ಬಿಸಿ ಬಿಸಿ ಸುದ್ದಿ

ಕೈಮಗ್ಗ ನೇಕಾರರ ಖರೀದಿಸುವ ನೂಲಿಗೆ ಶೇ.50ರಷ್ಟು ರಿಯಾಯತಿ

ಕಲಬುರಗಿ: ಕೈಮಗ್ಗ ನೇಕಾರರು ಖರೀದಿಸುವ ನೂಲಿಗೆ ಶೇ.೫೦ರಷ್ಟು ರಿಯಾಯತಿ ನೀಡುವ ಕುರಿತು ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವುದಾಗಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭರವಸೆ ನೀಡಿದರು.

ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡ ೧೦ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೇಕಾರರಿಂದ ಖರೀದಿಸಿ ಬಟ್ಟೆಗೆ ಕೊಡಬೇಕಾದ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ. ನೇಕಾರರಿಂದ ಖರೀದಿಸಿದ ಗುಣಮಟ್ಟದ ಬಟ್ಟೆಗಳ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ಪರಿಹರಿಸಲಾಗಿದೆ ಎಂದರು.

ಸ್ಪರ್ಧಾತ್ಮಕ ಇಂದಿನ ಯುಗದಲ್ಲಿ ಕೈಮಗ್ಗ ನೇಕಾರರ ಬದುಕುವುದು ಕಷ್ಟಕರವಾಗಿದೆ. ಅವರ ಸಮಸ್ಯೆಗಳನ್ನು ಅರಿತುಕೊಂಡು, ನೇಕಾರಿಕೆ, ನೇಕಾರರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು, ಪ್ರತಿಯೊಬ್ಬರೂ ಜೀವಿಸಲು ಅನ್ನ ಎಷ್ಟು ಮುಖ್ಯವೋ, ವಸ್ತ್ರವೂ ಅಷ್ಟೆ ಮುಖ್ಯವಾಗಿದೆ. ದೇಶದಲ್ಲಿ ಒಕ್ಕಲುತನ ಹಾಗೂ ನೇಕಾರಿಗೆ ಪ್ರಮುಖ ಉದ್ಯೋಗಗಳಾಗಿವೆ. ನೇಕಾರರು ಸ್ವಾಭಿಮಾನದ ಬದುಕಿಗೆ, ಆವರ ಆರ್ಥಿಕ ವೃದ್ಧಿಗೆ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಸುಭಾಷ ಬಣಗಾರ್ ಅವರು, ನೇಕಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಕೈಮಗ್ಗದ ಬಟ್ಟೆಯನ್ನು ಸರಕಾರ ನೇರವಾಗಿ ಖರೀದಿ ಮಾಡಿ ಮಾರುಕಟ್ಟೆ ಒದಗಿಸಬೇಕು, ಅವರ ಸಮಸ್ಯೆಗಳು ಚರ್ಚಿಸಲು ಹಾಗೂ ಸಂಘಟನೆ ಮಾಡಿಕೊಳ್ಳಲು, ವಿವಿಧ ಕಾರ್ಯಕ್ರಮಗಳಿಗಾಗಿ ನೇಕಾರ ಭವನ ನಿರ್ಮಾಣ ಮಾಡಬೇಕು, ನೇಕಾರರ ಖರೀದಿಸುವ ನೂಲಿಗೆ ಶೇ. ೫೦ರಷ್ಟು ರಿಯಾಯತಿ ನೀಡಬೇಕು, ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ, ವೈದ್ಯರು, ಸಾರಿಗೆ ನೌಕರರು ಸೇರಿದಂತೆ ಅಗತ್ಯವಿರುವ ಕಡೆ ಸಮವಸ್ತ್ರಗಳ ಬಳಕೆಗೆ ಕೈಮಗ್ಗದ ಬಟ್ಟೆಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.

ನೇಕಾರಿಕೆ ವೃತ್ತಿ ಮೊದಲಿನಿಂದಲೂ ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆಯಾಗಿ ಬೆಳೆದು ಬಂದಿದೆ. ನೇಕಾರಿಕೆ ವೃತ್ತಿ ಕೇವಲ ಒಂದು ಜನಾಂಗದವರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಜನಾಂಗದವರು ಈ ವೃತ್ತಿಯಲ್ಲಿ ತೊಡಗಿದ್ದಾರೆ. ಆದರೆ ಸ್ಪರ್ಧಾತ್ಮಕ ಇಂದಿನ ಯುಗದಲ್ಲಿ ಮೂಲ ನೇಕಾರರು ಮಾತ್ರ ಮೂಲೆಗುಂಪಾಗುತ್ತಿದ್ದಾರೆ. ಇವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಡೆಯುಬೇಕು ಎಂದರು.

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಿತಿಯ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಕಾಯಕ್ರಮದ ಅಧ್ಯಕ್ಷತೆ ವಹಿಸಿ, ದೇವರ ದಾಸಿಮಯ್ಯ, ಫ.ಗು.ಹಳಕಟ್ಟಿ ಅವರ ಜಯಂತಿ ಅಲ್ಲದೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನೇಕಾರ ಬಾಂಧವರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಆಗಿವೆ. ಇವುಗಳನ್ನು ರಾಷ್ಟ್ರೀಯ ಹಬ್ಬಗಳನ್ನಾಗಿ ಒಗ್ಗಟ್ಟಿನಿಂದ ಸಂಭ್ರಮದಿಂದ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಸಂಗಾ, ಗುರುನಾಥ ಸೊನ್ನದ, ದಾಸಿಮಯ್ಯ ವಡ್ಡನಕೇರಿ, ಬಸವರಾಜ ಕರದಳ್ಳಿ, ಚನ್ನಮಲ್ಲಪ್ಪಾ ನಿಂಬೆಣ್ಣಿ, ಚಂದ್ರಶೇಖರ ಮ್ಯಾಳಗಿ, ಶ್ರೀನಿವಾಸ ಬಲಪೂರ, ಹಣಮಂತ ಕಣ್ಣಿ, ಅಶೋಕ ಮುನ್ನೋಳ್ಳಿ, ಶಿವಶಂಕರ ಪೂಜಾರಿ, ಗಣಪತಿ ರಾಠೋಡ, ಬಸಣ್ಣಾ ಸಿಂಗೆ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಕುಶಾಲ ಯಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿನೋದಕುಮಾರ ಎಸ್ ಜನೇವರಿ ವಂದಿಸಿದರು.

ಮನವಿ ಸಲ್ಲಿಕೆ; ನೇಕಾರರ ಅಭಿವೃದ್ಧಿಗಾಗಿ ಜವಳಿ ಪಾರ್ಕ್ ಸ್ಥಾಪನೆಗೆ ಚಾಲನೆ ನೀಡಬೇಕು. ಕೈಮಗ್ಗ ಪ್ರೋತ್ಸಾಹಿಸಲು ತರಬೇತಿ ಕೇಂದ್ರ ಸ್ಥಾಪಿಸಬೇಕು, ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬದವರಿಗೆ ೫ ಲಕ್ಷ ರೂ. ಪರಿಹಾರ ನೀಡಬೇಕು, ನೇಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಬೇಕು. ನೇಕಾರ ಸಮ್ಮಾನ ಯೋಜನೆ ಜಾರಿಗೆ ತರಬೇಕು, ಪಾರಂಪರಿಕ ನೇಕಾರ ಸಮುದಾಯದ ಬೆಳವಣಿಗೆಗೆ ಸ್ಥಳ, ಜಮೀನು ಮಂಜೂರು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಮಿತಿಯ ಸದಸ್ಯರು ಸಚಿವರಿಗೆ ಸಲ್ಲಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago