ಸುರಪುರ: ಪರಿಸರ ಮಾಲಿನ್ಯದಿಂದ ಹಲವಾರು ರೋಗಗಳು ಹರಡುತ್ತವೆ ಅದರಲ್ಲಿ ಪ್ಲಾಸ್ಟಿಕ ವಸ್ತುಗಳು ನಮ್ಮ ಪರಿಸರಕ್ಕೆ ಹಾನಿಉಂಟುಮಾಡಿ ಮನಷನ ಆರೋಗ್ಯವನ್ನು ಹದಗೆಡಿಸುತ್ತದೆ ಕಾರಣ ಪ್ಲಾಸ್ಟಿಕ ಮುಕ್ತಗೊಳಿಸಿ ಆರೋಗ್ಯವಂತರಾಗೋಣ ಎಂದು ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಕರೆನೀಡಿದರು.
ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕಲಿಕೆ ಮತ್ತು ಬಿ.ಜೆ.ಎಸ್. ಎನ್.ಜಿ.ಓ ರವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ಲಾಸ್ಟಿಕ ಮುಕ್ತ ಪರಿಸರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ಲಾಸ್ಟಿಕ ವಸ್ತುಗಳು ನಮ್ಮ ಪರಿಸರದಲ್ಲಿ ನಶಿಸದೆ ಹಾಗೆ ಉಳಿಯುವುದರಿಂದ ಪರಿಸರದಲ್ಲಿರುವ ಮರಗಿಡಗಳಿಗೆ ಹಾನಿಯಾಗುತ್ತವೆ ಅದಕ್ಕಾಗಿ ನಾವುಗಳು ಪ್ಲಾಸ್ಟಿಕ ವಸ್ತಗಳನ್ನು ಬಳಸುವುದನ್ನು ಬಿಡಬೇಕು ಎಂದು ತಿಳಿಸಿದರು.
ನಂತರ ಅತಿಥಿಯಾಗಿ ಆಗಮಿಸಿದ ನಿವೃತ್ತ ಲೋಕಾಯುಕ್ತ ಎಸ್.ಪಿ ಸಿ.ಎನ್.ಭಂಡಾರೆ ಮಾತನಾಡಿ ಇಂದಿನ ಯುಗವು ಪ್ಲಾಸ್ಟಿಕ ಮಯವಾಗಿಬಿಟ್ಟಿದೆ ಇದರಿಂದ ನಮ್ಮ ಪರಿಸರಕ್ಕೂ ಹಾನಿ ಹಾಗೂ ಮನುಷನಿಗೆ ಹಾಗೂ ನಮ್ಮ ದನಕರುಗಳ ಆರೋಗ್ಯಕ್ಕೂ ಹಾನಿಯಾಗಿದೆ ಕಾರಣ ಪ್ಲಾಸ್ಟಿಕ ವಸ್ತುಗಳ ಬಳಕೆಯನ್ನು ಬಿಟ್ಟು ಪರ್ಯಾಯ ವಸ್ತುಗಳ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಮದ ಎಲ್ಲಾ ಬಡಾವಣೆಯಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಪ್ಲಾಸ್ಟಿಕ ಮುಕ್ತಗೊಳಿಸಲು ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು ಬಿ.ಜೆ.ಎಸ್. ಎನ್.ಜಿ.ಓ ಅಧ್ಯಕ್ಷ ಅಜೀತ್, ಮಲ್ಲಿಕಾರ್ಜುನ ಪಾಟೀಲ್, ವೆಂಕೋಬ ಬಾಕ್ಲಿ, ಪ್ರಾಂಶುಪಾಲ ರವೀಂದ್ರಕುಮಾರ ನಾಗರಾಳೆ, ರಾಜೇಶ ಧೋಖಾ ಜೈನ್ ವೇದಿಕೆಯಲ್ಲಿದ್ದರು, ಎನ್.ಎಸ್.ಎಸ್. ಸಂಯೋಜಕ ಪ್ರೊ.ಪ್ರಭಾಕರ ಪಾಟೀಲ ಉಪನ್ಯಾಸ ನೀಡಿದರು. ಪ್ರಾರ್ಥನಾ ಗೀತೆಯನ್ನು ಸ್ನೇಹಾ ಹಾಡಿದರು, ಪ್ರೊ.ಮಲ್ಕನಗೌಡ ನಿರೂಪಿಸಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…