ಬಿಸಿ ಬಿಸಿ ಸುದ್ದಿ

ಮಕ್ಕಳ ಕೈಗೆ ಮದ್ಯದ ವಸ್ತುಗಳ ಸಿಗದಂತೆ ಎಚ್ಚರಿಕೆ ವಹಿಸಿ: ಯಲ್ಲಪ್ಪ ಎಸ್. ನಾಯಕೋಡಿ

ಕಲಬುರಗಿ: ನಶೆ ಪದಾರ್ಥಗಳಾದ ಶೇಂಧಿ-ಸರಾಯಿಗಳು ಕಿರಾಣಿ ಅಂಗಡಿಗಳಲ್ಲಿ ಮಾರುತ್ತಿರುವುದಲ್ಲದೆ ಅವುಗಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿರುವುದು ದುರಂತದ ವಿಷಯವಾಗಿದೆ. ಮಕ್ಕಳ ಕೈಗೆ ಮದ್ಯ ಮತು ಮಾದಕ ವಸ್ತುಗಳ ಸಿಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ಯಲ್ಲಪ್ಪ ಎಸ್.ನಾಯ್ಕೋಡಿ ಹೇಳಿದರು.

ಗುರುವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣಿ ಅಂಗವಾಗಿ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಿರಾಣಿ ಅಂಗಡಿಗಳಲ್ಲಿ ಇಂತಹ ನಶೆ ಪದಾರ್ಥಗಳು ಮಾರಾಟವಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕಿದೆ. ಅಲ್ಲದೆ ಪಾಲಕ-ಪೋಷಕರು ಮಕ್ಕಳಿಂದ ಸಿಗರೇಟ್, ಬೀಡಿ, ತಂಬಾಕು ತರಿಸಿಕೊಳ್ಳುವುದನ್ನು ಬಿಡಬೇಕಿದೆ. ಕುಟುಂಬದಲ್ಲಿ ಯಾರೇ ಮದ್ಯ ವ್ಯಸನಿಗಳಾದಲ್ಲಿ ಇಡೀ ಕುಟುಂಬ ಕಷ್ಟದಲ್ಲಿ ಕೈ ತೊಳೆಯಬೇಕಾಗುತ್ತದೆ. ಉತ್ತಮ ಜೀವಿಯಾಗಿ ಸಮಾಜದಲ್ಲಿ ಸ್ವಾಭಿಮಾನದ ಬದುಕು ಸಾಗಿಸಬೇಕಿದಲ್ಲಿ ದುಶ್ಚಟಗಳಿಂದ ಹೊರಬರಬೇಕಿದೆ ಅವರು ಅಭಿಪ್ರಾಯಪಟ್ಟರು.

ಬೀಡಿ, ಸಿಗರೇಟಿನಂತೆ ಮೊಬೈಲ್ ಸಹ ವ್ಯಸನವವಾಗಿ ಮಾರ್ಪಟ್ಟಿದೆ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮೊಹಮ್ಮದ್ ಇರ್ಫಾನ್ ಮಹಾಗಾವಿ ಅವರು ಮಾತನಾಡಿ, ಬೀಡಿ, ಸಿಗರೇಟ್, ಶರಾಬಿನಂತೆ ಮೊಬೈಲ್ ಸಹ ವ್ಯಸನವಾಗಿ ಮಾರ್ಪಟ್ಟಿದ್ದು, ನಿಯಂತ್ರಣದಲ್ಲಿ ಇಡದಿದ್ದರೆ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ವ್ಯಸನಕ್ಕೆ ದಾಸರಾಗುತ್ತಿದ್ದು, ಇದರಿಂದ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇತರ ವ್ಯಸನದಂತೆ ಮೊಬೈಲ್ ಸಹ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದರು.

ಮದ್ಯ ಮತ್ತು ಮಾದಕ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಅವರು, ಮದ್ಯಪಾನದಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ತಲೆದೋರುವುದಲ್ಲದೆ ಪ್ರತಿಯೊಬ್ಬರ ಜೀವನ ಕಷ್ಟಕ್ಕೆ ದೂಡುತ್ತದೆ. ಖುಷಿ ನೀಡುವ ವ್ಯಸನದಿಂದ ಮೆದುಳಿನಲ್ಲಿ `ಹ್ಯಾಪಿ ಹಾರ್ಮೋನ್` ಬಿಡುಗಡೆ ಆಗುತ್ತದೆ. ಪದೇ ಪದೇ ಆದರೆ ಖುಷಿಗಾಗಿ ವ್ಯಸನ ಮುಂದುವರಿಯುತ್ತದೆ ಎಂದು ಹೇಳಿದರು.

ಹ್ಯಾಪಿ ಹಾರ್ಮೋನ್ ಕೇವಲ ದುಶ್ಚಟಗಳಾದ ಬೀಡಿ, ಸಿಗರೇಟ, ಮದ್ಯ, ಮೊಬೈಲ್‍ನಿಂದ ಮಾತ್ರ ಬಿಡುಗಡೆ ಆಗುವುದಿಲ್ಲ. ಮತ್ತೊಬ್ಬರ ಸೇವೆ ಮಾಡಿದಾಗ, ಉತ್ತಮ ಫಲಿತಾಂಶ ಬಂದಾಗ, ಪೌಷ್ಟಿಕ ಆಹಾರ ಸೇವಿಸಿದಾಗ, ಪುಸ್ತಕ ಓದಿದಾಗಲೂ ಬಿಡುಗಡೆ ಆಗುತ್ತದೆ. ಆದರೆ ನಮ್ಮ ಆಸಕ್ತಿ ವಿಷಯ ಉತ್ತಮದಾಗಿದ್ದರೆ, ಆರೋಗ್ಯಕ್ಕೆ ಪೂರಕವಾಗಿ ಇರುತ್ತದೆ. ಇಲ್ಲದಿದ್ದರೆ ವೈಯಕ್ತಿಕ ಜೀವನವಲ್ಲದೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುವಂತ ಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಹೇಳಿದಲ್ಲದೆ ಡಾ.ಮಹಾಂತ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಹೋರಾಡಿ ಕೈಯಲ್ಲಿ ಜೋಳಿಗೆ ಹಿಡಿದು ಸಾರ್ವಜನಿಕರಿಂದ ಮದ್ಯ, ದುಶ್ಚಟಗಳ ವಸ್ತುಗಳನ್ನು ಸಂಗ್ರಹಿಸಿ ಚಟಗಳನ್ನು ಬಿಡುವ ಪ್ರತಿಜ್ಞೆ ಮಾಡಿಕೊಳ್ಳುತ್ತಿದ್ದರು ಎಂದು ಸ್ವಾಮೀಜಿಯ ಸಮಾಜಮುಖಿ ಕಾರ್ಯವನ್ನು ನೆನೆದರು.

ಜಿಮ್ಸ್ ಆಸ್ಪತ್ರೆಯ ಮನೋಶಾಸ್ತ್ರ ವಿಭಾಗದ ಡಾ.ಚಂದ್ರಶೇಖರ ಹುಡೇದ್ ಮಾತನಾಡಿ, ಮದ್ಯ ಸೇವನೆ ತಪ್ಪು ಎಂಬ ಅರಿವಿದ್ದರೂ ಅದನ್ನು ಮಾಡುತ್ತೇವೆ. ವ್ಯಸನಗಳು ಆರಂಭದಲ್ಲಿ ನಮ್ಮ ನಿಯಂತ್ರಣದಲ್ಲಿ ಇರುತ್ತವೆ. ನಂತರ ಕೈಮೀರಿ ಹೋಗುತ್ತವೆ. ವ್ಯಸನಗಳ ನಿಯಂತ್ರಣಕ್ಕೆ ನಾವು ಒಳಗಾದಾಗ ಜೀವನ ಆಪತ್ತಿಗೆ ಸಿಗುತ್ತದೆ. ಆದ್ದರಿಂದ ವ್ಯಸನದ ವಸ್ತುಗಳಿಂದ ಸದಾ ದೂರ ಇರಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಚಟಗಳ ದಾಸರಾದರೆ ಭವಿಷ್ಯವೇ ಅಂಧಕಾರಕ್ಕೆ ದೂಡುವಂತಾಗುತ್ತದೆ. ಈ ಬಗ್ಗೆ ಮನೆಯಲ್ಲಿಯೂ ಜಾಗೃತಿ ಮೂಡಿಸಬೇಕು. ಹಿರಿಯರಿಗೆ ಗುಟಕಾ, ಬೀಡಿ, ಸಿಗರೇಟ್‍ನಂತಹ ವಸ್ತುಗಳನ್ನು ಅಂಗಡಿಯಿಂದ ತಂದು ಕೊಡುವುದಿಲ್ಲ ಎಂದು ನಿರಾಕರಿಸಿ, ಬುದ್ಧಿ ಹೇಳಬೇಕು ಎಂದು ಹೇಳಿದರು.

ಪ್ರತಿಜ್ಞೆ ವಿಧಿ ಬೋಧನೆ: ಇದೇ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಮದ್ಯ, ಮಾದಕ ವಸ್ತು ಮುಟ್ಟುವುದಿಲ್ಲ, ಈ ಬಗ್ಗೆ ನೆರೆ-ಹೊರೆ, ಸ್ನೇಹಿತರು-ಸಂಬಂಧಿಕರಿಗೂ ತಿಳುವಳಿಕೆ ನೀಡುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬೋಧಿಸಿದರು.

ವ್ಯಸನ ಮುಕ್ತ ಶಿಬಿರ ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ಘಟಕದಿಂದ ರಂಗಮಂದಿರ ಅವರಣದಲ್ಲಿ ವ್ಯಸನ ಮುಕ್ತ ಶಿಬಿರ ಸಹ ಅಯೋಜಿಸಲಾಗಿತ್ತು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರಾಜಕುಮಾರ್ ಎ. ಕುಲಕರ್ಣಿ ನೇತೃತ್ವದಲ್ಲಿ ಮನಶಾಸ್ತ್ರಜ್ಞೆ ಸಂತೋಷಿ ಎಂ., ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಿರಾದರ್, ಶುಶ್ರೂಷಕಿ ಸುರೇಖಾ, ಸ್ಟಾಫ್ ನರ್ಸ್ ಮಹಾನಂದ, ರೆಕಾರ್ಡ್ ಕೀಪರ್ ಶರಣು, ಕಚೇರಿ ಸಹಾಯಕರು ಶಾಂತಕುಮಾರ್, ಆಪ್ತ ಸಮಾಲೋಚಕರಾದ ರೇಖಾ, ಶರಣಬಸಪ್ಪ ಹಾಗೂ ಲಕ್ಷ್ಮಣ್ ಅವರನ್ನೊಳಗೊಂಡ ತಂಡ ವಿದ್ಯಾರ್ಥಿಗಳಿಗೆ ಮದ್ಯ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಕರಪತ್ರ ಸಹ ಮಕ್ಕಳಿಗೆ ನೀಡಲಾಯಿತು.

ಜಾಗೃತಿ ಜಾಥಾಗೆ ಚಾಲನೆ: ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಅವರಣದಿಂದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ನಡೆಗೆ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಜಾಥಾಗೆ ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಚಾಲನೆ ನೀಡಿದರು. “ಕುಡಿತಕ್ಕಿಳಿಯುವ ಮೊದಲು ನೆನಪಾಗಲಿ, ನಿಮ್ಮ ಮುದ್ದು ಮಗುವಿನ ತೊದಲು”, “ಮಡದಿ ಮಕ್ಕಳ ಸುಂದರ ಸಂಸಾರ ಕುಡಿತದಿಂದ ಎಲ್ಲವೂ ನಿಸ್ಸಾರ”, “ಬ್ರಾಂದಿ ವಿಸ್ಕಿ ಬಿಯರಿನ ಮೋಹ ಮಾಡುವುದು ಸುಖ ಸಂತೋಷಗಳ ಸ್ವಾಹ”, “ಬಿಡಿರೋ ಬಿಡಿರೋ ಕುಡಿತವ ಕಾಣಿರೋ ಕಾಣಿರೋ ಸುಖ ಸಂತೋಷದ ನವಜೀವನ” ಎಂಬಿತ್ಯಾದಿ ಬರಹಗಳ ಭಿತ್ತಿಪತ್ರ ಹಿಡಿದು ನರ್ಸಿಂಗ್ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಕಾರ್ಯಕ್ರದಮಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಜಿಲ್ಲಾ ಕುಷ್ಠರೋಗ ಅಧಿಕಾರಿಗಳು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಎಲ್. ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

6 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

6 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago