ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ

ಕಲಬುರಗಿ: ಮುಡಾ ನಿವೇಶನ ವಿಚಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ಇಲ್ಲ. ವಿನಕಾರಣ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಅಣ್ಣಯ್ಯ, ವಿಭಾಗಿಯ ಸಂಚಾಲಕ ಮಂಜುನಾಥ ಅಣ್ಣಯ್ಯ ಹಾಗೂ ಕಲಬುರಗಿಯ ಜಿಲ್ಲಾ ಸಂಚಾಲಕ ವಿನೋದಕುಮಾರ ಎಸ್. ಕಾಂಬಳೆ ಇವರು ತೀವ್ರ ಖಂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಸಹಿಸದ ವಿಪಕ್ಷಗಳು ಅವರ ಹೆಸರನ್ನು ಹಾಳುಗೆಡವಲು ಅವರಿಗೆ ಸಂಬಂಧವೇ ಇಲ್ಲದ ವಿಷಯವಾಗಿರುವ ಹಾಗೂ ಅವರ ಪತ್ನಿಗೆ ತವರು ಮನೆಯಿಂದ ಬಂದಿರುವ ನಿವೇಶನದ ಬಗ್ಗೆ ಪ್ರಮುಖವಾಗಿ ಪಿಟಿಸಿಎಲ್ ಕಾಯ್ದೆಗೆ ಅನ್ವಯಿಸದೆ ಇರುವ ವಿಚಾರವನ್ನು ಮುಂದಿಟ್ಟುಕೊಂಡು ಕುತಂತ್ರ ಮಾಡುತ್ತಿದ್ದಾರೆ.

ಈ ಹಿಂದೆ ಯಾರೂ ಕೂಡ ಈ ರೀತಿ ನಿವೇಶನ ಪಡೆದಿಲ್ವಾ? ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ 14 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪಾರದರ್ಶಕ ಆಡಳಿತ ನೀಡಿದ್ದು, ದ.ಸಂ.ಸ.ಕ. (ರಿ) ಸಂಘಟನೆ ಅವರ ಬೆನ್ನಿಗೆ ಸದಾ ನಿಲ್ಲಲಿದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗರುವ ಹಗರಣದ ಬಗ್ಗೆ ಈಗಾಗಲೆ ಆ ಇಲಾಖೆಯ ಸಚಿವರಾದ ನಾಗೇಂದ್ರ ರಾಜೀನಾಮೆ ನೀಡಿದ್ದು, ಅವರನ್ನೂ ಸೇರಿ ಇನ್ನಿಬ್ಬರ ಅಧಿಕಾರಿಗಳನ್ನು ಬಂಧಿಸಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ.

ಇಂತಹ ಸಂದರ್ಭದಲ್ಲಿ ವಿನಾಕಾರಣ ವಾಲ್ಮೀಕಿ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಮುಂದಕ್ಕೆ ತಂದು ಅವರನ್ನು ಸಿಲುಕಿಸುವ ಸಂಚು ವಿಪಕ್ಷಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ನಿಗಮದ ಹಗರಣದಲ್ಲಿ ಯೂನಿಯನ್ ಬ್ಯಾಂಕ್‍ನಲ್ಲಿ 89 ಕೋಟಿ ವಹಿವಾಟು ಆಗಿದ್ದರೆ, ವ್ಯವಸ್ಥಾಪಕರನ್ನೇಕೆ ಇನ್ನು ಬಂಧಿಸಿಲ್ಲ ಎನ್ನುವುದನ್ನು ಚರ್ಚೆ ಮಾಡಲಿ. ಅವರ ಬಂಧನಕ್ಕೆ ಒತ್ತಾಯಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ಅನೀಲಕುಮಾರ ಎನ್. ವಳಕೇರಿ, ಸತೀಶಕುಮಾರ ಬಿ. ಸಾಗನೂರ, ಮೋಹನ ದಿನಸಿ, ಹಣಮಂತ ಮೆಲಕೇರಿ, ಸೂರ್ಯಕಾಂತ ಜಾನೆ ಸಏರಿದಂತೆ ಇತರರು ಇದ್ದರು.

emedialine

Recent Posts

ಕಲಬುರಗಿ: ಇಎಸ್ ಐಸಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ನರರೋಗ ತಜ್ಞರ ಪ್ರಾರಂಭಕ್ಕೆ ಆಗ್ರಹ

ಕಲಬುರಗಿ: ನಗರದಲ್ಲಿನ ಇಎಸ್ ಐಸಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿಕಿರಣಶಾಸ್ತ್ರ ವಿಭಾಗದಲ್ಲಿ ಸಿಟಿ ಸ್ಕ್ಯಾನ್ ಮಾಡುವುದಕ್ಕೆ 30 ದಿನಗಳ ಸಮಯ ತೆಗೆದುಕೊಳ್ಳುತ್ತಿರುವುದನ್ನು…

19 mins ago

ರಾಜ್ಯಮಟ್ಟದ ಗಮಕ‌ ಸಮ್ಮೇಳ‌ನ

ಕಲಬುರಗಿ: ಜೇವರ್ಗಿ ತಾಲೂಕು‌ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೈಸೂರಿನ ಪರಂಪರೆ ಸಂಸ್ಥಯ ಸಹಯೋಗದಲ್ಲಿ ಜೇವರ್ಗಿಯ ಟೌನ್ ಹಾಲ್ ಹಳೆ…

23 mins ago

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…

11 hours ago

ಭ್ರಷ್ಟಾಚಾರ ರಹಿತ ವಿವಿಗೆ ಆದ್ಯತೆ: ರಾಘವೇಂದ್ರ ಭೈರಪ್ಪ

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…

12 hours ago

ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…

12 hours ago

ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420