ಕಲಬುರಗಿ: ಇಂದು ರೈತ-ಕೃಷಿಕಾರ್ಮಿಕರ ಸಂಘಟನೆ ಕಲಬುರಗಿ ಜಿಲ್ಲಾ ಸಮಿತಿಯಿಂದ ವತಿಯಿಂದ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ನಿಯೋಗ ಭೇಟಿ ನೀಡಿ ಬೋಸ್ಗಾ ಕೆರೆಯ ಒತ್ತುವರಿಯನ್ನು ನಿಲ್ಲಿಸಲು ಹಾಗೂ ಕೆರೆಗೆ ನೀರು ತುಂಬಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಭೀಕರವಾದ ಬರಗಾಲವಿದ್ದುದ್ದರಿಂದ ಜನರು ಹಾಗೂ ದನಕರುಗಳು ನೀರಿಗಾಗಿ ಅಲೆಯುವಂತಾಗಿದೆ. ಗ್ರಾಮಗಳಲ್ಲಿರುವ ಬಾವಿಗಳು ಬತ್ತಿಹೋಗಿವೆ. ಬೋರ್‌ವೆಲ್‌ಗಳು ಕೆಟ್ಟು ಹೋಗಿವೆ. ಸುಮಾರು ೮೦೦ ಎಕರೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿಯೇ ದೊಡ್ಡ ಕೆರೆ ಎನಿಸಿಕೊಂಡಿರುವ ಬೋಸ್ಗಾ ಕೆರೆಯಿಂದ ನೀರು ಸರಬರಾಜು ಆಗುತ್ತಿಲ್ಲ. ಅಲ್ಲಿಯೂ ಒಂದೆಡೆ ನೀರು ಬತ್ತಿ ಹೋಗುತ್ತಿದ್ದರೆ ಇನ್ನೊಂದೆಡೆ, ಅಳಿದುಳಿದ ನೀರನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸದೇ ಖಾಸಗೀ ಅವಶ್ಯಕತೆಗಳಿಗೆ ಬಳಸಲಾಗುತ್ತಿದ್ದು ಇದೊಂದು ಘೋರ ಅಕ್ರಮ ಬಳಕೆಯಾಗಿದೆ. ಆದ್ದರಿಂದ ಈ ಕೆರೆಯ ನೀರಿನ ಅಕ್ರಮ ಬಳಕೆಯ ಮೇಲೆ ಜಿಲ್ಲಾಡಳಿತವು ಸರಿಯಾದ ಗಮನಹರಿಸಿ ಸಾರ್ವಜನಿಕ ಉದ್ದೇಶದಿಂದ ನೀರು ಭೀಮಳ್ಳಿ ಗ್ರಾಮವನ್ನು ಒಳಗೊಂಡಂತೆ ಸುತ್ತಲೂ ಇರುವ ಗ್ರಾಮಗಳಿಗೂ ಪೂರೈಕೆಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬೆಣ್ಣೆತೊರಾ ಡ್ಯಾಂ ನಿಂದ ನೀರನ್ನು ತುಂಬಿಸಿದಲ್ಲಿ ಬೋಸ್ಗಾ, ಭೀಮಳ್ಳಿ, ಸೈಯ್ಯದ್ ಚಿಂಚೋಳಿ, ಜಂಬಗಾ, ಅಷ್ಟಗಾ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಕೃಷಿಗೂ ಮತ್ತು ಕುಡಿಯಲೂ ಸಹಾಯಕವಾಗುತ್ತದೆ. ಅಲ್ಲದೆ ಅಂತರ್ಜಲದ ಹೆಚ್ಚಳವೂ ಆಗುತ್ತದೆ. ಈಗ ಈ ಕೆರೆಯು ಬಹುತೇಕವಾಗಿ ಜಲರಹಿತವಾಗುತ್ತಿದೆ. ಇತ್ತೀಚೆಗೆ ಬಂದಿರುವ ಮಳೆಯಿಂದ ಶೇಖರಣೆಗೊಂಡಿರುವ ನೀರನ್ನು ಬೇರೆ ಉದ್ದೇಶಕ್ಕಾಗಿ ಹರಿಸಲಾಗುತ್ತಿದೆ. ಮತ್ತೊಂದೆಡೆ ಕೆರೆಯ ಒಣಗಿರುವ ಭೂಮಿಯಲ್ಲಿಯೇ ಒತ್ತುವರಿ ಮಾಡಲಾಗಿದೆ. ಇಂತಹ ದುರ್ಬಳಕೆಯಿಂದ ಕೆರೆಯನ್ನೂ ಹಾಗೂ ಸುತ್ತಲೂ ಇರುವ ಗ್ರಾಮದ ಜನತೆಯನ್ನೂ ಕಾಪಾಡಬೇಕಾದರೆ ಈ ಕೂಡಲೇ ವರ್ಷಗಳಿಂದಲೂ ಕೆರೆಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಸಿ ಕೆರೆಯನ್ನು ತುಂಬಿಸುವ ಕೆಸ ನಡೆಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಭೀಕರ ಬರಗಾಲಕ್ಕೆ ತುತ್ತಾಗಿರುವ ಗ್ರಾಮಕ್ಕೆ ಒಂದು ರೀತಿಯಲ್ಲಿ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಹೀಗಾಗಿ ಜಿಲ್ಲಾಡಳಿತವು ಇದರ ಕುರಿತು ಸೂಕ್ತ ಕ್ರಮ ಜರುಗಿಸುವುದು ಅವಶ್ಯಕವಾಗಿದೆ.
ಒಂದು ವೇಳೆ ಜಿಲ್ಲಾಡಳಿತವು ಇದರ ಕುರಿತು ನಿರ್ಲಕ್ಷ್ಯ ಮಾಡಿದರೆ ಜನಜೀವನಕ್ಕೆ ಆಧಾರವಾಗಿರುವ ಭಾರಿ ನೈಸರ್ಗಿಕ ಸಂಪನ್ಮೂಲದ ದುರ್ಬಳಕೆ ಆಗುವುದರಲ್ಲಿ ಸಂದೇಹವಿಲ್ಲ. ಹಾಗೂ ನಾವು ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್.ಕೆ.ಎಸ್.) ನ ಕಲಬುರಗಿ ಜಿಲ್ಲಾ ಸಮಿತಿಯಿಂದ ಸಾವಿರಾರು ಗ್ರಾಮಸ್ಥರನ್ನು ಸಂಘಟಿಸಿ ಉಗ್ರ ಹೋರಾಟವನ್ನು ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಮಹೇಶ್ ಎಸ್.ಬಿ. ಯವರ ನೇತೃತ್ವದಲ್ಲಿ ಗ್ರಾಮಸ್ಥರಾದ ನೀಲಕಂಠ ಮಂಗಮಳಿ, ಇಸ್ಮಾಯಿಲ್ ಮುಲಗೆ, ಬಸವರಾಜ ಗುತ್ತೇದಾರ, ರುಕ್ಮಯ್ಯ ಗುತ್ತೇದಾರ, ಅಶೋಕ ಗುತ್ತೇದರ, ಸಂತೋಷ ಹಕೀಮ, ಜಗನ್ನಾಥ ಭಾಗೋಡಿ, ಅಲ್ಲಾಭಕ್ಷ ಗೌಳಿ, ವಿಶ್ವನಾಥ ಭೀಮಳ್ಳಿಯವರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…