ಬಿಸಿ ಬಿಸಿ ಸುದ್ದಿ

ಮಹಿಳೆಯನ್ನು ಸಮಾನ ದೃಷ್ಠಿಯಿಂದ ಕಾಣಲು ಪ್ರೋ.ಎಸ್.ಪಿ.ಮೇಲಕೇರಿ ಕರೆ

ಆಳಂದ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಶೋಷಣೆಯನ್ನು ಮಾಡಿಕೊಂಡೆ ಬರಲಾಗಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ ಹಗಲು ರಾತ್ರಿ ಎನ್ನದೆ ದುಡಿದರೂ ಕೂಡ ಆಕೆಯನ್ನು ಸಮಾನತೆ ದೃಷ್ಠಿಯಿಂದ ಕಾಣದೇ ಇರುವುದು ನಿಜವಾಗಿಯೂ ದೊಡ್ಡ ದುರಂತ ಎಂದು ಪ್ರೋ.ಎಸ್.ಪಿ.ಮೇಲಕೇರಿ ಹೇಳಿದರು.

ಜಯಪ್ರಕಾಶ ನಾರಾಯಣ ಶಾಲೆಯ ಆವರಣ ಮಾಡಿಯಾಳದಲ್ಲಿ ಪ್ರೇಮಾಂಜಲಿ ಕಲಕೇರಿ ಅವರ ಮಹಿಳಾ ಸಾಹಿತ್ಯ ಸಮಸ್ಯೆ ಮತ್ತು ಸವಾಲುಗಳು ಎಂಬ ಪುಸ್ತಕ ಬಿಡುಗಡೆಗೊಳಿಸುವ ಮೂಲಕ, ಮಹಿಳೆಯ ಕೂಡ ಪುರುಷನಷ್ಟೆ ಸರಿ ಸಮಾನಾಗಿದ್ದಾಳೆ. ಆದಿ ಕಾಲದಲ್ಲಿ ಸ್ತ್ರೀಯರನ್ನು ಮೊಟ್ಟ ಮೊದಲು ಸ್ವಾತಂತ್ರ್ಯ ಸಮಾನತೆ ಸಾರಿದ ತಥಾಗತ ಗೌತಮ್ಮ ಬುದ್ಧರಾಗಿದಾರೆ. ನಂತರ ಜಗಜ್ಯೋತಿ ಬಸವಣ್ಣನವರು, ಅಲ್ಲಮ್ಮ ಪ್ರಭುಗಳು ಹೀಗೆ ಹಲವಾರು ವಚನಕಾರರು ಸ್ತ್ರೀಯರ ಸಮಾನತೆಯ ಬಗ್ಗೆ ಸಾರಿ, ಸಾರಿ ಹೇಳಿದಾರೆ. ಅಂತಹ ಮಹಾಪುರುಷರ ವಿಚಾರಧಾರೆಗಳನ್ನು ಮೇಲಕು ಹಾಕುವಂತಹ ಪುಸ್ತಕ ಇದಾಗಿದೆ ಎಂದು ಹೇಳಿದರು.

