ಅಫಜಲಪುರ; ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ

ಅಫಜಲಪುರ; ತಾಲುಕಿನ ಮಾಶಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವಂತಹ ನಂದರಗಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಪ್ರಾಂಗಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿಶೇಷ ಸಮಗ್ರ ಆರೋಗ್ಯ ಚಿಕಿತ್ಸೆ ಶಿಬಿರ ಜರುಗಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಚೇತನ ದುಮಾಲೆ ಅವರು ಮಾತಾಡತ್ತಾ ವಿಶ್ವ ಜನಸಂಖ್ಯಾ ದಿನವನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಹೊಂದಿದ್ದು ಭಾರತದಲ್ಲಿ ಬಾಲ್ಯ ವಿವಾಹವನ್ನು ನಿಯಂತ್ರಿಸಬೇಕು ಇದರಿಂದ ಮಕ್ಕಳ ಜನನ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಅಗುತ್ತದೆ. ಹಾಗೆ ಈ ಒಂದು ಸಂಧರ್ಭದಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಹಾಗೂ ದಂತ ಓರಲ್ ಹೆಲ್ತ್ ಎಜುಕೇಶನ್ , ಎನ್ ಸಿ ಡಿ ಯ ಬಿಪಿ – ಮಧುಮೇಹ ಚಿಕಿತ್ಸೆ ಮತ್ತು ಬ್ಲಡ್ ಡೊನೇಷನ್ ಕ್ಯಾಂಪ್ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಮಾಡುವುದರಿಂದ ಉತ್ತಮ ಆರೋಗ್ಯವಂತ ಜೀವನ ಸಾಗಿಸಬಹುದಾಗಿದೆ ಎಂದು ಹೇಳಿದರು.

ಮಾಶಳನ ನಂದರಗಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈರಯ್ಯ ಹಿರೇಮಠ ಅವರು ಹದಿ ಹರೆಯದ ಮಕ್ಕಳು ಗುಟಕಾ, ಸಿಗರೆಟ್. ಇತ್ಯಾದಿ ಚಟಗಳಿಗೆ ಬಲಿಯಾಗುತ್ತರೆ ಅಂತಹವರನ್ನು ಕಂಡು ಹಿಡಿದು ಅವರಿಗೆ ತಿಳುವಳಿಕೆ ಮೂಡಿಸಿ ಅಂತಹಾ ಸಮಸ್ಯೆಯಿಂದ ಹೊರ ತರಬೇಕು ಹಾಗೆ ಹೊರ ಬರುವಂತೆ ಒಂದು ಒಳ್ಳೆಯ ಚಾಲೆಂಜ್‌ ಆಗಿರುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ದಂತ ವೈದ್ಯಾಧಿಕಾರಿಗಳು ಡಾ. ಆರಾಧನ ರಾಠೋಡ ಸ.ಅವರು ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ತುಂಬಾ ಇರುತ್ತದೆ ಏಕೆಂದರೆ ಚಾಕಲೇಟ್ , ಬಿಸ್ಕಟ್, ಮುಂತಾದ ಪದಾರ್ಥಗಳು ತಿನ್ನುತಾರೆ ನಂತರ ನೀರು ಕುಡಿಯದೆ ಇದ್ದಾಗ ಮಕ್ಕಳ ಹಲ್ಲಿನಲ್ಲಿ ಹುಳುಕು, ತುತು, ಬಾಯಿ ಕ್ಯಾನ್ಸರ್, ಸಮಸ್ಯೆ ಉಂಟಾಗುತ್ತದೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ದಿನಕ್ಕೆ ಬೆಳಗ್ಗೆ ಮತ್ತು ರಾತ್ರಿ ಎರಡು ವೇಳೆ ಹಲ್ಲು ಉಜ್ಜಬೇಕು ಹೆಚ್ಚಾಗಿ ನೀರು ಕುಡಿಯಬೇಕೆಂದು ಗ್ರಾಮ ಜನರಿಗೆ ಹಾಗೂ ಮಕ್ಕಳಿಗೆ ಸಲಹೆ ನೀಡಿದರು.

ನಂತರ ನಂದರಗಾ ಗ್ರಾಮದ ಮುಖ್ಯೋಪಾಧ್ಯಾಯರು ಯಲ್ಲಪ್ಪ ಚಿಂಚೋಳ್ಳಿ, ಅವರು ವೇದಿಕೆ ಮೇಲೆ ಮಾತನಾಡಿದರು.

ಈ ಶಿಬಿರದಲ್ಲಿ ಎಲ್ಲರಿಗೂ ಸಮರ್ಪಕವಾದ ಚಿಕಿತ್ಸೆ ನೀಡಿ , ಬ್ಲಡ್ ಡೋನೆಷನ್ ಕ್ಯಾಂಪ್ ಮೂಲಕ ರಕ್ತ ಸಂಗ್ರಹಿಸಲಾಯಿತು ಅದೆ ರೀತಿ .ಸಮಾಲೋಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ ಅಫಜಲಪುರ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ, ಸಮುದಾಯ ಆರೊಗ್ಯಾಧಿಕಾರಿ ಶಾಂತಪ್ಪ ತಳವಾರ. ಐ ಸಿ ಟಿ ಸಿ ಸಮಾಲೋಚಕ ರವಿಕುಮಾರ್ ಬುರ್ಲೆ. ಎನ್ ಸಿ ಡಿ. ಸಮಾಲೋಚಕಿ ಸುನೀತಾ ಕಂಬಾಳಿಮಠ. ಆರ್ ಕೆ ಎಸ್ ಕೆ. ಸಮಾಲೋಚಕಿ ಸುಜಾತ ಹಿರೇಮಠ. ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಲಕ್ಷ್ಮಣ್ ಬಂಕಲಗಾ. ಕಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಶರಣಯ್ಯ ಸಾಲಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗುರುಬಾಯಿ ಜಮಾದರ, ಅಫಜಲಪುರ ಲ್ಯಾಬ್ ಅಫಿಸರ್ ಪ್ರೀತಿ ಜಾವಳಿ. ಆಶಾ ಕಾರ್ಯಕರ್ತೆರು ಈ ಒಂದು ಶಿಬಿರದಲ್ಲಿ ಗ್ರಾಮದ ಜನರು ಹಾಗೂ ಶಾಲಾ ಮಕ್ಕಳಿಗೆ ತಪಾಸಣೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿ ಗೊಳಿಸಲಾಯಿತು.

emedialine

Recent Posts

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…

3 hours ago

ಭ್ರಷ್ಟಾಚಾರ ರಹಿತ ವಿವಿಗೆ ಆದ್ಯತೆ: ರಾಘವೇಂದ್ರ ಭೈರಪ್ಪ

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…

3 hours ago

ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…

3 hours ago

ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…

3 hours ago

ಸೇಡಂ: ನೀರಿನಲ್ಲಿ ಮುಳುಗಿ ಮೃತ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ನೀಡಿ

ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ  ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 3 ಎಕ್ಕರೆ …

4 hours ago

ಟಿಎಪಿಸಿಎಂ ಅಧ್ಯಕ್ಷರಾಗಿ ಪಾಟೀಲ್ ಅವಿರೋಧ ಆಯ್ಕೆ

ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420