ಬಿಸಿ ಬಿಸಿ ಸುದ್ದಿ

ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಸುರೇಶ ಶರ್ಮಾ ಅಧ್ಯಕ್ಷ

ಕಲಬುರಗಿ: ಜಿಲ್ಲೆಯ ನೆಲದಲ್ಲಿ ಹುಟ್ಟಿಕೊಂಡ ದಲಿತ ಚಳವಳಿ ನಾಡಿನಾದ್ಯಂತ ವಿಸ್ತರಿಸಿ ದಮನಿತರಿಗೆ ಧ್ವನಿಯಾಗಿ ನಿಂತಿದೆ. ಇಂಥ ಚಳವಳಿಯಿಂದಲೇ ನಾಡಿನಲ್ಲಿ ದಲಿತ ಮತ್ತು ಬಂಡಾಯ ಸಾಹಿತ್ಯ ರಚನೆಯಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಅ.17 ಮತ್ತು 18 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಪ್ರಥಮ ದಲಿತ ಚಲವಳಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರಾದ ಡಾ. ಸುರೇಶ ಎಲ್ ಶರ್ಮಾ ಅವರನ್ನು ಸತ್ಕರಿಸಿ ಆಹ್ವಾನ ನೀಡಿ ನಂತರ ಮಾತನಾಡಿದ ತೇಗಲತಿಪ್ಪಿ ಯವರು,
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ ಎಲ್ ಶರ್ಮಾ, ಶರನರ ನಾಡಿನಲ್ಲಿ ನಡೆಯಲಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಅಭೂತಪೂರ್ವಕವಾಗಿ ನಡೆಸಲು ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸಬೇಕಾಗಿದೆ. ದಲಿತ ಹೋರಾಟದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಇಂಥ ಸಮ್ಮೇಳನ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಕ್ರಿಯಾಶೀಲತೆಗೆ ನಾವೆಲ್ಲರೂ ಬೆಂಬಲಿಸಲೇಬೇಕು ಎಂದು ಹೇಳಿದರು.

ಪ್ರಮುಖರಾದ ಎಸ್ ಪಿ ಸುಳ್ಳದ್, ಎಚ್. ಶಂಕರ, ಬಿ.ಸಿ. ವಾಲಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೇನವೇರಿ, ಎಂ ಎನ್ ಸುಗಂಧಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶಿವಶರಣಪ್ಪ ಬಡದಾಳ, ಪ್ರಭವ ಪಟ್ಟಣಕರ್, ಗುರು ಬಂಡಿ, ಮಹಾಂತೇಶ ರೋಢಗಿ, ಸಂಗಮನಾಥ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಧರ್ಮರಾಯ ಜವಳಿ, ಶಿವಾನಂದ ಪೂಜಾರಿ, ರಾಘವೇಂದ್ರ ಕಲ್ಯಾಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎ ಬಿ ಹೊಸಮನಿ ಅವರ ಹೇಳಿಕೆಗೆ ತೇಗಲತಿಪ್ಪಿ ಪ್ರತಿಕ್ರಿಯೆ 80ರ ದಶಕದಲ್ಲಿ ದಲಿತ ಚಲವಳಿ ಹುಟ್ಟು ಹಾಕಿದ ಡಾ. ಡಿ.ಜಿ. ಸಾಗರ ಅವರು ಇಡೀ ದಲಿತ ಸಮುದಾಯದ ಧ್ವನಿಯಾಗಿ ಹೋರಾಟಕ್ಕಿಳಿದವರು. ಅಸಮಾನತೆ, ಜಾತಿ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿ ದಮನಿತರ ಸಂಕಷ್ಟಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸಿಕೊಟ್ಟಿದ್ದಾರೆ. ಇಂಥ ಚಳವಳಿಗಳ ಪ್ರತಿರೂಪವಾಗಿ ಇಂದಿಗೂ ಹೋರಾಟದ ಬದುಕು ಸಾಗಿಸುತ್ತಿರುವ ಡಾ. ಡಿ.ಜಿ. ಸಾಗರ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನೂರಕ್ಕೆ ನೂರರಷ್ಟು ಸಮಂಜಸವಾಗಿದೆ.

ಈ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಕುರಿತು ಯಾರು ಕೂಡ ಅಪಾರ್ಥ ಕಲ್ಪಿಸಬಾರದು. ಹೋರಾಟಗಾರರಿಗೆ ಗೌರವ ತಂದು ಕೊಡುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಾ ಬಂದಿದೆ. ಇಂಥ ಹೋರಾಟಗಾರರನ್ನು ವಯಕ್ತಿಕ ನೆಲೆಗಟ್ಟಿನಿಂದ ನೋಡದೆ ಸಮಗ್ರ ದೃಷ್ಟಿಕೋನದಿಂದ ನೋಡುವಂತಾಗಬೇಕು. ಹಾಗೂ ಇವರನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಕೂಡ ಎಲ್ಲರಿಗೂ ಸಂತಸ ತಂದಿದೆ ಎಂದು ಅವರು ಸಮರ್ಥಿಸಿಕೊಂಡರು.

ಡಾ. ಡಿ.ಜಿ. ಸಾಗರ ಅವರು ಕಳೆದ ನಲವತ್ತು ವರ್ಷಗಳಿಂದ ನಾಡಿನಲ್ಲಿ ಬಹು ದೊಡ್ಡ ದಲಿತ ಸಂಘಟನೆಯೊಂದನ್ನು ಕಟ್ಟಿಕೊಂಡು ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆಗಳ ವಿರುದ್ಧ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ್ದು ಯಾರು ಮರೆಯುವಂತಿಲ್ಲ. ಜತೆಗೆ ಕವಿ-ಸಾಹಿತಿ-ಕಲಾವಿದರಿಗೆ ಪ್ರೋತ್ಸಾಹ ನೀಡಿ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಸಿದ ಕೀರ್ತಿ ಡಾ. ಡಿ.ಜಿ. ಸಾಗರ ಅವರಿಗೆ ಸಲ್ಲುತ್ತದೆ. ಇಂಥ ಶ್ರೇಷ್ಠ ಹೋರಾಟಗಾರರೊಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗ ಖುಷಿ ಪಡಬೇಕೇ ಹೊರತು ವಿರೋಧ ಮಾಡಬಾರದೆಂದು ಎಂದು ಸಲಹೆ ನೀಡಿದರು.

ಇತ್ತಿಚೆಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಹೋರಾಟಗಾರರೊಬ್ಬರಾದ ಎ ಬಿ ಹೊಸಮನಿ ಯವರು, ತಪ್ಪು ಮಾಹಿತಿ ನೀಡಿ, ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ಹತ್ತಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ತತ್ವಪದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಕಡಕೋಳ ಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು ತಮ್ಮ ಶ್ರೀಮಠದ ಪ್ರಕಾಶನದಿಂದ ಹತ್ತಕ್ಕೂ ಹೆಚ್ಚು ತತ್ವಪದ ಸಾಹಿತ್ಯ ಪ್ರಚಾರಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಿ ತತ್ವಪದಕಾರರನ್ನು ಜೀವಂತವಾಗಿರಿಸಿದ್ದಾರೆ. ಎಲ್ಲಾ ಸಂಗತಿಗಳನ್ನು ಗೊತ್ತಿಲ್ಲದೆ ತಪ್ಪು ಮಾಹಿತಿ ಸಮಾಜಕ್ಕೆ ನೀಡಬಾರದೆಂದು ಸಲಹೆ ನೀಡಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago