ಬಿಸಿ ಬಿಸಿ ಸುದ್ದಿ

ತಪ್ಪುಗಳಿಂದ ಎಚ್ಚೆತ್ತುಕೊಳ್ಳದ ಸುಂಬಡ ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲ

ಯಡ್ರಾಮಿ: ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಕೊಳ್ಳುವ ಯಡ್ರಾಮಿ ತಾಲೂಕಿನ ಸುಂಬಡ ಇಂದಿರಾಗಾಂಧಿ ವಸತಿ ಶಾಲೆ ಬುದವಾರದಂದು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಕಳೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಕೊನೆಯ ಸ್ಥಾನ ಪಡೆದುಕೊಂಡಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಳೆದ ಒಂದು ವಾರದ ಹಿಂದೆ ವಿದ್ಯಾರ್ಥಿ ನಾಪತ್ತೆಯಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದಲ್ಲದೆ ಶಾಲೆಯಲ್ಲಿ ನೀರಿನ ಕೊರತೆಯಿಂದ ವಿದ್ಯಾರ್ಥಿಗಳಿಗೆ ದಿನಿಕ್ಕೆರೆಡು ನೀರಿನ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಇವೆಲ್ಲ ಅವ್ಯವಸ್ಥೆಗಳ ಮದ್ಯೆ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಪಾಲಕರ ಆಕ್ರೋಷಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಸರಕಾರಿ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಶಾಲಾ ಅವಧಿಯಲ್ಲಿ ನಡೆಸುವಂತಿಲ್ಲ. ಒಂದು ವೇಳೆ ನಡೆಸುವ ಸಂದರ್ಭ ಬಂದರೆ ಮೇಲಾಧಿಕಾರಿಗಳ ಅನುಮತಿ ಪತ್ರ ತೆಗೆದುಕೊಳ್ಳಬೇಕು.

ಇಂದಿರಾಗಾಂಧಿ ವಸತಿ ಶಾಲೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವುದರಿಂದ ಜಿಲ್ಲಾ ಜಂಟಿ ನಿರ್ದೇಶಕರ ಅನುಮತಿ ತೆಗೆದುಕೊಳ್ಳಬೇಕು. ಆದರೆ ಯಾವುದೇ ಅನುಮತಿ ತೆಗೆದುಕೊಳ್ಳದೆ ಪ್ರಾಂಶುಪಾಲರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಅದಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಜನಕ್ಕೆ ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇರುವ ದವಸ ಧಾನ್ಯಗಳನ್ನು ಬಳಸಿ ಅಡುಗೆ ಮಾಡಿಸಿ ಉಣಬಡಿಸಿದ್ದಾರೆ. ಹೀಗಾಗಿ ಶಾಲೆಯ ಆಡಳಿತಕ್ಕೆ ತಾವು ಮಾಡಿದ್ದೇ ಸರಿ ಎನ್ನುವಂತಾಗಿದೆ. ಶಾಲೆಗೆ ಮೇಲಾಧಿಕಾರಿಗಳ ಬೇಟಿ ಅಪರೂಪ ಎನ್ನುವಂತಾಗಿದ್ದು, ಇದರಿಂದಾಗಿಯೇ ಶಾಲಾ ವ್ಯವಸ್ಥೆ ಹಳ್ಳ ಹಿಡಿಯುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾಲಾ ಸ್ವಚ್ಚತಾ ಸಿಬ್ಬಂದಿಯಿಂದ ಗುಂಡಾವರ್ತನೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇಂದಿರಾಗಾಂಧಿ ವಸತಿ ಶಾಲೆಯ ಸಹಯೋಗದಲ್ಲಿ ಬುಧವಾರ ನಡೆದ ಡಾ.ಫ.ಗು ಹಳಕಟ್ಟಿ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಪತ್ರಕರ್ತರು ಶಾಲೆಯ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಪರಿಷೀಲಿಸುವ ವೇಳೆ ಶಾಲಾ ಸ್ವಚ್ಚತಾ ಸಿಬ್ಬಂದಿ ಅಲ್ಲಿರುವ ಪತ್ರಕರ್ತರನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ ಅನುಮತಿ ನೀಡುವುದಿಲ್ಲ ಎಂದು ಜಗಳಕ್ಕೆ ಮುಂದಾಗಿದ್ದಾನೆ. ಇದಲ್ಲದೆ ಪ್ರಕರಣ ನಡೆಯುತ್ತಿರುವ ವೇಳೆ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯ ಪಾಲಕ ಶಾಲೆಯಲ್ಲಿಯೇ ಇದ್ದರೂ ಸಹ ಸಿಬ್ಬಂದಿಯನ್ನು ತಡೆಯಲು ಮುಂದಾಗಿಲ್ಲ. ಇದರ ಹಿಂದೆ ಅವರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶಾಲೆಯ ಸಿಬ್ಬಂದಿ ಕುಡಿದ ಅಮಲಿನಲ್ಲಿ ಇರಬಹುದು ಎಂದು ತಿಳಿದು ಬಂದಿದ್ದು, ಹೀಗಾದರೆ ಶಾಲೆಯಲ್ಲಿ ವಾಸಿಸುವ ಮಕ್ಕಳ ಗತಿ ಏನು ಎಂಬ ಪ್ರಶ್ನೆ ಮೂಡುವಂತಾಗಿದೆ. ಈ ಕುರಿತು ಮೇಲಾಧಿಕಾರಿಗಳು ಶಾಲೆಗೆ ಬೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಶಾಲೆಯ ಸಿಬ್ಬಂದಿ ಪತ್ರಕರ್ತರಿಗೆ ಅವಾಚ್ಚ ಶಬ್ದಗಳಿಂದ ನಿಂದಿಸಿರುವದು ಗಮನಕ್ಕೆ ಬಂದಿದೆ. ಈ ಘಟನೆಯಲ್ಲಿ ಭಾಗಿಯಾದವ ಹೊರ ಸಂಪನ್ಮೂಲ ಸಿಬ್ಬಂದಿಯಾಗಿರುವ ಕಾರಣ ಏಜೆನ್ಸಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ. – ಮಡಿವಾಳಪ್ಪ ದುದ್ದಣಗಿ, ಪ್ರಾಂಶುಪಾಲ, ಇಂದಿರಾಗಾಂಧಿ ವಸತಿ ಶಾಲೆ ಸುಂಬಡ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago