ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಶಸ್ತಿ

ಕಲಬುರಗಿ; ಶನಿವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲಿ,್ಲ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ಆಯೋಜಿಸಿದ್ದ 47ನೇ ಸರಣಿ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್, ವಾರ್ಷಿಕ ರಾಜ್ಯ ಮಟ್ಟದ ಪೆÇೀಸ್ಟರ್ ಪ್ರಸ್ತುತಿ ಮತ್ತು ಯೋಜನೆಗಳ ಪ್ರದರ್ಶನದಲ್ಲಿ ಪ್ರತಿಷ್ಠಿತ ಅತ್ಯುತ್ತಮ ಪ್ರದರ್ಶನ ಕಾಲೇಜು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಓಂಐ) ಮತ್ತು ಇತರ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಪ್ರಮುಖ ಸಂಸ್ಥೆಗಳ ಹಿರಿಯ ವಿಜ್ಞಾನಿಗಳನ್ನು ಒಳಗೊಂಡಿರುವ ತೀರ್ಪುಗಾರರ ಸಮಿತಿಯು, ವಿವಿಧ ಕಾಲೇಜುಗಳು ಮತ್ತು ಉನ್ನತ ಅಧ್ಯಯನ ಸಂಸ್ಥೆಗಳು ಸಲ್ಲಿಸಿದ ಯೋಜನೆಗಳ ಸಂಖ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡಿತು. ಪ್ರತಿ ವರ್ಷ ರಾಜ್ಯದ ಒಂದು ಕಾಲೇಜಿಗೆ ನೀಡುವ ಅತ್ಯುತ್ತಮ ಪ್ರದರ್ಶನ ಕಾಲೇಜು ಪ್ರಶಸ್ತಿಯ ಆಯ್ಕೆಯನ್ನು ಅಂತಿಮಗೊಳಿಸುವ ಮೊದಲು ಯೋಜನೆಗಳ ಗುಣಮಟ್ಟ, ಪ್ರಸ್ತುತಿ ಮತ್ತು ಇತರ ಅಂಶಗಳನ್ನು ಪರಿಶೀಲಿಸಲಾಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿಯ ಪ್ರಾದೇಶಿಕ ನಿರ್ದೇಶಕ ಪೆÇ್ರ. ಬಸವರಾಜ ಗದಗೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಸೇರಿದಂತೆ ಇತರ ಗಣ್ಯರು, ಐಐಎಸ್‍ಸಿಯ ಹಿರಿಯ ಅಧ್ಯಾಪಕರು ಹಾಗೂ ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಪೆÇ್ರ. ಅಶೋಕ್ ಎಂ. ರಾಯಚೂರು, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು. ಟಿ. ವಿಜಯ್ ಸೇರಿಕೊಂಡು, ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದಕ್ಕೆ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ. ಡೊಳ್ಳೇಗೌಡರ್ ಮತ್ತಿತರ ಗಣ್ಯರು ಕೈಜೋಡಿಸಿ ಅಭಿನಂದಿಸಿದರು.

25 ಅತ್ಯುತ್ತಮ ಪೆÇೀಸ್ಟರ್ ಪ್ರಸ್ತುತಿ ಯೋಜನೆಗಳು ಮತ್ತು 23 ಅತ್ಯುತ್ತಮ ಪ್ರದರ್ಶನ ಯೋಜನೆಗಳನ್ನು ಒಳಗೊಂಡಂತೆ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಒಟ್ಟು 48 ಅತ್ಯುತ್ತಮ ಪ್ರಾಜೆಕ್ಟ್‍ಗಳನ್ನು ಅಂತಿಮಗೊಳಿಸಿ ಗಣ್ಯರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿದರು.

ಬೆಂಗಳೂರಿನ ರಾಮಯ್ಯ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ದಯಾನಂದ ಕಾಲೇಜ್ ಆಫ್ ಟೆಕ್ನಾಲಜಿ ಜೊತೆಗೂಡಿ ಅತ್ಯುತ್ತಮ ಪ್ರದರ್ಶನ ಕಾಲೇಜು ಪ್ರಶಸ್ತಿಯನ್ನು ಪಡೆದಿದ್ದು, ತಲಾ ಮೂರು ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಯೋಜನೆಗಳಲ್ಲಿ ಗಮನ ಸೆಳೆದ ಶಿಕ್ಷಣ ಸಂಸ್ಥೆಗಳಲ್ಲಿ, ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ ಸೇರಿವೆ. ಆರ್ ವಿ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು, ಜಿ ಎಂ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ದಾವಣಗೆರೆ, ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಮೂಡುಬಿದಿರೆ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್, ಮಂಗಳೂರು, ಮತ್ತು ಃಐಆಇಂ’S ಗಿ P ಆಡಿ Pಉ ಕಲಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಜಯಪುರ ತಲಾ ಎರಡು ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಗಳನ್ನು ಪಡೆದುಕೊಂಡವು.
47 ನೇ ಸರಣಿಯ ಎಸ್‍ಪಿಪಿ ವಾರ್ಷಿಕ ರಾಜ್ಯ ಮಟ್ಟದ ಪೆÇೀಸ್ಟರ್ ಪ್ರಸ್ತುತಿ ಮತ್ತು ಪ್ರಾಜೆಕ್ಟ್ ಎಕ್ಸಿಬಿಷನ್‍ಗೆ ಆಯ್ಕೆಯಾದ ಒಟ್ಟು 354 ಪ್ರಾಜೆಕ್ಟ್‍ಗಳಲ್ಲಿ 210 ಪ್ರಾಜೆಕ್ಟ್‍ಗಳನ್ನು ಕರ್ನಾಟಕದ ವಿವಿಧ ಭಾಗಗಳಿಂದ 142 ಕಾಲೇಜುಗಳಿಂದ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು ಮತ್ತು ಈ ಪ್ರಾಜೆಕ್ಟ್‍ಗಳನ್ನು ಸಿದ್ಧಪಡಿಸಿದ 350 ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕ-ಶಿಕ್ಷಕರೊಂದಿಗೆ ಪ್ರದರ್ಶಿಸಿದರು. ಪ್ರದರ್ಶನದಲ್ಲಿ ತೀರ್ಪುಗಾರರು ಈ ಎಲ್ಲಾ ಯೋಜನೆಗಳನ್ನು ವೀಕ್ಷಿಸಿದರು.

ಈ ಎರಡು ದಿನಗಳ ರಾಜ್ಯ ಮಟ್ಟದ ವಸ್ತುಪ್ರದರ್ಶನದಲ್ಲಿ ಆತಿಥೇಯ ಶರಣಬಸವ ವಿಶ್ವವಿದ್ಯಾಲಯವು ಪ್ರದರ್ಶಿಸಿದ ಅತ್ಯುತ್ತಮ ಸೌಕರ್ಯಗಳು ಮತ್ತು ಆತಿಥ್ಯಕ್ಕಾಗಿ ಹಾಗೂ ಎರಡು ದಿನಗಳ ಅವಧಿಯಲ್ಲಿ ಭಾಗವಹಿಸುವವರು ಮತ್ತು ಅತಿಥಿಗಳ ಪ್ರತಿಯೊಂದು ಅಗತ್ಯವನ್ನು ಕಾಳಜಿ ವಹಿಸಿದ್ದಕ್ಕಾಗಿ ಪೆÇ್ರಫೆಸರ್ ಅಶೋಕ್ ಎಂ ರಾಯಚೂರು ಮತ್ತು ಡಾ ಯು ಟಿ ವಿಜಯ್ ಸೇರಿದಂತೆ ಕೆಎಸ್‍ಸಿಎಸ್‍ಟಿಯ ಅಧಿಕಾರಿಗಳು ಪ್ರಶಂಸಿಸಿದರು.

ಈ ಸಮಾರಂಭದಲ್ಲಿ ಪೆÇ್ರ. ಬಸವರಾಜ ಗದಗೆಯವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡು ವರ್ಷಕ್ಕೊಮ್ಮೆಯಾದರೂ ಇಂತಹ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಿ ಈ ಭಾಗದ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೇರೇಪಿಸುವಂತೆ ಕೆಎಸ್‍ಸಿಎಸ್‍ಟಿಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪೆÇ್ರ. ಅನಿಲಕುಮಾರ ಬಿಡವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಪೆÇ್ರ. ನಾಗಬಸವಣ್ಣ ಗುರುಗೋಳ ವಂದಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಡೈರೆಕ್ಟರ್ ಡಾ. ವಿ. ಡಿ. ಮೈತ್ರಿ, ಕುಲಸಚಿವ ಪೆÇ್ರ. ಎಸ್. ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಹಣಕಾಸು ಅಧಿಕಾರಿ ಪೆÇ್ರ. ಕಿರಣ್ ಮಾಕಾ ಸೇರಿದಂತೆ ಇತರ ಪ್ರಮುಖರು ವೇದಿಕೆ ಮೇಲಿದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

7 mins ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

30 mins ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

2 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

2 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

2 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420