ಕಲಬುರಗಿ: ಆರ್.ಎಸ್.ಎಸ್ ವತಿಯಿಂದ ಸಿಯುಕೆಯಲ್ಲಿ ಈ ರೀತಿಯ ಅನೇಕ ಸರಣಿ ಸಭೆ, ಕಾರ್ಯಚಟುವಟಿಕೆಗಳನ್ನು ವಿಶ್ವವಿದ್ಯಾಲಯದಲ್ಲಿ ರೂಪಿಸುತ್ತಲ್ಲೇ ಬಂದಿದ್ದಾರೆ. ಜುಲೈ 18 ರಂದು ಅದರ ಮುಂದುವರಿದ ಭಾಗದ ಸಭೆ ಆಗಿತ್ತು ಎಂದು ಸಿಯುಕೆಯ ಸಂಶೋಧನಾ ವಿದ್ಯಾರ್ಥಿ ಪಿ. ನಂದಕುಮಾರ್ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅವರ ಹೇಳಿಕೆಗೆ ತೀರುಗೇಟ್ಟು ನೀಡಿದ್ದಾರೆ.
ಇದೆ ಗುರುವಾರ ಸಿಯುಕೆಯಲ್ಲಿ ಆರ್.ಎಸ್.ಎಸ್ ವತಿಯಿಂದ ನಡೆದ ಸಭೆ ಗುರುಪೂರ್ಣಿಮೆಗೆ ಸಂಬಂಧ ಪಟ್ಟಿದಲ್ಲ, ಆ ಸಭೆಯಲ್ಲಿ ಗೋವಾಲ್ಕರ್ ಹಾಗೂ ಹೆಗಡೆವಾರ್ ಅವರ ಭಾವ ಚಿತ್ರ ಮತ್ತು ಆರ್ ಎಸ್ ಎಸ್ ಧ್ವಜಾರೋಹಣ ಮಾಡಲಾಗಿತ್ತು. ಇದು ಗುರುಪೂರ್ಣಿಮೆಗೆ ಸಂಬಂಧಿಸಿದಲ್ಲ. ಯಾಕೆಂದರೆ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಡೆದ ಸರಣಿ ಸಭೆ, ಕಾರ್ಯಕ್ರಮಳಾದ ಆರ್ ಎಸ್ ಎಸ್ ಶಾಖೆ ಉದ್ಘಾಟನೆ, ಹನುಮಾನ್ ಚಾಲಿಸ್ ಓದು. ಗಾಯಿತ್ರಿ ಮಂತ್ರ ಪಠಣ, ಹೋಮ-ಹವನ, ಸರಸ್ವತಿ ಮೂರ್ತಿ ಸ್ಥಾಪನೆ, ರಾಮನ ಹುಣ್ಣಿಮೆ ಆಚರಣೆ ಹೀಗೆ ಅನೇಕ ಸಂಗತಿಗಳ ಮುಂದುವರಿದ ಭಾಗವೇ ಮೊನ್ನೆ 18-07-2024 ರಂದು ಗೆಸ್ಟ್ ಹೌಸ್ನಲ್ಲಿ ನಡೆದ ಆರ್ ಎಸ್ ಎಸ್ ನ ಸಭೆ. ಹೀಗಾಗಿ ಈ ಒಂದು ಸಭೆಯನ್ನು ಇಟ್ಟುಕೊಂಡು ಗುರುಪೂರ್ಣಿಮೆಯ ಸಭೆ ಎಂದು ತಿರುಚುವುದನ್ನು ನೋಡಿದರೆ, ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ನಡೆದಂತ ಆರ್ ಎಸ್ ಎಸ್ ನ ಕಾರ್ಯಾ ಚಟುವಟಿಕೆಯ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ಮರೆಮಾಚಲು ಪ್ರಯತ್ನಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿರುವ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಡಿಯೋ ಕುರಿತಾಗಿ ಕೆಲ ರಾಜಕೀಯ ನಾಯಕರು ಮಾಧ್ಯಮಗಳ ಮೂಲಕ ಹಾಗೂ ಪತ್ರಗಳ ಮುಖೇನವಾಗಿ ತಳ-ಬುಡವಿಲ್ಲದ ವಾದಗಳನ್ನು ಮಾಡುತ್ತಿರುವುದನ್ನು ಗಮನಿಸಿ ಈ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸೇರಿದಂತೆ ಇತರರ ಅಭಿಪ್ರಯಾಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಒಟ್ಟು ಇಪ್ಪತ್ತಾರು ರಾಜ್ಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಎಲ್ಲ ಜಾತಿ, ಮತ-ಪಂಥ, ಹಾಗೂ ಭಿನ್ನ ಭಿನ್ನ ಸಂಸ್ಕೃತಿ, ಅನೇಕ ಭಾಷೆಗಳ ಪರಂಪರೆಯ ಹಿನ್ನಲೆಯಿಂದ ಬಂದಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಒಂದು ಧಾರ್ಮಿಕ ನಂಬಿಕೆಯ ಸಭೆಗಳನ್ನು ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಒಂದಿಷ್ಟು ಸ್ಪಷ್ಟತೆಯ ಮಾತುಗಳು. ನಮ್ಮ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಈ ರೀತಿಯ ಸಭೆಗಳು ನಡೆಯುತ್ತಿರುವಂತದ್ದು. ಇದೇನು ಮೊದಲು ನಡೆಯುತ್ತಿರುವ ಸಭೆಯಂತೂ ಅಲ್ಲವೇ ಅಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿ ಜರಗುತ್ತಿದ್ದ ಆರ್ ಎಸ್ ಎಸ್ ನ ಸರಣಿ ಕಾರ್ಯಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ನಾವುಗಳು ವಿಫಲವಾಗಿದ್ದೇವೆ. ಹಾಗಾಗಿಯೇ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಈಗ ಅದು ಈ ಸ್ಥಿತಿಗೆ ಬಂದು ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯ ಸಂವಿಧಾನಿಕ ಸಂಸ್ಥೆ ಹಾಗಿದ್ದೂ ಅಸಂವಿಧಾನಿಕ ಚಟುವಟಿಕೆಗಳು ನಡೆಯುವುದು ಈ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಕಾಯ್ದೆ 2009 ನ್ನು ಪರಿಶೀಲಿಸಿದರೆ ಕೇಂದ್ರೀಯ ವಿಶ್ವವಿದ್ಯಾಲಯ ಹೇಗೆ ಸಂವಿಧಾನದ ನಿಯಮಾವಳಿಗೆ ಒಳಪಟ್ಟಿದೆ ಎನ್ನುವುದನ್ನು ವಿವರವಾಗಿ ದಾಖಲಿಸಿದೆ. ಹೀಗಾಗಿ ಕೇಂದ್ರೀಯ ವಿವಿ ಕಾಯ್ದೆ 2009 ರ ವಿರುದ್ಧವೂ ಈ ನಡೆ ಇದೆ.
ಅಲ್ಲದೆ ಅಸಂವಿಧಾನಿಕ ಧಾರ್ಮಿಕ ಚಟುವಟಿಕೆಗಳನ್ನು ಹಾಗೂ ಎಲ್ಲ ಆರ್ ಎಸ್ ಎಸ್ ಗೆ ಸಂಬಂಧಿಸಿದ ಸಂಗತಿಗಳನ್ನು ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಧ್ವನಿ ಎತ್ತಬೇಕು ಎತ್ತಿದ್ದೇವೆ. ಆದರೆ ಅದಕ್ಕೆ ಕರ್ನಾಟಕದ ಸಂದರ್ಭದಲ್ಲಿ ವಿದ್ವತ್ ಲೋಕವಿರಬಹುದು, ಪ್ರಗತಿಪರ, ಎಡಪಂಥಿ ಚಿಂತಕರಿರಬಹುದು ಇವರ್ಯಾರು ಇದಕ್ಕೆ ಕೊಡಬೇಕಾದ ಗಮನವನ್ನು ಕೊಡದೆ ಇರುವುದರ ಪರಿಣಾಮವಿದು. ಅಲ್ಲದೆ ರಾಜ್ಯ ಸರ್ಕಾರದ ಯಾವುದೇ ಅಧಿಕಾರದ ಕಾರ್ಯ ವ್ಯಾಪ್ತಿಗೆ ಕೇಂದ್ರೀಯ ವಿಶ್ವವಿದ್ಯಾಲಯ ಒಳಪಡದೆ ಇರುವುದು ಕೂಡ, ರಾಜ್ಯ ಸರ್ಕಾರಕ್ಕೆ ಇದು ಸವಾಲಾಗಿದೆ. ಈ ಒಂದು ಸಂಗತಿ ಕೂಡ ಇಲ್ಲಿ ತುಂಬಾನೇ ಕೆಲಸ ಮಾಡಿದೆ. ಹಾಗಾಗಿ ಸ್ವತಃ ಕೇಂದ್ರ ಸರ್ಕಾರ ಇದರ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂವಿಧಾನದ ಆಶಯವಾದ “ಸರ್ವ ಜನಾಂಗದ ಶಾಂತಿಯ ತೋಟದ” ಹಿನ್ನಲೆಯ ಮಾತುಗಳನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಯಾವ ಸರ್ಕಾರ ಬಂದಿದೆ ಅದು ಕೂಡ ಈ ವಿಶ್ವವಿದ್ಯಾಲಯದ ಸಂಗತಿಗಳಿಗೆ ಸಂಬಂಧಿಸಿದಂತೆ ಮೌನವಹಿಸಿದೆ. ಸ್ವತಃ ರಾಜ್ಯ ಸರ್ಕಾರದ ಸಚಿವರು ಹಾಗೂ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಅಗೌರವ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಜಾಪ್ರಭುತ್ವದ ಕುರಿತು ಮಾತನಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಇನ್ನುಳಿದಂತೆ ಬೌದ್ಧ, ಜೈನ, ಸಿಖ್ ಹೀಗೆ ಮುಂತಾದ ಧರ್ಮಗಳ ಕುರಿತಾದ ಒಂದು ವಿಚಾರ ಸಂಕಿರಣ ಮಾಡಿದ್ದಾದರೆ ದಾಖಲೆಗಳನ್ನು ನೀಡಿ. ಹಿಂದುತ್ವಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡುವುದನ್ನು ಹೊರತು ಪಡಿಸಿ, ಪ್ರಜಾಪ್ರಭುತ್ವದ ಪೂರಕವಾದ ರೀತಿಯಲ್ಲಿ ಯಾವ ಒಂದು ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ ಮಾಡಿದ್ದೀರಿ..?ಅಲ್ಲದೆ ಆ ಸಭೆಯಲ್ಲಿ ಹಾಡುತ್ತಿರುವ ಗೀತೆ ಯಾವುದೇ ಸರ್ಕಾರದ ಅಧಿಕೃತ ಘೋಷ ಗೀತೆಯಲ್ಲ. ಅಲ್ಲಿ ರಾಷ್ಟ ಗೀತೆಯಾದ ಜನ ಗಣ ಮನ ಅಥವಾ ವಂದೇ ಮಾತರಂ ಗೀತೆಯನ್ನು ಹಾಡಿದ್ದರೆ ತಕರಾರು ಇರುತ್ತಿರಲಿಲ್ಲ.
ಈ ಆರ್ ಎಸ್ ಎಸ್ ಗೀತೆಯನ್ನು ಯಾವ ಸಂಸ್ಥೆ ಅಧಿಕೃತಗೊಳಿಸಿದೆ. ಅದನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಾಡುವುದಕ್ಕೆ.? ಇಲ್ಲಿ ಶೈಕ್ಷಣಿಕ ಸಂಗತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ದೂಡಿಲಾಗಿದೆ ಎಂದು ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…