ಬಿಸಿ ಬಿಸಿ ಸುದ್ದಿ

ಆರೋಗ್ಯ ಇಲಾಖೆ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆರೋಗ್ಯ ಮೇಳ

ಸುರಪುರ : ನಗರದ ರಂಗAಪೇಟೆಯ ಜಾಮೀಯಾ ಮಸೀದಿ ಶಾದಿಮಹಲ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಪಿಎಚ್‌ಸಿ ಹಸನಾಪುರ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಮೇಳ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭಲಿಂಗ ಮಾನಕರ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಶೇ.೭೦ ರಷ್ಟು ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಆಗುತ್ತವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಮೆಡಿಕೆಲ್ ಕಾಲೇಜು ಹಾಸ್ಪಿಟಲ್‌ನಲ್ಲಿ ದಿನದ ೨೪ ಗಂಟೆಗಳ ಕಾಲ ಉಚಿತ ಹೆರಿಗೆ ಸೌಲಭ್ಯ ಇದೆ. ಸರಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರು, ಸ್ಪಾಪ್ ನರ್ಸ್ಗಳಿರುತ್ತಾರೆ. ಹೆರಿಗೆ ನಾರ್ಮಲ್ ಆಗದಿದ್ದರೆ ಸಿಸೇರಿನ್ ವ್ಯವಸ್ಥೆ ಮಾಡಿಸಲಾಗುತ್ತದೆ. ಉಚಿತವಾಗಿ ಹೆರಿಗೆ ಮಾಡಿಸಿಕೊಳ್ಳಲು ಜನ ಮುಂದೆ ಬರಬೇಕು ಎಂದರು ಸಲಹೆ ನೀಡಿದರು.

ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಮನೆ ಹೆರಿಗೆ ಸುರಕ್ಷತವಲ್ಲ. ಮನೆ ಹೆರಿಗೆ ಯಾದಗಿರಿ ಜಿಲ್ಲೆಯಲ್ಲಿ ಇಂದು ಶೂನ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ ಸೌಲಭ್ಯ ವ್ಯವಸ್ಥೆ ಇದೆ ಎಂದರು.ಗ್ರಾಮೀಣ ಮಟ್ಟದಲ್ಲಿ ಪ್ರತಿ ಬುಧವಾರ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ದೊರೆಯುವ ಉಚಿತ ಸೇವೆಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸುವುದು ಉಚಿತ ಆರೋಗ್ಯ ಮೇಳದ ಮುಖ್ಯ ಉದ್ದೇಶವಾಗಿದೆ. ಮೇಳದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿ ಇನ್ನಿತರ ಖಾಯಿಲೆಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ ಎಂದರು.

ವೈದ್ಯಾಧಿಕಾರಿ ಡಾ.ಜ್ಯೊತಿ ಕಟ್ಟಿಮನಿ ವಿಶ್ವ ಜನಸಂಖ್ಯೆ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು. ವೈದ್ಯರಾದ ಡಾ.ಮಲ್ಲಪ್ಪ, ಡಾ.ನಾಜೀದ್, ನಗರಸಭೆ ಪೌರಾಯುಕ್ತ ಜೀವಕುಮಾರ ಕಟ್ಟಿಮನಿ, ಮುಖಂಡ ಅಬ್ದುಲ್ ಅಲಿಂ ಗೋಗಿ ಮಾತನಾಡಿದರು. ಟಿಎಚ್‌ಒ ಡಾ.ಆರ್.ವಿ.ನಾಯಕ ಪ್ರಾಸ್ತಾವಿಕದಲ್ಲಿ ಮನೆ ಹೆರಿಗೆ, ಡೆಂಘೀ, ಚಿಕ್ಯೂನ್ ಗುನ್ಯಾ, ಮಲೇರಿಯಾ ಇತರೆ ಸಾಂಕ್ರಾಮಿಕ ರೋಗಳು, ಪೋಲಿಯೋ, ಏಳು ಮಾರಕ ರೋಗಗಳ ವಿರುದ್ಧ ನೀಡುವ ಚುಚ್ಚುಮದ್ದು ಕುರಿತು ವಿವರಿಸಿದರು.

ತಹಸೀಲ್ದಾರ್ ಕೆ.ವಿಜಯಕುಮಾರ ಉದ್ಘಾಟಿಸಿದರು. ಮಜೀದ್‌ನ ಇಮಾಮಸಾಬ್ ಮುಪ್ತಿ ಜಮೀರ್ ಅಹ್ಮದ್, ತಾಪಂ ಇಒ ಬಸವರಾಜ ಸಜ್ಜನ್, ನಗರಸಭೆ ಸದಸ್ಯರಾದ ನಾಸೀರ್ ಹುಸೇನ್ ಕುಂಡಾಲೆ, ಸುವಣಾ ಎಲಿಗಾರ. ಖಮರುದ್ದೀನ್ ನಾರಾಯಣಪೇಟೆ ಪ್ರಮುಖರಾದ ಖಾಲೀದ್ ಅಹ್ಮದ್ ತಾಳಿಕೋಟೆ, ಜಹೀರ್ ಅಹ್ಮದ್, ಶೇಖ ಮಹಿಬೂಬ್ ಒಂಟಿ, ಲಿಯಾಖತ್ ಹುಸೇನ್, ಅಬ್ದುಲ್ ರಹೀಮ್ ವೇದಿಕೆಯಲ್ಲಿದ್ದರು.

ಮೇಳದಲ್ಲಿ ಅನೇಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಉಚಿತ ಮಾತ್ರೆ ನೀಡಲಾಯಿತು. ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಡೆಂಗೆ, ಮಲೇರಿಯಾ, ಕ್ಯಾನ್ಸರ್, ಕುಷ್ಠ, ಕ್ಷಯ, ಆನೆಕಾಲು ರೋಗಳ ಕುರಿತಂತೆ ವಿವಿ ಮಳಿಗೆ ಸ್ಥಾಪಿಸಿ ಮಾಹಿತಿ ನೀಡಲಾಯಿತು. ತುಕಾರಾಮ ನಿರೂಪಿಸಿದರು. ಮಲ್ಲಪ್ಪ ಸ್ವಾಗತಿಸಿದರು. ಶಾಂತಿಲಾಲ್ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago