ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸುರಪುರ ವಿದಾನಸಭೆಯ ನೂತನ ಶಾಸಕರಾದ ಸನ್ಮಾನ್ಯ ರಾಜಾ ವೇಣುಗೋಪಾಲ್ ನಾಯಕ ರವರು ಮುಖ್ಯಮಂತ್ರಿಗಳ ಅಮೃತ ನಗರೋತ್ತನ 4 ನೇ ಹಂತದ ಯೋಜನೆಯಲ್ಲಿ 20.00 ಲಕ್ಷ ರೂಗಳಲ್ಲಿ ಬೌದ್ಧಸ್ತುಪ ಗೇಟ್ ಮತ್ತು ಕಂಪೌಂಡ ಗಾರ್ಡನ ಒಳಗೊಂಡಂತೆ ಸರಕಾರದಿಂದ ಮಂಜೂರಾಗಿದ್ದ ಪ್ರಥಮ ಹಂತದ ಕಾಮಾಗಾರಿಯನ್ನು ಪ್ರಾರಂಭಿಸಲೂ ಭೂಮಿ ಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ವಂದನಾ ಕಾರ್ಯಾಕ್ರಮವನ್ನು ವಿಹಾರದ ಪೂಜ್ಯ ಸುಮನ ಅರಿಯಾ ಭಂತೇಜಿಯವರ ಸಾನಿದ್ಯದಲ್ಲಿ ನೆರವೇರಿಸಲಾಯಿತು ಹಾಗೂ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಪ್ರಥಮ ಬಾರಿಗೆ ವಿಹಾರಕ್ಕೆ ಆಗಮಿಸಿದ ಶಾಸಕ ರಾಜಾ ವೇಣುಗೊಪಾಲ ನಾಯಕರನ್ನು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಇನ್ನು ಅವಶ್ಯಕತೆಯಿರುವ ಅಭಿವೃದ್ದಿ ಕೆಲಸಗಳನ್ನು ಹಂತ ಹಂತವಾಗಿ ನೇರವೆರಿಸಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯಾದರ್ಶಿ ರಾಹುಲ್ ಹುಲಿಮನಿ ಸ್ವಾಗತಿಸಿ ನಿರೂಪಿಸಿರು.
ಈ ಕಾರ್ಯಾಕ್ರಮದಲ್ಲಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಾಜಾ ಪಿಡ್ಡನಾಯಕ ತಾತಾ, ನಗರ ಯೋಜನಾಪ್ರಾಧಿಕಾರದ ಅದ್ಯಕ್ಷರಾದ ಪ್ರಕಾಶ್ ಗುತ್ತೆದಾರ, ಟ್ರಸ್ಟಿನ ಅದ್ಯಕ್ಷ ವೆಂಕಟೇಶ ಹೊಸಮನಿ, ಮಲ್ಲಣ್ಣ ಸಾಹುಕಾರ, ನಗಸಭೆಯ ಸದಸ್ಯರುಗಳಾದ ಶಿವುಕುಮಾರ್ ಕಟ್ಟಿಮನಿ, ಮೌಲಾನಸಾಬ್ , ನಗರಸಭೆ ಅಧಿಕಾರಿಗಳಾದ ಎಇಇ ಶಾಂತಪ್ಪ ಎಸ್, ಇಂಜಿನಿಯರ್ ಮಹೇಶ್, ಮಲ್ಲಿಕಾರ್ಜುನ್ ಕುಂಬಾರಪೇಟ್, ಟ್ರಸ್ಟ್ ಉಪಾದ್ಯಕ್ಷರಾದ ನಾಗಣ್ಣ ಕಲ್ಲದೆವನಹಳ್ಳಿ, ಭೀಮರಾಯ ಸಿಂದಗೇರಿ, ಸದಸ್ಯರಾದ, ಮಾಳಪ್ಪ ಕಿರದಳ್ಳಿ ಮತ್ತು ಮಾನಪ್ಪ ಬಿಜಾಸಪೂರ, ಧರ್ಮರಾಜ್ ಬಡಿಗೇರ, ಜಗದೀಶ ಶಾಖನವರ್, ಪ್ರಶಾಂತ ಉಗ್ರಮ್, ನಾಗರಾಜ ಬೇವಿನಗಿಡ, ಅವಿನಾಶ ಹೊಸಮನಿ ಇತರರು ಬಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…