ಬಿಸಿ ಬಿಸಿ ಸುದ್ದಿ

ಕಥಾ ಲೇಖಕರಿಗೆ ಸೂಕ್ಷ್ಮ ಸಂವೇದನಾ ಮನಸ್ಸಿರಬೇಕು: ಪ್ರೊ. ಶಿವಗಂಗಾ ರುಮ್ಮಾ

ಕಲಬುರಗಿ : ಕಥೆ ರಚನೆ ಮತ್ತು ನಿರೂಪಣೆ ಶೈಲಿಯಲ್ಲಿ ಕಥೆಗಾರ ಎಚ್ಚರವಹಿಸಬೇಕು. ಕಥೆ ಕಟ್ಟುವ ಸನ್ನಿವೇಶಗಳಲ್ಲಿ ಕಥಾ ಹಂದರದ ತಿರುಳು ಬಹಳ ಮುಖ್ಯವೇ ವಿನಃ ಕಥೆಯ ಸಂಗತಿಗಳನ್ನು ಜೋಡಿಸುವುದು ಮುಖ್ಯವಲ್ಲ. ಆದರೆ, ಗಂಭೀರ ವಿಷಯಗಳ ಕುರಿತು ಕಥೆ ಬರೆಯುವಾಗ ಲೇಖಕರಿಗೆ ಸೂಕ್ಷ್ಮ ಪ್ರಜ್ಞೆ ಹಾಗೂ ಸಂವೇದನೆ ಮನಸ್ಸು ಬಹಳ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಲೇಖಕ ಸಂಗನಗೌಡ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮ ಅಭಿಪ್ರಾಯಪಟ್ಟರು.

ಕುಸನೂರು ರಸ್ತೆ ಜಿಡಿಎ ಲೇಔಟ್‍ನ ಜನರಂಗ ವೇದಿಕೆಯಲ್ಲಿ ಆಯೋಜಿಸಿದ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಗನಗೌಡ ಹಿರೇಗೌಡ ಅವರ ‘ಮೊಡಚಿಗಳು’’ ಕಥಾ ಸಂಕಲನ ಬಿಡುಗೊಳಿಸಿ ಮಾತನಾಡಿದರು.

ಸಂಗನಗೌಡ ಹಿರೇಗೌಡ ಅವರ ”ಮೊಡಚಿಗಳು’ ಕಥಾ ಸಂಕಲನದಲ್ಲಿ ಒಳಗೊಂಡಿರುವ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ವಿಚಾರಗಳಿವೆ. ಕಥೆಯಲ್ಲಿ ಬಳಸಿರುವ ಭಾಷಾ ತಂತ್ರ ಮತ್ತು ನಾಟಕೀಯ ಶೈಲಿಯ ನಿರೂಪಣೆ ಅತ್ಯುತ್ತಮವಾಗಿದೆ. ಅದಕ್ಕೆ ಲೇಖಕರು ಬೆಳೆದಿರುವ ಪರಿಸರ ಅನುಭವಿಸಿದ ಅನುಭವಗಳು ಮುಖ್ಯವಾಗಿವೆ. ದೇಶಿ ಸಂಸ್ಕøತಿ ಮತ್ತು ವಾಸ್ತವ ಪರಿಸರದ ಪ್ರಭಾವ ಕೂಡ ಮುಖ್ಯವಾಗುತ್ತದೆ.

ಕಥೆಗಳಲ್ಲಿ ಭಿನ್ನ ಪಾತ್ರಗಳು ನೈಜ ಬದುಕಿನ ತಾಕಲಾಟಗಳನ್ನು ಮುಚ್ಚುಮರೆಯಿಲ್ಲದೆ, ಎಚುಪೇಚಿಲ್ಲದೆ ಬಳಸಿರುವುದು ಕಥೆಗೆ ಮೆರುಗು ತಂದಿದೆ. ಕಥೆಗಳಲ್ಲಿ ಬೈಗುಳ ಪದಗಳನ್ನು ಬಳಸುವಾಗ ಸ್ತ್ರೀಪ್ರದಾನ ಪಾತ್ರಗಳು ಸೂಕ್ಷ್ಮ ಸಂವೇದನೆ ಮತ್ತು ಅವುಗಳ ಕಥಾ ಸಾಹಿತ್ಯದ ಗ್ರಹಿಕಾ ಅನುಭವ, ಪಾಲನೆ ಮತ್ತು ಪೋಷಣೆ ಅವಶ್ಯಕತೆಗೆ ತಕ್ಕಂತೆ ಬಳಸಬೇಕೆ ವಿನಃ ಲೇಖಕ ಅನಗತ್ಯವಾಗಿ ಬಳಸಿದರೆ ಲೇಖಕನ ಕಥಾ ಕುಸರಿ ಕೆಲಸಕ್ಕೆ ಹಿನ್ನೆಡೆಯಾಗಬಹುದು ಎಂದರು.

ಕಥೆಗಾರ ಪ್ರೊ. ಕೆ. ಎಸ್. ನಾಯಕ ಮುಖ್ಯ ಅತಿಥಿಯಾಗಿ ಮಾತನಾಡಿ ಸಾಹಿತ್ಯದ ಪ್ರಕಾರಗಳಲ್ಲಿ ಜನಪದ ಭಾಷೆ ಬಳಕೆಯಾಗುತ್ತಿದೆ. ಸಾಹಿತ್ಯ ಮತ್ತು ಕಥೆಗೆ ಅಗತ್ಯ ಪದಗಳನ್ನು ಬಳಸಿಕೊಳ್ಳಬೇಕು. ಏಕೆಂದರೆ ಸಾಹಿತ್ಯದಲ್ಲಿ ಭಾಷೆ ಗಟ್ಟಿಯಾಗಿದ್ದರೆ ಮಾತ್ರ ಸಾಹಿತ್ಯ ಜನಪ್ರಿಯವಾಗುತ್ತದೆ. ಸಾಹಿತ್ಯದ ಕಥಾ ಪ್ರಕಾರದಲ್ಲಿ ಯಾವ ಸಂದರ್ಭದಲ್ಲಿ ಭಾಷೆ, ಪದ ಮತ್ತು ನುಡಿಗಟ್ಟುಗಳನ್ನು ಯಾವ ಸನ್ನಿವೇಶಗಳಿಗೆ ತೂಕ ಬರುವಂತೆ ಹೇಗೆ ಬಳಸಬೇಕು ಎಂಬುದು ಶ್ರೇಷ್ಠ ಸಾಹಿತ್ಯ ರಚನೆಗೆ ಇಂಬುಗೊಡುತ್ತದೆ. ಕಥೆಗಳಲ್ಲಿನ ಸಾರದ ಮನೋಜ್ಞತೆ, ಉತ್ಕಟತೆ ಮತ್ತು ವಿಸ್ಮಯಗಳು ಕಥೆ ಓದುಗನಲ್ಲಿ ಕುತೂಹಲ ಮೂಡಿಸುತ್ತವೆ ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಸಾಹಿತಿ ಡಾ. ಅರುಣ ಜೋಳದ ಕೂಡಲ್ಗಿ ಪುಸ್ತಕ ಕುರಿತು ಮಾತನಾಡಿ ಸಂಗನಗೌಡ ಹಿರೇಗೌಡ ಅವರ ‘ಮೊಡಚಿಗಳು’ ಕಥಾ ಸಂಕಲನದಲ್ಲಿ ಅವರು ಬಿಂಬಿಸಿರುವ ಸನ್ನಿವೇಶ, ಪಾತ್ರ ಸೃಷ್ಠಿ ಕಲ್ಯಾಣ ಕರ್ನಾಟಕ ನೆಲದ ಸೊಗಡು ಹೊಸ ತಲೆಮಾರಿನ ಲೇಖಕರ ಮೇಲೆ ಪ್ರಭಾವ ಬೀರುವಂತಿದೆ. ಅದರಿಂದ ಯುವ ಲೇಖಕರು ಹೊಸ ಆಲೋಚನೆ, ತಂತ್ರ ಮತ್ತು ಆಧುನೀಕತೆ ಸಂಗತಿಗಳನ್ನು ಕಥೆಗಳಲ್ಲಿ ಬಳಸುತ್ತಿರುವುದರಿಂದ ಈ ಭಾಗದ ಹೊಸ ತಲೆಮಾರಿನ ಲೇಖಕರು ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಲಬುರಗಿ ಜನರಂಗ ವೇದಿಕೆ ಅಧ್ಯಕ್ಷ ಹಾಗೂ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಕಾಲೀನ ವಿಷಯಗಳ ಕಡೆಗೆ ಸಮಾಜಮುಖಿ ಚಿಂತನೆ ಮೂಡಿಸುವ ವಿಚಾರಗಳು ಮೊಡಚಿಗಳು ಕಥಾ ಸಂಕಲದಲ್ಲಿವೆ. ಅದರಲ್ಲೂ ತತ್ವಪದಕಾರರ ನೆಲದಲ್ಲಿ ಅನುಭವ, ಅನುಭಾವ, ದೇಶಿ ಪದ ಮತ್ತು ಭಾಷೆ ಬಳಕೆಯಿಂದ ಕಥೆಗಳಿಗೆ ಹೊಸ ಮೆರಗು ಬಂದಿದೆ. ಈ ಭಾಗದ ಸಂಗನಗೌಡ ಹಿರೇಗೌಡ ಅವರು ಮೊಡಚಿಗಳು ಕಥಾ ಸಂಕಲನದ ಮೂಲಕ ನೆಲದ ಭಾಷೆಯ ಕಥೆಗಾರರಾಗಿ ಬೆಳೆಯುವ ಸಾಧ್ಯತೆ ಎದ್ದು ಕಾಣುತ್ತದೆ ಎಂದರು.

ಲೇಖಕ ಸಂಗನಗೌಡ ಹಿರೇಗೌಡ ಮಾತನಾಡಿ ತಮ್ಮ ಬಾಲ್ಯದ ಕಷ್ಟದ ಬದುಕನ್ನು ಅನುಭವಿಸಿ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು ತನ್ನ ಬೆಳವಣಿಗೆಗೆ ತೋರಿದ ಕಾಳಜಿಯನ್ನು ನೆನೆದು ಬಾವುಕರಾದರು. ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಮೊಡಚಿಗಳು ಕಥಾ ಸಂಕಲನದಲ್ಲಿ ಒಂಬತ್ತು ಕಥೆಗಳಿವೆ. ಇದರಲ್ಲಿರುವ ಕಥೆಗಳು ಹಲವು ಸಂಸ್ಥೆಗಳು ಕಥಾ ಸ್ಪರ್ಧೆಗಳಿಗೆ ಆಯ್ಕೆಯಾಗಿ ಬಹುಮಾನಗಳನ್ನು ಪಡೆದುಕೊಂಡಿರುವುದು ವಿಶೇಷ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ. ವಿಕ್ರಂ ವಿಸಾಜಿ, ಕಥೆಗಾರ್ತಿ ಶ್ರೀಮತಿ. ಸಂಧ್ಯಾ ಹೊನಗುಂಟಿಕರ್, ಹೆಚ್.ಎಸ್. ಬಸವಪ್ರಭು, ಪ್ರೊ. ಶೋಭಾ ಚಕ್ಕಿ, ಎಂ.ಬಿ. ಸಜ್ಜನ, ಮಲ್ಲಿಕಾರ್ಜುನ, ಈರಣ್ಣ ಜಮಾದಾರ್, ಬಸವರಾಜ ನೆಲೋಗಿ, ಎಸ್ .ಬಿ. ಉಪಳಾಂಕರ್, ಜನರಂಗ ವೇದಿಕೆ ಕಾರ್ಯದರ್ಶಿ ಶ್ರೀಮತಿ ಆಶಾ ಕಂಠಿ, ಸಾಗರ ಗಾಳೆ, ಆನಂದ ಗೊಪ್ಪಿ, ಮಹಮದ್ ಆಶಿಫ್, ಪ್ರದೀಪ್ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಖೀ ಸಂಸ್ಥೆಯ ಕವಿರಾಜ ಪ್ರಾರ್ಥಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago