ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.
ಶ್ರೀಮತಿ ಭೀಮಾಬಾಯಿ ನಾರಾಯಣಪ್ಪ ಭಂಡಾರೆ ಸ್ಮರಣಾರ್ಥವಾಗಿ ಬೆಂಗಳೂರಿನ ಶ್ರೀಮತಿ ಗಂಗುಬಾಯಿ ಚಂದ್ರಕಾಂತ ಭಂಡಾರೆ ರವರು ಶಾಲೆಗೆ ದೇಣಿಗೆ ರೂಪದಲ್ಲಿ ಕಳುಹಿಸಿದ ಬ್ಯಾಗ್ಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ನಿಂಗಪ್ಪ ಕೌಡಿಮಟ್ಟಿ ಅವರು, ವಿತರಿಸಿದರು.
ಪ್ರಭು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಿ.ಭಾವಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಈ ಗ್ರಾಮದಲ್ಲಿ ಶಾಲೆಯು ಬಹಳ ಹಳೆಯದಾಗಿದ್ದು ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದೊಂದಿಗೆ ಗಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಈಗಾಗಲೇ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಾ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ನೀವೂ ಕೂಡಾ ಚೆನ್ನಾಗಿ ಅಬ್ಯಾಸ ಮಾಡಿ ಮುಂದೆ ಬಂದು ಶಾಲೆಗೆ, ಪಾಲಜರಿಗೆ ಹಾಗೂ ಗ್ರಾಮಕ್ಜೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭಾಗಣ್ಣ ಗುತ್ತೇದಾರ್, ಆನಂದ ಗೋಗಿ, ಸಂಗಣ್ಣ ಶಿರೇಗೋಳ, ಮುಖ್ಯ ಶಿಕ್ಷಕಿ ಶಶಿಕಲಾ ಬಡಗಾ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕಿಯರು ಸಿಬ್ಬಂದಿಗಳು ಭಾಗವಹಿಸಿದ್ದರು.
ಕಲಬುರಗಿ: ಜಾನಪದ ಕಲಾವಿದರಿಗೆ ಸರ್ಕಾರ ಮೀಸಲಾತಿ ಕಲ್ಪಿಸಲಿ ಕಲಾವಿದರು ಇವತ್ತು ಸಂಕಷ್ಟ ಪರಿಸ್ಥಿತಿಯಲ್ಲಿದಾರೆಂದು ಡಾ.ವಾಸುದೇವ ಸೇಡಂ ಕಳವಳ ವ್ಯಕ್ತಪಡಿಸಿದರು. ನಗರದ…
ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಮೆ. ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಎಥೆನಾಲ್ ಕಾರ್ಖಾನೆಯು ಸ್ಥಗಿತಗೊಂಡಿದ್ದರಿಂದ ರೈತರ ಹಿತದೃಷ್ಠಿಯಿಂದ ಪ್ರಸಕ್ತ…
ಕಲಬುರಗಿ; ನವೆಂಬರ್ 14ರಂದು ನಡೆಯಲಿರುವ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ 90ನೇ ಜನ್ಮದಿನಾಚರಣೆ, ನವೆಂಬರ್ 22ರಂದು ಶರಣಬಸವೇಶ್ವರ…
ಕಲಬುರಗಿ: ನಾಟ್ಯಸಾರ್ವಭೌಮ ಡಾ.ಶಿವರಾಜಕುಮಾರ ಅವರ ಅಭಿನಯದ ಅದ್ದೂರಿ ಆ್ಯಕ್ಷನ್, ಥ್ರಿಲ್ಲರ್ ಇರುವ `ಭೈರತಿ ರಣಗಲ್’ ಸಿನಿಮಾದಲ್ಲಿ ಲೇಖಕ, ಪತ್ರಕರ್ತ, ರಂಗ…
ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…
ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…