ಸಗರನಾಡು ಶಿವಶರಣರ ಬೀಡು; ಸಚಿವ ದರ್ಶನಾಪೂರ

ಕಲಬುರಗಿ; ಶರಣರ ವಚನಗಳಂತೆ ಮಹಾತ್ಮಾ ಚರಬಸವೇಶ್ವರರು ಆಡದ ಮಾಡಿದವರು, ಎಲೆಮರೆಯ ಕಾಯಿಯಂತೆ ಬಲಗೈಯಿಂದ ಮಾಡಿದ್ದು ಎಡಗೈಗೆ ಗೊತ್ತಿಲ್ಲದಂತೆ ಅಂದು ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಬಾಳಿ ಬದುಕಿ ಕಾಯಕ ದಾಸೋಹ ಮಾಡುತ್ತ ಇಡಿ ಜೀವನಪೂರ್ತಿ ಬದುಕಿ ತೋರಿಸಿದ ಮಹಾನ ಸಂತರೆ ಶ್ರೀ ಚರಬಸವೇಶ್ವರರು ಎಂದು ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಸಗರನಾಡಿನ ಮಹಾತ್ಮಾ ಶ್ರೀ ಚರಬಸವೇಶ್ವರ ಪುರಾಣ ಪ್ರವಚನ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಾ ಶ್ರೀ ಚರಬಸವೇಶ್ವರರು ಭವ್ಯವಾದ ದಾರ್ಶನಿಕ ಪರಂಪರೆಯು ಶಹಾಪೂರದಲ್ಲಿ ನಮ್ಮ ನಿಮ್ಮೆಲ್ಲರಂತೆ ಸಹಜಾತಿ ಸಹಜರಾಗಿ ಬಾಳಿ ಬದುಕುವ ಮೂಲಕ ತನ್ನ ಸುತ್ತಲಿನ ಜನತೆಗೆ ಕಾಯಕವೆಂದರೆ ಏನು ? ದಾಸೋಹ ಎಂದರೆ ಏನು ಎಂದು ತಮ್ಮ ಬದುಕಿನುದ್ಧಕ್ಕೂ ನಡೆದು ತೋರಿಸಿಕೊಟ್ಟು ತನ್ನದೆ ಆದ ಒಂದು ಪರಂಪರೆ ಬೆಳೆಸಿಹೋದ ಮಹಾತ್ಮಾ ಶ್ರೀ ಚರಬಸವೇಶ್ವರರು ಎಂದು ಶ್ರೀ ಚರಬಸವೇಶ್ವರರ ಸಂಸ್ಥಾನದ ಮೊಮ್ಮಗ (ಕುಡಿ) ಕ.ರ.ವೇ ಉತ್ತರ ಕರ್ನಾಟಕದ ಅಧ್ಯಕ್ಷರಾದ ಡಾ. ಶರಣು ಬಿ.ಗದ್ದುಗೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಬಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಕ್ತಿಯಿಂದ ಮನುಷ್ಯನನ್ನು ದೇವರ ಸಾನಿಧ್ಯಕ್ಕೆ ಮುಟ್ಟಿಸುವಂತ ಶಕ್ತಿ ಪುರಾಣ ಪ್ರವಚನದಲ್ಲಿದೆ ಅಂದರೆ ಭಕ್ತಿಯನ್ನೆ ಹುಟ್ಟಿಸುವ ಶಕ್ತಿಯೇ ಪುರಾಣ ಪ್ರವಚನಗಳಿಂದ ಸೃಷ್ಟಿಯಾಗಿವೆ. ಪರಾಣದಲ್ಲಿ ಭಕ್ತಿರಸಕ್ಕೆ ಹೆಚ್ಚು ಮಹತ್ವವಿದೆ. ನಹಾತ್ಮಾ ಶ್ರೀ ಚರಬಸವೇಶ್ವರರು ಬದುಕಿದ ರೀತಿ ಕಾಯಕ ದಾಸೋಹ, ಭಕ್ತಿ, ಪ್ರೀತಿ, ಸಹನೆ, ತಾಳ್ಮೆ ಶ್ರದ್ಧೆಯಿಂದ ಬದುಕು ಸಾರ್ಥಕ ಮಾಡಿಕೊಂಡು ಇಂದಿಗೂ ಇಡಿ ಜಿಲ್ಲೆಯ ಜನರಲ್ಲಿ ಬೇರೂರಿದ್ದಾರೆ. ಎಂದು ಗದ್ದುಗೆ ಮಠದ ಪೂಜ್ಯ ಶ್ರೀ. ಮ.ನಿ.ಪ್ರ.ಚರಲಿಂಗ ಮಹಾಸ್ವಾಮಿಗಳು ಪುರಾಣ ಉದ್ಘಾಟನಾ ಸಮಾರಂಭದ ದಿವಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪ್ರಾರಂಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಉಮೇಶಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು, ಖಜಾಂಚಿ ಗುರುಲಿಂಗಯ್ಯ ಮಠಪತಿ ವಂದಿಸಿದರು.

ಪುರಾಣ ಪ್ರವಚನಕಾರರಾದ ಶಂಬುಲಿಂಗ ಶಾಸ್ತ್ರಿ ಪುರಾಣದ ಮೊದಲನೆಯ ಅಧ್ಯಾಯ ಓದಿ ಪುರಾಣ ಪ್ರಾರಂಭಿಸಿದರು. ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ದಣ್ಣ ದೇಸಾಯಿಕಲ್ಲೂರ ಪ್ರಾರ್ಥನೆ ಹಾಗು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಗತಿ ಕಾಲೋನಿಯ ಅಣ್ಣಾರಾವ ಹೆಬ್ಬಾಳ, ಎಸ್.ಜಿ.ಬಿರಾದಾರ, ರೇವಣಸಿದ್ದಪ್ಪ ಜೀವಣಗಿ, ಬಡೆಪೂರ ಕಾಲೋನಿ ಸುಭಾಷ ನರೋಣಾ, ಆದರ್ಶ ನಗರದಿಂದ ನಾಗೇಂದ್ರಪ್ಪ ಪಾಟೀಲ ಗೌನಳ್ಳಿ, ಬಸವೇಶ್ವರ ಕಾಲೋನಿಯಿಂದ ಬಸವರಾಜ ಸಜ್ಜನ, ಸ್ವಸ್ತಿಕನಗರದ ಆರ್.ಎಸ್. ಗುಗವಾಡ, ಬ್ರಹ್ಮಪೂರ ಕಾಲೋನಿಯಿಂದ ವಿನೋದಕುಮಾರ ಜೇನೆವೆರಿ, ಶಿವಲಿಂಗಪ್ಪ ಅಷ್ಠಗಿ, ಗುಬ್ಬಿ ಕಾಲೋನಿ ಶಿವಕುಮಾರ ಕಾಳಗಿ, ರಾಮಮಂದಿರ ವೃತ್ತದಿಂದ ವಿಜಯಕುಮಾರ ಸೋಗಿ, ಸರಸ್ವತಿಪೂರಂ ಕಾಲೋನಿಯಿಂದ ವಿಶ್ವನಾಥ ತೊಟ್ನಳ್ಳಿ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಸದಸ್ಯರು, ಅಕ್ಕಮಹಾದೇವಿ ಮಹಿಳಾ ಘಟಕದ ಮಲ್ಲಿಕಾರ್ಜುನ ತರುಣ ಸಂಘದ ಪದಾಧಿಕಾರಿಗಳು ಹೀಗೆ ಸುಮಾರು 25 ಕಾಲೋನಿ ಭಕ್ತರು ಪುರಾಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಕಲ್ಯಾಣ ಕರ್ನಾಟಕ ಉತ್ಸವ 18 ರಂದು ಆಚರಿಸಲು ಆಗ್ರಹ

ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…

11 hours ago

ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಮನವಿ

ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…

11 hours ago

ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ: ಭೀಮನಗೌಡ ಪರಗೊಂಡ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…

12 hours ago

10 ವರ್ಷಗಳ ನಂತರ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಡಾ. ಅಜಯಸಿಂಗ್

ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…

13 hours ago

ಕೆಐಡಿಸಿಸಿ ಕಪ್ ಕ್ರಿಕೆಟ್ ಟೋರ್ನಮೆಂಟ್ ಸೀಸನ್ 3 ಲಾಂಛನ ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…

14 hours ago

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420