ಸುರಪುರ: ತಾಲೂಕಿನ ಹುಣಸಗಿ ಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಸರ್ವಜನರ ಸಂವಿಧಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಜ್ಯೋತಿ ಬೆಳಗಿಸುವ ಮೂಲಕ ಸಮಾವೇಶ ಉದ್ಘಾಟಿಸಿದ ಮುಂಡರಗಿಯ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ ಈ ದೇಶದಲ್ಲಿ ಸಂವಿಧಾನ ಬದಲಾವಣೆಯ ಮಾತನಾಡಲಾಗುತ್ತಿದೆ, ಆದರೆ ಸೂರ್ಯ ಚಂದ್ರರು ಇರುವವರೆಗೂ ಅದು ಸಾಧ್ಯವಿಲ್ಲ ಎಂದರು. ದೇಶದಲ್ಲಿ ಯಾವ ಧರ್ಮದಿಂದ ಯಾವ ರಾಜ್ಯ ರಿಂದಲೂ ಸಮಾನತೆ ಬರಲಿಲ್ಲ ಆದರೆ ಅಂಬೇಡ್ಕರರು ಕೊಟ್ಟ ಸಂವಿಧಾನದಿಂದ ಸಮಾನತೆ ಬಂದಿದೆ.
ವಿಧಾನವನ್ನು ಹೋಗಬೇಕಾದ ಕೆಳವರ್ಗದ ಯುವಕರ ಕೈಗೆ ಧರ್ಮದ ಪುಸ್ತಕಗಳು ಬಂದಿವೆ, ಈ ದೇಶ ಎರಡು ಸಂವಿಧಾನವನ್ನು ಕಂಡಿದೆ ಬಸವಣ್ಣ ಕೊಟ್ಟ 12ನೇ ಶತಮಾನದ ವಚನ ಸಾಹಿತ್ಯದ ಧಾರ್ಮಿಕ ಸಮಾನತೆಯ ಸಂವಿಧಾನ, ಮತ್ತೊಂದು ಅಂಬೇಡ್ಕರರು ಕೊಟ್ಟ ಸಾಮಾಜಿಕ ನೆಲೆಗಟ್ಟಿನ ಸಂವಿಧಾನ. ಇಂದು ದೇಶದಲ್ಲಿ ಪ್ರಶ್ನೆ ಮಾಡುವುದು ಅಪರಾಧ ಪ್ರಶ್ನೆ ಮಾಡಿದ ದಾಬೋಲ್ಕರ್ ಪಾನ್ಸರೆ ಎಂಎಂ ಕಲಬುರ್ಗಿ ಮತ್ತಿತರರ ಹತ್ಯೆಗಳ ನಡೆಸಲಾಗಿದೆ. ನಮಗೆ ರಾಮರಾಜ್ಯ ಬೇಕಾಗಿಲ್ಲ ಬಸವಣ್ಣ ಅಂಬೇಡ್ಕರರ ಸಮಾನತೆಯ ರಾಜ್ಯ ಬೇಕಾಗಿದೆ ಆಹಾರ ಹಸಿದವನ ಸ್ವತ್ತು ಅದು ಯಾವುದೇ ಧರ್ಮದವರ ಸ್ವತ್ತಲ್ಲ. ನಾವು ಬ್ರಾಹ್ಮಣರ ವಿರೋಧಿಗಳಲ್ಲ ಆದರೆ ನಮ್ಮನ್ನು ಅಸ್ಪೃಶ್ಯ ರನ್ನಾಗಿ ಕಾಣುವುದರ ವಿರೋಧಿಗಳಾಗಿದ್ದೇವೆ. ನಾವು ಈ ಅಸ್ಪೃಶ್ಯತೆಯಿಂದ ಹೊರಬರಬೇಕಾದರೆ ಬಸವಾದಿ ಶರಣರನ್ನು ಅಂಬೇಡ್ಕರರ ಸಂವಿಧಾನವನ್ನು ಅರಿತು ನಡೆದಾಗ ಸಾಧ್ಯ ಎಂದರು.
