ಗುಲಬರ್ಗಾ ವಿವಿ: ಅಂಕಪಟ್ಟಿಗಾಗಿ ಲೋಕಾಯುಕ್ತ ಎಸ್‌ಪಿ ಮುಂದೆ ಕಣ್ಣೀರಿಟ್ಟ ಪದವೀಧರೆ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗಕ್ಕೆ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಅವರು ಬುಧವಾರ ಭೇಟಿ ನೀಡಿ, ಮೂರ್ನಾಲ್ಕು ವರ್ಷಗಳಿಂದ ಅಂಕಪಟ್ಟಿ ನೀಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ‘ಪದವಿ ಪ್ರಮಾಣ ಪತ್ರ (ಕಾನ್ವಕೇಷನ್) ಕೊಡಲು ಆಗದಕ್ಕೆ ನಾಚಿಕೆ ಆಗಬೇಕು’ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಭಾಗದ ಕಚೇರಿಯಲ್ಲಿ ವರ್ಷಗಳಿಂದ ವಿಲೇವಾರಿ ಆಗದೆ ಬಿದ್ದಿದ್ದ ಅಂಕಪಟ್ಟಿ ಹಾಗೂ ಕಾನ್ವಕೇಷನ್‌ ಕೋರಿ ಬಂದಿದ್ದ ಮನವಿ ಪತ್ರಗಳನ್ನು ನೋಡಿ ದಂಗಾದರು. ‘2021ರಿಂದ ಅಂಕಪಟ್ಟಿಗಳು ಬಾಕಿ ಇವೆ. ಇದ್ಯಾವ ಲೆಕ್ಕ ಮಾರಾಯರೇ? ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಪದವೀಧರರಿಗೆ ಅಂಕಪಟ್ಟಿ ಕೊಡಲು ಸಮಸ್ಯೆ ಏನು’ ಎಂದು ಮೌಲ್ಯಮಾಪನ ಕುಲಸಚಿವೆ ಮೇದಾವಿನಿ ಎಸ್. ಕಟ್ಟಿ ಅವರನ್ನು ಪ್ರಶ್ನಿಸಿದರು.

ಕಾನ್ವಕೇಷನ್‌ಗಾಗಿ ಎರಡನೇ ಬಾರಿಗೆ ಬಂದಿದ್ದಾಗಿ ಪದವೀಧರ ಅಭ್ಯರ್ಥಿಗಳು ಎಸ್‌ಪಿ ಅವರ ಗಮನಕ್ಕೆ ತಂದರು. ‘ಮೊದಲನೇ ಬಾರಿ ಅರ್ಜಿ ಸಲ್ಲಿಸಿದ್ದಾಗಲೇ ಕಾನ್ವಕೇಷನ್‌ ಕೊಡಬೇಕಿತ್ತು. ಎರಡನೇ ಬಾರಿ ಬಂದಾಗಲು ಕೊಡಲು ಆಗಿಲ್ಲವೆಂದರೇ ನಿಮಗೆ ನಾಚಿಕೆ ಆಗಬೇಕು’ ಎಂದು ಕಿಡಿಕಾರಿದರು.

ಬೀದರ್‌ನಿಂದ ಬಂದಿದ್ದ ಮತ್ತೊಬ್ಬ ಪದವೀಧರೆ ಕಣ್ಣೀರು ಸುರಿಸುತ್ತಾ, ‘ಸಾವಿರಾರು ರೂಪಾಯಿ ಶುಲ್ಕ ಕಟ್ಟಿಸಿಕೊಂಡಿದ್ದರೂ ಇದುವರೆಗೂ ಅಂಕಪಟ್ಟಿ ಕೊಟ್ಟಿಲ್ಲ. ಟೇಬಲ್‌ನಿಂದ ಟೇಬಲ್‌ಗೆ ಅಲೆಸುತ್ತಿದ್ದಾರೆ. ಬೀದರ್‌ನಿಂದ ಮೂರು ಗಂಟೆಗಳ ಕಾಲ ಪ್ರಯಾಣಿಸಿ ಬರುವ ವೇಳೆಗೆ ಊಟದ ಟೈಮ್ ಆಗಿದೆ ಎಂದು ಎದ್ದು ಹೋಗುತ್ತಾರೆ. ಹತ್ತಾರು ಬಾರಿ ಮಕ್ಕಳನ್ನು ಕಟ್ಟಿಕೊಂಡು ಬರುತ್ತಿದ್ದರೂ ನಮ್ಮ ಗೋಳು ಕೇಳುತ್ತಿಲ್ಲ’ ಎಂದರು.

ಇದರಿಂದ ಕುಪಿತಗೊಂಡ ಎಸ್‌ಪಿ ಜಾನ್ ಆಂಟೋನಿ, ‘ಇಲ್ಲಿನ ವ್ಯವಸ್ಥೆ ನೋಡಿದರೆ ಭ್ರಷ್ಟಾಚಾರ ನಡೆದಿದೆ ಅನಿಸುತ್ತಿದೆ. ಅಂಕಪಟ್ಟಿಗಾಗಿ ಎಷ್ಟು ಬಾರಿ ಶುಲ್ಕ ಕಟ್ಟಬೇಕು? ಅಂಕಪಟ್ಟಿ ಇಲ್ಲದೆ ಉದ್ಯೋಗ ಹೇಗೆ ಸಿಗುತ್ತೆ? ಉನ್ನತ ವ್ಯಾಸಂಗಕ್ಕೆ ಪ್ರವೇಶಾತಿ ಯಾರು ಕೊಡುತ್ತಾರೆ? ಈ ಸಮಸ್ಯೆಯನ್ನು ಯಾವಾಗ ಬಗೆ ಹರಿಸುತ್ತೀರಾ’ ಎಂದು ಪ್ರಶ್ನಿಸಿದರು. ಎಸ್‌ಪಿ ಅವರ ಸರಣಿ ಪ್ರಶ್ನೆಗಳಿಗೆ ಅಳುಕುತ್ತಲೇ ಪ್ರತಿಕ್ರಿಯಿಸಿದ ಸಿಬ್ಬಂದಿ, ‘ಅಂಕಪಟ್ಟಿ ವಿಲೇವಾರಿಗೆ ಸಿಬ್ಬಂದಿ ಕೊರತೆ ಇದೆ’ ಎಂದರು.

ಹೊರ ಗುತ್ತಿಗೆ ನೌಕರರು ಪದವೀಧರರ ವಿರುದ್ಧವೇ ಆರೋಪ ಮಾಡಿದಕ್ಕೆ ಸಿಡಿಮಿಡಿಗೊಂಡ ಎಸ್‌ಪಿ ಅವರು. ‘ಹೊರ ಗುತ್ತಿಗೆ ನೌಕರರು ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಇರಿಸಿಕೊಳ್ಳುವಂತಿಲ್ಲ. ಇಂತಹವರನ್ನು ಇನ್ನೂ ಏಕೆ ಉಳಿಸಿಕೊಂಡಿದ್ದು’ ಎಂದು ಮೌಲ್ಯಮಾಪನ ಕುಲಸಚಿವರನ್ನು
ಪ್ರಶ್ನಿಸಿದರು.

ಎಸ್ಪಿ ಜಾನ್ ಆಂಥೋನಿ ವಿಶ್ವವಿದ್ಯಾಲಯ. ಸ್ಥಳದಲ್ಲಿ. ಸಮಸ್ಯೆಯನ್ನು.ಬಗೆಹರಿಸಿದರು. ವಿದ್ಯಾರ್ಥಿ ಪವಿತ್ರ- ಅಂಕಪಟ್ಟಿಯನ್ನು. ಕೊಡಿಸಿದರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ನಳ್ಳಿ. ಜಿಲ್ಲೆ ಬೀದರ್. ಪವಿತ್ರ ತಂದೆ ರಾಜಕುಮಾರ್. ಎರಡನೇ ಸೆಮಿಸ್ಟರ್. ಬಿ. ಎಸ್. ಸಿ. 2021. ಆನ್ಲೈನಲ್ಲಿ ಶುಲ್ಕ ಕೂಡ ಬರೆಸುತ್ತಾಳೆ. ಗುಲ್ಬರ್ಗ ವಿಶ್ವವಿದ್ಯಾಲಯದವರು. ಅಂಕಪಟ್ಟಿ ಕೊಡಲು 4 – ವರ್ಷ. ವಿಳಂಬ ಮಾಡಿರುತ್ತಾರೆ.

ಪೊಲೀಸ್ ಅಧಿಕ್ಷಕರು. ಎಸ್ ಪಿ. ಜಾನ್ ಆಂಟೋನಿ.
ಪ್ರೊ.ಮೇಧಾವಿನಿ ಎಸ್. ಕಟ್ಟಿ. ಕುಲಸಚಿವರು. ಪೊಲೀಸ್ ಇನ್ಸ್ಪೆಕ್ಟರ್. ರಾಜಶೇಖರ್. ಪೋಲಿಸಿಬ್ಬಂದಿಗಳು. ಬಸವರಾಜ್ .ಶರಣು. ಸಿದ್ದರಾಮ್. ಇತರರು ಉಪಸ್ಥಿತರಿದ್ದರು.

emedialine

Recent Posts

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

8 mins ago

ಮಾಜಿ ಸಚಿವ ಎಸ್.ಕೆ ಕಾಂತ ಅವರ ಆರೋಗ್ಯ ವಿಚಾರಿಸಿದ ಸಿಎಂ

ಕಲಬುರಗಿ: 19ನೇ ಸಚಿವ ಸಂಪುಟದ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

25 mins ago

ಶಹಾಬಾದ ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ

ಶಹಾಬಾದ: ಸಪ್ಟೆಂಬರ್ 17ರಂದು ತಾಲೂಕಿನ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ…

28 mins ago

ಶಹಾಬಾದ ಕಾರ್ಖಾನೆಗಳನ್ನು ಪ್ರಾರಂಭಿಸಲು ಹಿರೇಮಠ ಒತ್ತಾಯ

ಶಹಾಬಾದ: ತಾಲೂಕಿನ ಜೆಪಿ ಕಾರ್ಖಾನೆ ಮತ್ತು ಜಿಇ ಕಾರ್ಖಾನೆ ಕಾರ್ಖಾನೆಗಳನ್ನು ಪುನಃ ಪ್ರಾರಂಭ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆಯುವ ಸಚಿವ…

57 mins ago

MRW/VRW/URW ಕಾರ್ಯಕರ್ತರ ಅನಿರ್ಧಿಷ್ಟಾವಧಿ ಧರಣಿ ದಲಿತ ಸೇನೆ ಬೆಂಬಲ

ಕಲಬುರಗಿ: ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ…

1 hour ago

ಸಚಿವ ಸಂಪುಟದಲ್ಲಿ ಸಭೆಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420