ಶಹಾಬಾದ : ಜನಸ್ಪಂದನ ಕಾರ್ಯಕ್ರಮ ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿದ್ದು ಸಂಪೂರ್ಣ ತಾಲೂಕಾ ಆಡಳಿತವೇ ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತಹ ಕೆಲಸ ಮಾಡುತ್ತದೆ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು.
ಅವರು ಮಂಗಳವಾರ ತಾಲೂಕಿನ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾದ ಜನಸ್ಪಂದನ, ಪಿಂಚಣಿ ಆದಾಲತ್ ಹಾಗೂ ಪೌತಿ ಆದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಅವರವರ ಇಲಾಖೆಗಳ ಸಮಸ್ಯೆಗಳಿದ್ದರೆ ಅವರು ಇಲ್ಲಿಯೇ ಪರಿಹಾರ ದೊರಕಿಸಿಕೊಡುತ್ತಾರೆ. ಕಂದಾಯ ಇಲಾಖೆಯ ಸಮಸ್ಯೆಗಳಿದ್ದರೆ, ಪಿಂಚಣಿ, ವಿಧವಾ ವೇತನ, ಅಂಗವಿಕಲರ ವೇತನ, ಪಹಣಿಯಲ್ಲಿನ ದೋಷ, ಪೌತಿ ಆಂದೋಲನ ಇತ್ಯಾದಿ ಯಾವುದೇ ಇದ್ದರೂ ಸಹ ಅವುಗಳನ್ನು ಸ್ಥಳದಲ್ಲಿಯೇ ಮಾಡಿಕೊಡಲಾಗುವುದು ಎಂದರು.
ತಾಲೂಕಾ ಆಡಳಿತದಿಂದ ಕುಂದು ಕೊರತೆಗಳನ್ನು ನಿವಾರಿಸುವತ್ತ ಎಲ್ಲಾ ಪ್ರಯತ್ನ ಮಾಡುತ್ತೇವೆ. ನೀವಷ್ಟೇ ಅಲ್ಲ ನಿಮ್ಮಲ್ಲಿ ಇನ್ಯಾರಾದರೂ ಸಮಸ್ಯೆಯಿದ್ದವರಿದ್ದರೆ ಅವರಿಗೂ ಹೇಳಿ ಕಳುಹಿಸಿಕೊಡಿ ಎಂದು ಕೋರಿದರು.
ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ, ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಇಲ್ಲಿ ಸಾಧ್ಯವಿರುವ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ನೀಡಲಾಗುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಸಂಬAಧಪಟ್ಟ ಇಲಾಖೆಗಳಿಗೆ ಅರ್ಜಿಯನ್ನು ಕಳುಹಿಸಿ ಮಾಡಲಾಗುವುದು ಎಂದರು.
ಇAತಹ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಅತ್ಯಂತ ಅನುಕೂಲವಾಗಿದೆ.ಆದ್ದರಿಂದ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚಾಗಿ ಶೌಚಾಲಯಗಳ ಬಗ್ಗೆ, ಶಹಾಬಾದ ಮುಖ್ಯ ರಸ್ತೆ ಸಮಸ್ಯೆ ಕುರಿತು, ಪಿಂಚಣಿ, ಚರಂಡಿ ಸಮಸ್ಯೆಗಳ ಕುರಿತು ಸಾರ್ವಜನಿಕರು ಅರ್ಜಿಗಳನ್ನು ನೀಡಿದರು.
ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ, ವೈದ್ಯಾಧಿಕಾರಿ ಡಾ. ಶಂಕರ ರಾಠೋಡ, ಜೆಸ್ಕಾಂ ಎಇಇ ಮಹ್ಮದ ಯುನೂಷ, ಪಿಡಬ್ಲ್ಯೂಡಿ ಜೆಇ ಖದೀರ ಪಟೇಲ್, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಸಾರಿಗೆ ಇಲಾಖೆಯ ಶಾಂತಾಬಾಯಿ, ಶಿಕ್ಷಣ ಇಲಾಖೆಯ ಸತ್ಯನಾರಾಯಣ ವಿಶ್ವಕರ್ಮ, ಶಿಶು ಅಭಿವೃದ್ಧಿ ಯೋಜನೆಯ ಶಕುಂತಲಾ ಸಾಕರೆ, ಕೃಷಿ ಇಲಾಖೆಯ ಸತೀಶ ಕುಮಾರ, ಸಮಾಜ ಕಲ್ಯಾಣ ಇಲಾಖೆಯ ರಮೇಶ ನಂದಿಕೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಣ್ಣ ಮಸ್ಕಿ, ಸುಭಾಷ ಸಾಕರೆ, ಮಹೇಬೂಬ ಮದ್ರಿ ಸೇರಿದಂತೆ ಅನೇಕರು ಇದ್ದರು
ಒಟ್ಟು ೧೯ ಅರ್ಜಿಗಳು ಬಂದಿದ್ದು, ಅದರಲ್ಲಿ ೭ ಅರ್ಜಿಗಳನ್ನು ಅನುಮೋದಿಸಲಾಗಿದೆ.. ಉಳಿದ ಅರ್ಜಿಗಳನ್ನು ಸಂಬAಧಪಟ್ಟ ಇಲಾಖೆಗೆ ವರ್ಗಾಯಿಸಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…