ಪ್ರಾಸ್ತವಿಕವಾಗಿ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಅಂಬೇಡ್ಕರರು ಭಾರತದಲ್ಲಿ ಭೂಮಿ ರಾಷ್ಟ್ರೀಕರಣ, ಶಿಕ್ಷಣ ರಾಷ್ಟ್ರೀಕರಣ ಕೈಗಾರಿಕೆ ರಾಷ್ಟ್ರೀಕರಣ ಆಗಬೇಕೆಂದಿದ್ದರು. ಆದರೆ ಯುವ ಕನಸಾಗೇ ಉಳಿದಿದೆ. ಮೋದಿಯವರು ಅಂಬೇಡ್ಕರರ ಬಗ್ಗೆ ಬಹಳ ಗೌರವವಾಗಿ ಮಾತನಾಡುತ್ತಾರೆ, ಆದರೆ ಸಂಸತ್ತಿನ ಬಳಿಯೇ ಸಂವಿಧಾನದ ಪ್ರತಿಯನ್ನು ಅವರ ಮೇಲೆ ಯಾವ ಕ್ರಮ ಕೈಗೊಂಡರು ಎಂದು ಪ್ರಶ್ನಿಸಿದರು. ಬಸವಣ್ಣ ಮತ್ತು ಅಂಬೇಡ್ಕರರು ಒಂದು ಜಾತಿಯ ಸ್ವತ್ತಲ್ಲ ಇವರು ಮಹಾನ್ ಪುರುಷರು ಗಳಾಗಿದ್ದಾರೆ ಎಂದರು. ನಂತರ ಜಿಲ್ಲಾಪಂಚಾಯಿತಿಯ ಸದಸ್ಯ ಬಸವರಾಜ್ ಸ್ಥಾವರಮಠ ಸಮಾವೇಶವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ನಂತರ ಕ್ರಾಂತಿಗೀತೆಗಳು ಜರಗಿದವು.
ಕಾರ್ಯಕ್ರಮದ ವೇದಿಕೆ ಮೇಲೆ ರಾಮಣ್ಣ ಕಲದೇವನಹಳ್ಳಿ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ನಾಗಣ್ಣ ಬಡಿಗೇರ್ ಸಂಗಣ್ಣ ವೈಲಿ ಲಿಂಗಣ್ಣ ಸಾಹು ನಾನಾ ಗೌಡ ಪಾಟೀಲ್ ಯಶವಂತ್ ಸಿಂದೆ ಮಲ್ಲಣ್ಣ ಕಟ್ಟಿಮನಿ ನಾಗಣ್ಣ ಕಲ್ಲದೇವನಹಳ್ಳಿ ಶಿವಲಿಂಗಪ್ಪ ದೊಡ್ಡಮನಿ ಶಿವಣ್ಣ ಬಡಿಗೇರ ವೆಂಕಟೇಶ ಹೊಸ್ಮನಿ ರಾಹುಲ್ ಹುಲಿಮನಿ ಮಾಳಪ್ಪ ಕಿರದಳ್ಳಿ ದೇವಿಂದ್ರಪ್ಪ ಪತ್ತಾರ್ ರಾಜು ಕುಂಬಾರ ಶರಣಪ್ಪ ಗುಳಬಾಳ ಹಂಬಲಪ್ಪ ಹಳ್ಳಿ ಲಿಂಗಪ್ಪ ಪರಂಗಿ ಭೀಮರಾಯ ದೊಡ್ಡಮನಿ ಈಶ್ವರ ರೋಜಾ ರಾಜು ದೊಡ್ಡಮನಿ ಬಸವರಾಜ ಸೇರಿದಂತೆ ಅನೇಕರಿದ್ದರು. ಭೀಮರಾಯ ಅಗ್ನಿ ನಿರೂಪಿಸಿದರು ಯಮನಪ್ಪ ಗುಂಡಲ ಗೇರ ಸ್ವಾಗತಿಸಿದರು ಮಾಳಪ್ಪ ಕಿರದಳ್ಳಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…