ತಹಸೀಲ್ದಾರ ಸುರೇಶ ಶರ್ಮಾ ಮಾತನಾಡಿ, ಮಹಿಳೆಯರ ಮನದಲ್ಲಿರುವ ತುಡಿತವನ್ನು, ನೋವುಗಳ ಸಾರಮಾಲೆ, ಅವಳು ಅನುಭವಿಸಿದ ನರಕಗಳ ಬಗ್ಗೆ ಲೇಖನದ ಒಳಗಡೆ ಆಯುದ್ಧದಂತೆ ಕಾಣುತ್ತದೆ. ಮಹಿಳಾ ಶಿಕ್ಷಣ ಪ್ರತಿಪಾದಕರಾದ ಮಹಾತ್ಮ ಜ್ಯೋತಿಭಾ ಪುಲೆ, ಮಾತಾ ಸಾವಿತ್ರಾಭಾ ಪುಲೆಯವರ ಆಸೆಯಂತೆ ಹೆಣ್ಣೊಬಳು ಕಲಿತರೆ ಜಗತ್ತಿನ ಕತ್ತಲೆಯನ್ನು ವಿಮುಕ್ತಗೊಳಿಸುವಂತ ಆಲೋಚನೆಯನ್ನು ಪ್ರತಿಯೊಬ್ಬರು ಮಾಡಿದ್ದೇ ಆದಲ್ಲಿ ಭಾರತ ದೇಶವನ್ನು ಸಮಾನತೆಯಿಂದ ಉತ್ತಂಗದ ಶಿಖರಕ್ಕೆ ಕೊಂಡೊಯುವದರಲ್ಲಿ ಯಾವ ಅನುಮಾನವೇ ಇಲ್ಲವೆಂದರು.
ದಲಿತ ಮುಖಂಡ ಲಕ್ಕಪ್ಪಾ ಬೋದನ ಮಾತನಾಡಿ, ಹಳ್ಳಿಯಲ್ಲಿ ಮಹಿಳೆಯರು ಉನ್ನತ ಮಟ್ಟದ ಶಿಕ್ಷಣ ಕಲಿಯದೆ ಮದುವೆ ಎಂಬ ಬಂಧನದ ನಡುವೆ ಸಿಕ್ಕು ವಿದ್ಯಾಭ್ಯಾಸ ಮೊಟಕುಗೊಳಿಸಿದಾರೆ. ಹೀಗಿರುವಾಗಲು ನಮ್ಮ ಊರಿನ ಮನೆಮಗಳು ಪುಸ್ತಕವನ್ನು ಬರೆದು ಊರಿನ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡುತ್ತಿರುವುದು ಊರಿನ ಕಿರ್ತೀ ಇನ್ನೂ ಹೆಚ್ಚಿಸಿದೆ. ಲೇಖಕಿ ಪ್ರೇಮಾಂಜಲಿ ಕಲಕೇರಿ ಅವರಂತೆ ಮಹಿಳೆಯರು ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ಪತ್ರಕರ್ತ ವಿಜಯಕುಮಾರ ಜಿಡಗಿ ಮಾತನಾಡುತ್ತಾ, ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ರವರು ಕಾನೂನು ಮಂತ್ರಿಯಾಗಿದಾಗ ಮಹಿಳೆಯರನ್ನು ಸಮಾನತೆಗಾಗಿ ಹೋರಾಟವನ್ನು ಮಾಡಿ ರಾಜಿನಾಮೆ ಸಲ್ಲಿಸಿದ ಏಕೈಕ ಸ್ತ್ರೀ ಪ್ರತಿಪಾದಕ ರಾಜಕಾರಣಿ ಎಂದರೆ ತಪ್ಪಾಗಲಿಕ್ಕಿಲ್ಲ, ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ. ಮಹಿಳೆಯನ್ನು ಇನ್ನುವರಿಗೆ ಅಂತಹ ಸ್ಥಾನ ಮಾನವನ್ನು ನೀಡಿಲ್ಲ. ಅದರಲ್ಲು ಹಳ್ಳಿಯಲ್ಲಿ ವಾಸಿಸುತ್ತಿರುವ ಮುಗ್ಧ ಮಹಿಳೆಯರೀಗೆ ಶಿಕ್ಷಣದ ಅರಿವು ಇಲ್ಲದೆ ಇರುವುದು ನಿಜಕ್ಕೂ ಮನುಜ್ಯಕೂಲ ತಲೆ ತಗ್ಗಿಸುವಂತಹದು, ಒಂದು ಕಡೆ ಮಹಿಳೆ ಗಗನ ಯಾತ್ರೆಯ ಮೇಲೆ ನಡೆದಾಡುತ್ತಿದಾಳೆ. ಇನ್ನೊಂದು ಕಡೆ ಬಾಲ್ಯ ವಿವಾಹದಂತಹ ಮಾರಕ್ಕೆ ಸಿಲುಕಿ ಒದ್ದಾಡುತಿದಾಳೆ. ಇದೇಲದಕ್ಕೂ ಒಂದೇ ಪರಿಹಾರ ಅಕ್ಷರದ ಕ್ರಾಂತಿಕಾರರಾದ ಮಹಾತ್ಮ ಜ್ಯೋತಿಬಾ ಪುಲೆ, ಮಾತೆಸಾವಿತ್ರಾಬಾ ಪುಲೆ ಹಾಗೂ ಸಂವಿಧಾನ ಪಿತಮಹಾ ಡಾ.ಬಾಬಾಸಾಹೇಬ ಅಂಬೇಡ್ಕರ ರವರು ಹಾಕಿಕೊಟ್ಟಿರುವಂತಹ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಮಾರ್ಮಿಕವಾಗಿ ಹೇಳಿದರು.

ಈ ಸಂಧರ್ಭದಲ್ಲಿ ಪೂಜ್ಯ ಭಂತೆ ಸಂಘಾನಂದ, ಪಿ.ಡಿ.ಕಾಂಬಳೆ, ಟಿ.ಮಹಾದೇವಪ್ಪಾ, ನಲೇಶಪ್ಪ ಗೋನಾಳಕರ್, ಶರಣಪ್ಪ ನಂದಿಕರ್, ಪ್ರಭು ಸರಸಂಬಿ, ನಿಂಗಪ್ಪಾ ಗೋನಾಳಕರ್, ಭೀಮ ಆರ್ಮಿ ತಾಲ್ಲೂಕ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಶರಣಪ್ಪಾ ಜಾವಳಿ(ಡಿ), ಪ್ರಭುಕಾಂತ ಜಟೇಪ್ಪಾ ಕಲಕೇರಿ, ವಿಜಯಕುಮಾರ ತಳಕೇರಿ, ಪಂಡಿತ ಕಲಕೇರಿ, ಶಿವ ಅರ್ಜುನ ಕಾಂಬಳೆ, ಮರೇಪಾ ಕಲಕೇರಿ ಇದ್ದರು.

ಕಾರ್ಯಕ್ರಮವನ್ನು ಪರಮೇಶ್ವರ ಕೊಂಬಿನ್ ನಿರೂಪಿಸಿದರು, ಸಿದ್ಧರಾಮ ತಳಕೇರಿ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 hour ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 hour ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

3 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago