ಕಲಬುರಗಿ: ಈ ಬಾರಿಯ ವೃತ್ತಿಪರ ಲೆಕ್ಕಪರಿಶೋಧಕರ (ಚಾರ್ಟೆರ್ಡ್ ಅಕೌಂಟೆಂಟ್ ಸಿ ಎ) ಪರೀಕ್ಷೆಯಲ್ಲಿ ಕಲಬುರ್ಗಿಯ ಶ್ರೀನಿವಾಸ್ ಆಚಾರ್ಯ ಮತ್ತು ಲತಾ ಆಚಾರ್ಯ ಅವರ ಸುಪುತ್ರಿ ಸುಪ್ರಭಾ ಆಚಾರ್ಯ ತೇರ್ಗಡೆ ಹೊಂದಿ ಕಲಬುರಗಿಗೆ ಕೀರ್ತಿ ತಂದಿದ್ದಾರೆ.
ನಗರದ ಶ್ರೀರಾಮ ಮಂದಿರ ಮತ್ತು ಮೋಹನ್ ಲಾಡ್ಜ್ ನ ಶ್ರೀನಿವಾಸ ಆಚಾರ್ಯ ಅವರ ಪುತ್ರಿ ಸುಪ್ರಭಾ ಅವರು ಸೈಂಟ್ ಮೇರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಅಧ್ಯಯನ ಮಾಡಿ ನಂತರ ಪುಣೆಯಲ್ಲಿ ಐಪಿಪಿ ಕೋರ್ಸ್ ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿಎ ಸುಪ್ರಭಾ ಆಚಾರ್ಯ ಅವರ ಯಶಸ್ಸಿಗೆ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಉಡುಪಿಯ ರಮಣ ಆಚಾರ್ಯ, ಮಾಧವ ಆಚಾರ್ಯ ಕಲ್ಬುರ್ಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ನರಸಿಂಹ ಮೆಂಡನ್, ಶ್ರೀಮತಿ ಸವಿತಾ ಸತೀಶ್ ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ ಕಡೇಚೂರ್, ದಯಾನಂದ ಪೂಜಾರಿ, ಮೈಕಾನ, ಪ್ರಮೀಳಾ ಪೆರ್ಲ,ಆಶಾ ಮೋಹನ್ ಬೆಂಗಳೂರು,ಪದ್ಮನಾಭ ಭಟ್, ರಾಮ ಮಂದಿರದ ಮ್ಯಾನೇಜರ್ ನಿರಂಜನರಾವ್, ಗುರು ಆಚಾರ್ಯ, ರಾಮಕೃಷ್ಣ ಕೆದಿಲಾಯ, ಎಂ.ಎನ್.ಎಸ್ ಶಾಸ್ತ್ರಿ ಮತ್ತಿತರರು ಶುಭ ಕೋರಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…