ಬಿಸಿ ಬಿಸಿ ಸುದ್ದಿ

ಚೆನ್ನಾಗಿ ಓದಿ ಉತ್ತಮ ಶ್ರೇಣಿಯಲ್ಲಿ ಪಾಸಾಗುವುದೆ ನನಗೆ ಕೊಡುವ ಕಮಿಷನ್: ರಾಜುಗೌಡ

ಸುರಪುರ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೯-೨೦ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಹಾಗು ವಿವಿಧ ಸಮಿತಿಗಳ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದ ಶಾಸಕ ಹಾಗು ಕಾಲೇಜು ಅಭಿವೃಧ್ಧ ಸಮಿತಿ ಅಧ್ಯಕ್ಷ ನರಸಿಂಹ ನಾಯಕ(ರಾಜುಗೌಡ) ಮಾತನಾಡಿ, ಕಳೆದ ವರ್ಷ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಂತೆ ಕಾಲೇಜಿಗೆ ಇಪ್ಪತ್ತೈದು ಲಕ್ಷ ರೂಪಾಯಿಗಳ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಕೂಡುವ ಬೆಂಚ್,ಡೈಸ್ ಎಲ್ಲವನ್ನು ಹೊಸದಾಗಿ ನಿಡಲಾಗಿದೆ.ನಿಮ್ಮ ಬೇಡಿಕೆಯನ್ನು ನಾಡು ಈಡೇರಿಸಿರುವೆ.ನೀವು ಚೆನ್ನಾಗಿ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದರೆ ಅದೇ ನೀವು ನನಗೆ ಕೊಡುವ ಕಮಿಷನ್ ಆಗಿರಲಿದೆ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಇಂದು ಖಾಸಗಿ ಶಾಲೆ ಕಾಲೇಜುಗಳಲ್ಲಿ ಶ್ರೀಮಂತರ ಮಕ್ಕಳನ್ನು ಓದಿಸುತ್ತಾರೆ.ಆದರೆ ದೇಶದ ಎಲ್ಲಾ ಮೇರು ವ್ಯಕ್ತಿಗಳು ಸರಕಾರಿ ಶಾಲೆಗಳಲ್ಲೆ ಓದಿದವರಾಗಿದ್ದಾರೆ.ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಓದಬೇಕು.ಸರಕಾರಿ ಶಾಲೆಗಳಲ್ಲಿ ಓದಿದವರಿಗೆ ಸರಕಾರ ನೌಕರಿ ನೀಡುವ ಕಾನೂನು ತರುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.ಪ್ರತಿ ಐದು ಕಿ.ಮೀ ಗೊಂದು ಪಿಯುಸಿ ಕಾಲೇಜು ಹಾಗು ಇಪ್ಪತ್ತು ಕಿ.ಮೀ ಗೊಂದು ಪದವಿ ಕಾಲೇಜು ಆರಂಭಿಸಬೇಕೆಂಬುದು ನನ್ನ ಬಯಕೆಯಾಗಿದೆ.ವಿದ್ಯಾರ್ಥಿಗಳಾದವರು ಗುರುಗಳಿಗೆ ಗೌರವ ಕೊಡಬೇಕು,ದೇವರಿಗಿಂತ ಶ್ರೇಷ್ಠವಾದವರು ಗುರುಗಳು ಎಂದರು.

ಬರೀ ಶಾಸಕನಾಗಿ ನನ್ನೊಬ್ಬನಿಂದ ಎಲ್ಲಾ ಬದಲಾಗಲಿದೆ ಎಂದು ನಾನು ಹೇಳಲಾಅರೆ.ವಿದ್ಯಾರ್ಥಿಗಳು ಕೂಡ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಬಂಧ ಬರೆದು ಕೊಡುವಂತೆ ತಿಳಿಸಿದರು.ಅಲ್ಲದೆ ಬರೀ ನೌಕರಿಯ ಆಸೆ ಬೇಡ ರೈತನಾಗುವುದು ಶ್ರೇಷ್ಟ ಕೆಲಸವಾಗಿದೆ.ವಿದ್ಯಾವಂತ ರೈತನಾದರೆ ಉತ್ತಮ ವ್ಯವಸಾಯ ಮಾಡುವುದು ಸಾಧ್ಯ ಆದ್ದರಿಂದ ನಿಮ್ಮ ಉತ್ತಮ ಓದು ಮುಂದೆ ರೈತನಾಗುವಂತಾಗಿಯೂ ಇರಲಿ ಹಾಗು ಯಾರೂ ಗುಟ್ಖಾದಂತಹ ಮಾದಕ ವ್ಯಸನದ ದುಶ್ಚಟಗಳಿಂದು ದೂರ ಇರುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಂದ್ರಿಯ ವಿಶ್ವ ವಿದ್ಯಾಲಯದ ಉಪನ್ಯಾಸಕ ಅಪ್ಪುಗೆರೆ ಸೋಮಶೇಖರ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಹೆಚ್ಚೆಚ್ಚು ಕಲಿಯುವ ಆಸಕ್ತಿ ಇರಲಿ.ಇಂದು ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ನಮಗೆಲ್ಲ ಬುಧ್ಧ ಬಸವಣ್ಣ ಅಂಬೇಡ್ಕರ್ ಪೆರಿಯಾರ್ ಸಾವಿತ್ರಿಬಾಯಿ ಫುಲೆ,ಜ್ಯೋತಿಬಾ ಫುಲೆ, ಶಾಹುಮಹಾರಾಜನಂತವರು ಮಾದರಿಯಾಗಲಿ ಎಂದರು.ನಮ್ಮದು ಈಗ ಮಾತು ಕೇಳದ ಭಾರತವಾಗಿದೆ, ಸಮಾನತೆ ಸಾರಿದ ಬುಧ್ಧನನ್ನು ಹೊರಗಟ್ಟಲಾಯಿತು.ಬಸವಾದಿ ಶರಣರಿಗೆ ಶಿಕ್ಷಿಸಲಾಯಿತು.ನಾವೆಲ್ಲರು ಸಂವಿಧಾನದ ಋಣದ ಮಕ್ಕಳಾಗಿದ್ದೆವೆ ಎಂದರು.

ಅಲ್ಲದೆ ಸಗರನಾಡಿನ ಜನರು ಪುಣ್ಯವಂತರು ಈ ಭೂಮಿ ಜಗತ್ತಿನ ಶ್ರೇಷ್ಠ ಭೂಮಿಯಾಗಬೇಕಿತ್ತು.ಇಲ್ಲಿಯ ಗರುಡಾದ್ರಿ ಕಲೆ ಜಗತ್ತಿಗೆ ಪರಿಚಯಿಸಬೇಕಿದೆ ಅದಕ್ಕಾಗಿ ಐತಿಹಾಸಿಕ ವಸ್ತು ಸಂಗ್ರಹಾಲಯ ಸ್ಥಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು. ನಂತರ ಪ್ರಥಮ ವರ್ಷದ ಸ್ನಾತಕ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಲಾಯಿತು.ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಹಲವಾರು ಬೇಡಿಕೆಗಳನ್ನು ಸಲ್ಲಿಸಿದರು. ಬೇಡಿಕೆಗಳಿಗೆ ಸ್ಪಂಧಿಸಿದ ಶಾಸಕರು ಕಾಲೇಜಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು

ನಂತರ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವೆಂಕೋಬ ಬಿರೆದಾರ ಮಾತನಾಡಿದರು.ನಂತರ ವಿವಿಧ ಚಟುವಟಿಕೆಗಳಿಗಾಗಿ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ(ತಾತಾ),ಯಲ್ಲಪ್ಪ ಕುರಕುಂದಿ,ಜಿ.ಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ,ದೊಡ್ಡ ದೇಸಾಯಿ ದೇವರಗೋನಾಲ,ಭೀಮಾಶಂಕರ ಬಿಲ್ಲವ್,ಭೀಮಣ್ಣ ಬೇವಿನಾಳ,ಉಪನ್ಯಾಸಕರಾದ ರಾಘವೇಂದ್ರ ಗುಡಗುಂಟಿ,ಬಲಭೀಮ ದೇಸಾಯಿ,ಸಂಗಣ್ಣ ರಾಂಪುರೆ ಇದ್ದರು.ವೆಂಕಟೇಶ ನಿರೂಪಿಸಿದರು,ಉಸ್ಮಾನ ಸ್ವಾಗತಿಸಿದರು,ರೇಣುಕಾ ವಂದಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

6 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

6 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

9 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

9 hours ago