್ನು ಸಂಗ್ರಹಿಸಿದ ಯುಗ ಪುರುಷ ಎಂದರು.
ಹಳಕಟ್ಟಿಯವರ ವಚನಧರ್ಮ ಶಾಸ್ತ್ರ ಎರಡು ಭಾಗಗಳನ್ನು ಪ್ರಕಟ ಮಾಡಲು ಹರ್ಡೆಕರ ಮಂಜಪ್ಪನವರು ಚಂದಾ ಎತ್ತಿ ಹಣ ಸಂಗ್ರಹಿಸಿಕೊಟ್ಟರು. ಮನೆ, ಪ್ರಿಂಟಿಂಗ್ ಪ್ರೆಸ್ ಮಾರಿ ವಚನ ಸಾಹಿತ್ಯ ಸಂಗ್ರಹ ಮಾಡಿದ ಹಳಕಟ್ಟಿಯವರ ಜೀವನದ ಪರಿಚಯ ಇಂದಿನ ಮಕ್ಕಳಿಗೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ವೈದಿಕಶಾಹಿ ಆಕ್ರಮಣದಿಂದಾಗಿ ವಚನ ಸಾಹಿತ್ಯ ಮರೆ ಮಾಚಿ ಹೋಗಿದೆ. ಲಿಂಗ ಅನ್ನುವುದು ಕೇವಲ ಧಾರ್ಮಿಕ ಲಾಂಛನವಲ್ಲ. ಅದೊಂದು ತತ್ವ. ಚಾರಿತ್ರಿಕ, ವೈಜ್ಞಾನಿಕ, ಪವಿತ್ರವಾದ ವಚನ ಸಾಹಿತ್ಯ ವೈದಿಕಶಾಹಿ ವ್ಯವಸ್ಥೆಯಿಂದ ಹೊರ ಬರಬೇಕು. ಅಂದಾಗ ಮಾತ್ರ ವಚನ ಸಾಹಿತ್ಯ ಉಳಿದು ಬೆಳೆಯಲು ಸಾಧ್ಯ ಎಂದರು.
ಜಗತ್ತಿನ ಎಲ್ಲ ಕ್ರಾಂತಿಗಳನ್ನು ತೆಗೆದು ನೋಡಿದರೆ, ವೈಯಕ್ತಿಕ ಜವಾಬ್ದಾರಿ, ಸಾಮೂಹಿಕ ಸಂಘರ್ಷದಿಂದ ಜಗತ್ತಿನ ಎಲ್ಲ ಕ್ರಾಂತಿಗಳು ಉಂಟಾಗಿವೆ. ಅದರಂತೆ ಲಿಂಗಾಯತ ಚಳವಳಿ ಕೂಡ ಜನ ಸಂಘರ್ಷ, ಜನ ಚಳವಳಿ ಮೇಲೆದ್ದು ಬರಲಿದೆ ಎಂದು ಹೇಳಿದರು. ಫ.ಗು. ಹಳಕಟ್ಟಿಯವರು ಅನುಭಾವ ಪರಂಪರೆಗೆ ಬಹು ದೊಡ್ಡ ಅಸ್ತಿಭಾರ ಹಾಕಿದವರು. ಹಳಕಟ್ಟಿಯವರು ಇರದಿದ್ದರೆ ವಚನ ಸಾಹಿತ್ಯ ಉಳಿಯುತ್ತಿರಲಿಲ್ಲ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದತ್ತಪ್ಪ ಸಾಗನೂರ ವೇದಿಕೆಯಲ್ಲಿ ಇದ್ದರು. ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಜನೇವೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಅಣಜಗಿ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…