ಕಲಬುರಗಿ: ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ದಿನೇಶ್ ಪಾಟೀಲ್ ಅಧ್ಯಕ್ಷರಾಗಿ ಮತ್ತು ಆನಂದ್ ದಂಡೋತಿ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.
ನಿಸ್ವಾರ್ಥ ಸೇವೆಯೇ ರೋಟರಿ ಕ್ಲಬ್ಬಿನ ಮುಖ್ಯ ಉದ್ದೇಶ. ರೋಟರಿಯು ಮಿತ್ರರನ್ನು ಗಳಿಸುವಲ್ಲಿ ಸಹಾಯ ಮಾಡುವ ಏಕೈಕ ಸಂಸ್ಥೆ. ಕುಟುಂಬದೊಡನೆ ಪತಿ ಪತ್ನಿಯರು ಒಂದಾಗಿ ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ಬಿನ ಮತ್ತೊಂದು ಉದ್ದೇಶ. ಜಗತ್ತಿನಲ್ಲಿ ಇಂದು ಪೋಲಿಯೋ ರೋಗ ಮುಕ್ತವಾಗಿರುವುದಕ್ಕೆ ರೋಟರಿಯೇ ಕಾರಣ ಎಂದು ರೋಟರಿ 3150 ಜಿಲ್ಲೆಯ ಫಾಸ್ಟ್ ಗವರ್ನರ್ ಆದ ಶ್ರೀ ಸಿ ಸುರೇಶ್ ಅವರು ಕಲಬುರಗಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಎಲ್ಲಮ್ಮ ದೇವಿ ಗುಡಿಯ ಹತ್ತಿರದ ಭಾವಸಾರ್ ಭವನದಲ್ಲಿ 13 ಜುಲೈ 2024 ರಂದು ಸಾಯಂಕಾಲ 5:30ಕ್ಕೆ ಆಯೋಜಿಸಲಾಗಿದ್ದ ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್, ರೊಟ್ರಾಕ್ಟ್ ಕ್ಲಬ್ ಆಫ್ ಗುಲ್ಬರ್ಗ ನಾರ್ತ್, ಇನ್ನರ್ವಿಲ್ ಕ್ಲಬ್ ಆಫ್ ಗುಲ್ಬರ್ಗ ನಾರ್ತ್, ಸಂಸ್ಥೆಗಳ ಇನ್ಸ್ತಲೇಶನ್ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡುತ್ತಿದ್ದರು.
ಐಪಿಡಿಜಿ ಮಾಣಿಕ್ ಪವಾರ, ಸುಷ್ಮಾ ಪತಂಗೆ ಪಿಡಿಜಿ ಡಾ. ಗೌತಮ್ ಜಹಗಿರಾದಾರ್, ಅಸಿಸ್ಟೆಂಟ್ ಗವರ್ನರ್ ಪ್ರಶಾಂತ್ ಮನ್ ಕರ್, ಉಮಾಗಚ್ಚಿನ್ಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಲಬುರಗಿಯ ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಸಂಸ್ಥೆಯ 2024 -25 ನೇ ಸಾಲಿನ ಅವಧಿಗೆ ದಿನೇಶ್ ಪಾಟೀಲ್ (ಅಧ್ಯಕ್ಷರಾಗಿ), ಆನಂದ ದಂಡೋತಿ (ಕಾರ್ಯದರ್ಶಿ)ಯಾಗಿ, ಸಂಪತ ಕಪಾಡಿಯ (ಕ್ಲಬ್ ಸಲಹೆಗಾರರು), ದೇವೇಂದ್ರ ಸಿಂಗ್ ಚೌಹಾಣ್ (ಕ್ಲಬ್ ತರಬೇತುದಾರರು), ರಾಮಚಂದ್ರ ಶಾನ್ಭೋಗ್ (ನಿರ್ಗಮಿತ ಅಧ್ಯಕ್ಷರು), ಡಾ. ಬಾಬುರಾವ್ ಸೇರಿಕಾರ್ (ನಿಯೋಜಿತ ಅಧ್ಯಕ್ಷರಾಗಿ), ಸುಹಾಸ್ ಕಣಗೇ (ಉಪಾಧ್ಯಕ್ಷ), ಶರಣು ಪಪ್ಪಾ( ಸಹ ಕಾರ್ಯದರ್ಶಿ), ಮಹಾದೇವ ಸಲಗರ್( ಖಜಾಂಚಿ), ಅಭಿಜಿತ್ ಪಡಶೆಟ್ಟಿ (ಸರ್ಜನ್ ಇಟ್ ಆರ್ಮ್ಸ್) ಶಿವಾನಂದ್ ಬೇಲೂರ (ಕ್ಲಬ್ ಅಡ್ಮಿನಿಸ್ಟ್ರೇಷನ್), ರಾಜೇಶ್ ಲಾಹೋಟಿ (ಮೆಂಬರ್ಶಿಪ್ ಡೆವಲಪ್ಮೆಂಟ್), ಡಾ.ಸಂಜೀವ್ ಗುಪ್ತ (ರೋಟರಿ ಫೌಂಡೇಶನ್), ಚೆನ್ನವೀರ ಲಿಂಗನ್ವಾಡಿ (ಸರ್ವಿಸ್ ಪ್ರಾಜೆಕ್ಟ್ ), ರೇವಣಸಿದ್ಧ ಮದ್ರಿ (ಪಬ್ಲಿಕ್ ರಿಲೇಶನ್), ನೌಶಾತ್ ಇರಾನಿ (ಲೆಟ್ರಸಿ), ಪ್ರಶಾಂತ್ ಚಿಟುಗುಪ್ಕಾರ್ (ಯೂಥ್ ಸರ್ವಿಸ್), ವೈಜನಾಥ ಪಾಟೀಲ್ (ವೊಕೇಶನಲ್ ಸರ್ವಿಸ್), ಶಾಮ್ ಸುಂದರ್ ಜೋಶಿ (ಪೋಲಿಯೋ ಪ್ಲಸ್ ), ಚಂದ್ರಶೇಖರ್ ಪಾಟೀಲ್ (ಕಾನ್ಫರೆನ್ಸ್ ಪ್ರಮೋಷನ್), ನಾರಾಯಣ ಜಹಾಗೀರ್ದಾರ್ (ಗ್ರಾಂಟಸ್ ಮತ್ತು ಪ್ರಾಜೆಕ್ಟ್ಸ್), ಶರಣಬಸಪ್ಪ ಪಾಟೀಲ್ (ವೆಬ್ ಕಮ್ಯುನಿಕೇಶನ್), ಸತೀಶ್ ಹಡಗಲಿಮಠ್( ಗ್ರೀಟಿಂಗ್ ಸೆಂಡ್ ಬುಲೆಟಿನ್), ಆನಂದ ಪಲ್ಲೋದ್ (ಸೆವೆನ್ ಏರಿಯಾ ಫೋಕಸ್), ಅರವಿಂದ ಗಂಟೋಜಿ( ಸ್ವಚ್ಛ ಭಾರತ) ನಿರ್ದೇಶಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ರೊಟ್ರಾಕ್ಟ್ ಕ್ಲಬ್ ಅಫ್ ಎಲೈಟ್ಸ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ಅನುದೀಪ್ ದಂಡೋತಿ ಅಧ್ಯಕ್ಷರಾಗಿ ಪ್ರಣಿತ ಪವಾರ್ ಕಾರ್ಯದರ್ಶಿಯಾಗಿ ಇನ್ನರ್ ವೀಲ್ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ಶ್ರೀಮತಿ ಸವಿತಾ ಹನಗೂಡಿಮಟ್, ಅಧ್ಯಕ್ಷರಾಗಿ ಶ್ರೀಮತಿ ನಮೃತ ಪತಾಟೆ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು ಎಂದು ನಿರ್ಗಮಿತ ಅಧ್ಯಕ್ಷರಾದ ರೊಟೇರಿಯನ್ ರಾಮ ಶಾನಭೋಗ ಮತ್ತು ನಿರ್ಗಮಿತ ಕಾರ್ಯದರ್ಶಿಯಾದ ರೋಟೇರಿಯನ್ ನೌಶಾದ್ ಇರಾನಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…