ಸುರಪುರ:ಮೋಹರಂ ಹಬ್ಬ ಎನ್ನುವುದು ಮುಸ್ಲೀಂ ಧರ್ಮಿಯರು ಆಚರಿಸುವ ಹಬ್ಬ ಎನ್ನುತ್ತಾರಾದರು,ಎಲ್ಲೆಡೆ ಹಿಂದು ಮುಸ್ಲೀಂ ಧರ್ಮಿಯರು ಸೇರಿ ಸೌಹಾರ್ದತೆಯಿಂದ ಆಚರಿಸುವ ಹಬ್ಬವಾಗಿದೆ ಎಂದು ಪೊಲೀಸ್ ಇನಸ್ಪೇಕ್ಟರ್ ಆನಂದ ವಾಗಮೊಡೆ ತಿಳಿಸಿದರು.
ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಮೋಹರಂ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇದೇ ತಿಂಗಳ 14ನೇ ತಾರಿಕಿನಿಂದ ಆರಂಭಗೊಂಡು 17ನೇ ತಾರಿಕಿನವರೆಗೆ ನಡೆಯುವ ಮೋಹರಂ ಹಬ್ಬದ ಕುರಿತಾದ ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಎಲ್ಲರು ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸುವುದಾಗಿ ಹೇಳಿಕೆ ನೀಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ಅದರಂತೆ ಕೆಲವು ಕಡೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲು ತಿಳಿಸಿರುವಿರಿ,ಪೊಲೀಸ್ ಇಲಾಖೆಯಿಂದ ಎಲ್ಲೆಡೆ ಅಗತ್ಯ ಬಂದೋಬಸ್ತ್ ಮಾಡಲಾಗುವುದು.ಆದರೆ ಎಲ್ಲರು ಕೂಡ ಪರಸ್ಪರ ಒಂದಾಗಿ ಮೋಹರಂ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.
ಅಲ್ಲದೆ ಇನ್ನು ಕುಂಬಾರಪೇಟೆ,ತಿಂಥಣಿ,ದಖನಿ ಮೊಹಲ್ಲಾ ಸೇರಿ ಅಗತ್ಯವಿರುವ ಕಡೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಯಾರಾದರು ಅಲೈ ಆಡುವ ಸಂದರ್ಭದಲ್ಲಿ ಕಾಲು ತುಳಿದರೆ ಎನ್ನುವ ಕಾರಣಕ್ಕೆ,ಪರಸ್ಪರ ಮುಟ್ಟಿದರು ಎನ್ನುವ ಕಾರಣಕ್ಕೆ ಯಾರೂ ಗಲಾಟೆಗಳನ್ನು ಮಾಡಬೇಡಿ ಎಂದರು.
ಇದೇ ಸಂದರ್ಭದಲ್ಲಿ ಕೆಲವರು ಮಾತನಾಡಿ,ದೇವರ ಸವಾರಿ ಸಂದರ್ಭದಲ್ಲಿ ಒಂರು ದೇವರ ಸವಾರಿ ನಂತರ ಮತ್ತೊಂದು ದೇವರ ಸವಾರಿಗೆ ಅವಕಾಶ ಮಾಡಿಕೊಟ್ಟಲ್ಲಿ ಯಾವುದೇ ಗೊಂದಲವಿಲ್ಲದೆ ದೇವರ ದಫನ್ ಮುಗಿಯಲಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪಿಎಸ್‍ಐ ಗಳಾದ ಹಣಮಂತಪ್ಪ ಸಿದ್ದಾಪುರ,ಸಿದ್ದಣ್ಣ ಯಡ್ರಾಮಿ ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ಸಂಘ ಸಂಸ್ಥೆಗಳ ಮುಖಂಡರಾದ ಮಾಳಪ್ಪ ಕಿರದಹಳ್ಳಿ,ಉಸ್ತಾದ ವಜಾಹತ್ ಹುಸೇನ್,ಶಿವಲಿಂಗ ಹಸನಾಪುರ,ದಾನಪ್ಪ ಕಡಿಮನಿ,ಮುಬೀನ್ ದಖನಿ, ಖಾಜಾ ಅಜ್ಮೀರ್ ಸೇರಿದಂತೆ ಅನೇಕರು ಮಾತನಾಡಿದರು.
ಸಭೆಯಲ್ಲಿ ರಾಮಣ್ಣ ಶೆಳ್ಳಗಿ,ಅಯ್ಯಪ್ಪ,ಧರ್ಮಣ್ಣ,ಬಸವರಾಜ ದೊಡ್ಮನಿ,ಮಹೇಶ ಯಾದಗಿರಿ,ತಿಪ್ಪಣ್ಣ ಹೂಗಾರ,ಮಲ್ಲಪ್ಪ ಶೆಳ್ಳಗಿ,ಮೊನಪ್ಪ,ತಿಪ್ಪಣ್ಣ ಶೆಳ್ಳಗಿ,ಭೀಮರಾಯ ಮಂಗಳೂರ,ಶೇಖರ ಮಂಗಳೂರ,ರಾಜು ಬಡಿಗೇರ,ಶಾಂತಪ್ಪ ತಳವಾರಗೇರ,ಶರಣು ತಳವಾರಗೇರ, ಅಂಬಾಜಿ, ಅಭಿಷೇಕ,ಅಕ್ಷಯಕುಮಾರ,ಮೌನೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…