ಸುರಪುರ: ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯ ದಿಂದ ನಿಧನರಾದ ಕೊಡೇಕಲ್ ಹೋಬಳಿಯ ಪ್ರಮುಖ ಪತ್ರಿಕೆ ವರದಿಗಾರ ಹಾಗೂ ಶಹಾಪುರದ ಹಿರಿಯ ಪತ್ರಕರ್ತರ ವೆಂಕಟೇಶ ಮಾನು ಅವರ ಅಕಾಲಿಕ ನಿಧನಕ್ಕೆ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕ ದಿಂದ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ವ್ಯಕ್ತಪಡಿಸಲಾಯಿತು.
ಸಭೆಯ ಆರಂಭದಲ್ಲಿ ಇಬ್ಬರು ಪತ್ರಕರ್ತರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ,ಎರಡು ನಿಮಿಷಗಳ ಮೌನಾಚರಣೆ ಇಬ್ಬರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ಸಿದ್ದಯ್ಯ ಪಾಟೀಲ್ ಮಾತನಾಡಿ,ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ರಂಗದ ಸೇವೆ ಸಲ್ಲಿಸಿದ ಕೊಡೇಕಲ್ ಹೋಬಳಿಯ ಪತ್ರಕರ್ತರ ಶಿವಶರಣ ಕಟ್ಟಿಮನಿಯವರು ಒಬ್ಬ ಸೃಜನಶೀಲ ಪತ್ರಕರ್ತನಾಗಿ,ಸಮಾಜದ ಆಗು ಹೋಗುಗಳ ಬಗ್ಗೆ ಹಾಗು ವಸ್ತುನಿಷ್ಠ ಬರಹದ ಮೂಲಕ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ,ಅಂತಹ ಒಬ್ಬ ಪತ್ರಕರ್ತನನ್ನು ಕಳೆದುಕೊಂಡು ಪತ್ರಿಕಾ ರಂಗ ಬಡವಾಗಿದೆ ಎಂದರು.
ಅಲ್ಲದೆ ವೆಂಕಟೇಶ ಮಾನು ಅವರು ಕೂಡ ಒಬ್ಬ ಹಿರಿಯ ಪತ್ರಕರ್ತರಾಗಿದ್ದು ಮೊದಲು ಶಹಾಪುರದಲ್ಲಿ ಇದ್ದು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.ನಂತರ ಬೆಂಗಳೂರಲ್ಲಿದ್ದು ತಮ್ಮ ಪತ್ರಿಕಾ ವೃತ್ತಿಯಲ್ಲಿ ತೊಡಗಿದ್ದರು. ಅವರು ಕೂಡ ಅಕಾಲಿಕವಾಗಿ ನಿಧನವಾಗಿರುವುದು ನೋವಿನ ಸಂಗತಿಯಾಗಿದೆ.ಅಗಲಿದ ಇಬ್ಬರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಕುಟುಂಬಕ್ಕೆ ಅವರ ಅಗಲಿಕೆಯ ನೋವಿನ ದುಖಃ ಭರಿಸುವ ಶಕ್ತಿ ಲಭಿಸಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾದ್ಯಕ್ಷ ಗಿರೀಶ ಶಾಬಾದಿ,ಉಪಾಧ್ಯಕ್ಷ ಶ್ರೀಕರಭಟ್ ಜೋಷಿ,ಪ್ರ.ಕಾರ್ಯದರ್ಶಿ ಕ್ಷೀರಲಿಂಗಯ್ಯ ಬೋನ್ಹಾಳ, ಖಜಾಂಚಿ ನಾಗರಾಜ ನ್ಯಾಮತಿ,ಪತ್ರಕರ್ತರಾದ ಮಲ್ಲು ಗುಳಗಿ,ಧಿರೇಂದ್ರ ಕುಲಕರ್ಣಿ,ಹೊನ್ನಪ್ಪ ತೇಲ್ಕರ್, ರಾಜು ಕುಂಬಾರ,ಕಲೀಂ ಫರೀದಿ,ಪರಶುರಾಮ ಮಲ್ಲಿಬಾವಿ,ಶ್ರೀಮಂತ ಚಲುವಾದಿ,ಥಾಮಸ್ ಮ್ಯಾಥ್ಯೂ ಶ್ಯಾಮುವೆಲ್ ಸೇರಿದಂತೆ ಅನೇಕರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…