ಬಿಸಿ ಬಿಸಿ ಸುದ್ದಿ

ವಾಡಿ: ಕಾರ್ಗಿಲ್ ವಿಜಯೋತ್ಸವ

ವಾಡಿ: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.

ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಸಾವು ಮಗ್ಗಲಲ್ಲೇ ಇದ್ದರೂ ಅಂಜದೇ ವಂದೇ ಮಾತರಂ ಎನ್ನುತ್ತಾ ಕಾರ್ಗಿಲ್ ಯುದ್ಧದಲ್ಲಿ ಮುನ್ನುಗ್ಗಿ ಜಯಿಸಿದ ನಮ್ಮ ವೀರ ಯೋಧರಿಗೆ ಗೌರವ ನಮನಗಳು ಎಂದರು.

ನಮ್ಮ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ದೇಶದ ರಕ್ಷಣೆಗಾಗಿ ನಮ್ಮ ಲಕ್ಷಾಂತರ ಸೈನಿಕರು ಪ್ರಾಣಬಿಟ್ಟರು ಅವರಿಂದಲೇ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ.

ಗಡಿಯಲ್ಲಿ ಹಗಲು ರಾತ್ರಿ ಎನ್ನದೆ ಶತ್ರುಗಳಿಂದ ದೇಶವನ್ನು ಕಾಯುತ್ತಿರುವ ಸೈನಿಕರ ತ್ಯಾಗ ಎಂದು ಮರೆಯದಂತದ್ದು. ಅಂತಹ ಸೈನಿಕರನ್ನು ನಾವೆಲ್ಲರೂ ಪ್ರತಿಕ್ಷಣವೂ ನೆನೆಯಬೇಕಾಗಿದೆ, ಪ್ರಾಣವನ್ನು ಒತ್ತೆಯಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಪಾಕಿಸ್ತಾನದ ಜತೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯುದ್ಧ ಮಾಡುತ್ತಾ ಬಂದಿದ್ದೇವೆ. ಅದು ಅನಿವಾರ್ಯವೂ ಆಗಿದೆ. ಪಾಕಿಸ್ತಾನವು ನಮ್ಮ ವಿರುದ್ಧ ಮಾಡಿರುವ ಸಂಚು ಒಂದೆರಡಲ್ಲ. ಅದರಲ್ಲಿ ಕಾರ್ಗಿಲ್ ಯುದ್ಧ ಕೂಡಾ ಒಂದಾಗಿದೆ.

ಕಾರ್ಗಿಲ್ ಯುದ್ದದಲ್ಲಿ ವೀರ ಸಾಹಸಿಗಳ ಪೈಕಿ ಕೆಲವರು ಹುತಾತ್ಮರಾದರು.ಇನ್ನು ಕೆಲವರು ಅಂಗವಿಕಲರಾದರು. ಹೀಗಿದ್ದರೂ ತನ್ನ ಪಕ್ಕದಲ್ಲಿಯೇ ಹೆಣವಾಗುತ್ತಿದ್ದ ಸಹ ಯೋಧರ ನಡುವೆ ಬಹಳಷ್ಟು ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಎದುರಿಸಿದರು.

ಅದರ ಪರಿಣಾಮವೇ ಇವತ್ತು ನಾವೆಲ್ಲರೂ ಹೆಮ್ಮೆಯಿಂದ ಕಾರ್ಗಿಲ್ ದಿವಸವನ್ನು ಆಚರಿಸುವಂತಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಹರಿ ಗಲಾಂಡೆ, ರಿಚರ್ಡ್ ಮಾರೆಡ್ಡಿ,ಶಿವಶಂಕರ ಕಾಶೆಟ್ಟಿ, ಅರುಣ ಚೊಪಡೆ, ಜಯಂತ ಪವಾರ,ಪ್ರಮೋದ ಚೊಪಡೆ,ಮೋತಿರಾಮ ರಾಠೋಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ,ಆನಂದ ಇಂಗಳಗಿ,ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ, ಚಂದ್ರಶೇಖರ ಬೆಣ್ಣೂರ, ಪ್ರೇಮ ರಾಠೋಡ,ಶಿವಕುಮಾರ ಹೂಗಾರ,ಪ್ರೇಮ ತೇಲ್ಕರ ಸೇರಿದಂತೆ ಇತರರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago