ವಾಡಿ: ಪಟ್ಟಣದ ಹನುಮಾನ ಮಂದಿರದಲ್ಲಿ ಆರನೇ ವರ್ಷದ ವಾರ್ಷಿಕೋತ್ಸವದ ಸಮಾರಂಭ ಹನುಮಾನನಿಗೆ ವಿಶೇಷ ಪೂಜೆ, ಅಲಂಕಾರದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಈ ವೇಳೆ ದಿವ್ಯ ಸಾನಿಧ್ಯವನ್ನು ವಹಿಸಿದ ಹಲಕರ್ಟಿಯ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಶ್ರೀ ಮುನೀಂದ್ರ ಶಿವಾಚಾರ್ಯರು ಮಾತನಾಡಿ ಭಗವಂತನ ಧ್ಯಾನ,ಆರಾಧನೆ ಯಂತ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಮನುಷ್ಯ ಜೀವನ ಧನ್ಯವಾಗುತ್ತದೆ ಎಂದು ಹೇಳಿದರು.
ಪ್ರತಿ ವರ್ಷ ಈ ಮಂದಿರದ ಹನುಮಾನ ದೇವರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಳೆಯೇ ಪ್ರಮುಖ ಪಾತ್ರ ವಹಿಸುತ್ತಿರುವುದು ವಿಶೇಷವಾಗಿದೆ ಎಂದರು.
ದೇವರ ಮೇಲಿನ ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನವಾಗಿದೆ, ಹಿರಿಯರಾಗಲಿ ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವವನ್ನು ಒಡ ಮೂಡಬೇಕು. ಭಗವಂತನ, ಮಹಾತ್ಮರ, ಶರಣರ ತತ್ವಾದರ್ಶಗಳನ್ನು ಆಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಬೇಡುವ ಕೈಗಿಂತ ನೀಡುವ ಕೈ ಶ್ರೇಷ್ಠ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ದಾನ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಖಂಡೊರಾವ ಸೂರ್ಯವಂಶಿ,ರಾಮಚಂದ್ರ ರಡ್ಡಿ,ಬಾಲರಾಜ ಪಗಡಿಕರ, ಬಸವರಾಜ ಪಗಡಿಕರ, ಮಲ್ಲಿಕಾರ್ಜುನ ಸಾತಖೇಡ, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ಬಸವರಾಜ ಪಂಚಾಳ,ಅಶೋಕ ಸೂರ್ಯವಂಶಿ,ವಿಠಲ ನಾಯಕ,ಅಶೋಕ ಹರನಾಳ,ಭೀಮಶಾ ಜಿರೋಳ್ಳಿ,
ವೀರಣ್ಣ ಯಾರಿ, ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ,ಶಿವಶಂಕರ ಕಾಶೆಟ್ಟಿ, ಮಹಾಂತಗೌಡ ಪಾಟೀಲ, ನಿಂಗನಗೌಡ ರಾಜೋಳ,ದೌಲತರಾವ ಚಿತ್ತಾಪುರಕರ್,ಅನಂದ ಡೌವಳೆ,ಚಂದ್ರಶೇಖರ ಬಿಣ್ಣೂರ,ಅಶೋಕ ಡೌವಳೆ, ಜಗನ್ನಾಥ ಕಲ್ಲಶೆಟ್ಟಿ, ಸೋಮು ಚವ್ಹಾಣ, ಹಣಮಂತ ಚವ್ಹಾಣ,ಪ್ರಮೋದ್ ಚೊಪಡೆ,ಆನಂದ ಇಂಗಳಗಿ, ಬಸವರಾಜ ಮಡ್ಡಿ,ಸುನಿಲ ಗುತ್ತೆದಾರ,ಭೀಮರಾಯ ಸುಭೆದಾರ, ಸೇರಿದಂತೆ ಅನೇಕರು ಇದ್ದರು.
ಪಟ್ಟಣದ ಎಲ್ಲಾ ಭಕ್ತರಿಗೆ ಸಾಮೂಹಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…
ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…
ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…
ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…
ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…