ಕಲಬುರಗಿ :ಕಪನೂರ ಹಜರತ್ ಸೈಯದ್ ಶಹಾ ಫೈಜಾನ್ ಖಾದ್ರಿ ದರ್ಗಾದ ಶ್ರೀಗಳಾದ ಮನ್ಸೂರ ಅಲಿ ಬಾಬಾ ಅವರಿಗೆ ಜರ್ಮನಿಯ ಅಂತರಾಷ್ಟ್ರೀಯ ಪೀಸ್ ವಿಶ್ವವಿದ್ಯಾಲಯವು 2024ನೇ ಸಾಲಿನ ಸಾಮಾಜಿಕ ಸೇವೆಗಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದಕ್ಕೆ ವಾರ್ಡ.2.ರ ಮಹಾನಗರ ಪಾಲಿಕೆ ಸದಸ್ಯ ಸುನೀಲ ಮಚ್ಚಟ್ಟಿ ಹಾಗೂ ನಂದಿ ದಾಲಮೇಲ್ ಮಾಲಿಕ ಚಂದ್ರಕಾಂತ ಎನ್.ಮಚ್ಚಟ್ಟಿ ಜಂಟಿಯಾಗಿ ಬಾಬಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಶನಿವಾರ ಪಾಂಡಿಚೇರಿಯ ಖಾಸಗಿ ಸೆಹನಬಾಗ್ ಹೋಟೆಲ್ ಮತ್ತು ಕನ್ವೇನಪ್ ಸೆಂಟರ್‍ನಲ್ಲಿ ಜರುಗಿದ ಸಮಾರಂಭದಲ್ಲಿ ಈ ಪದವಿಯನ್ನು ಪ್ರದಾನ ಮಾಡಲಾಗಿದೆ.
ಸುಮಾರು ನಾಲ್ಕು ದಶಕಗಳಿಂದ ಹಜರತ್ ಸೈಯದ್ ಶಹಾ ಫೈಜಾನ್ ಖಾದ್ರಿ ದರ್ಗಾದ ಶ್ರೀಗಳಾಗಿ ಹಲವಾರು ಸಾಮಾಜಿಕ, ಧಾರ್ಮಿಕ ಅಲ್ಲದೆ ದರ್ಗಾ ಅಡಿಯಲ್ಲಿ ಉಚಿತವಾಗಿ ಬಡಮಕ್ಕಳಿಗೆ ಶಿಕ್ಷಣ ನೀಡಲು ಕಲಬುರಗಿಯ ಕಪನೂರ ಹಾಗೂ ಬಂದರವಾಡಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸಹ ಪ್ರಾರಂಭಿಸಿ, ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಅಳಿಲು ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಕಾರ್ಯಯಲ್ಲಿ ತೊಡಗಿದ್ದ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಜರ್ಮನ್‍ನ ಅಂತರಾಷ್ಟ್ರ್ರೀೀಯ ಪೀಸ್ ವಿಶ್ವವಿದ್ಯಾಲಯವು ಈ ಡಾಕ್ಟರೆಟ್ ಪದವಿಯನ್ನು ನೀಡುವ ಮೂಲಕ ಇವರು ಇನ್ನು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಒತ್ತು ನೀಡಿದಂತಾಗಿದೆ.
ಲೋಕಕಲ್ಯಾಣಕ್ಕಾಗಿ ಬಾಬಾ ಅವರು ಹಲವಾರು ಊಟ, ನೀರಿಲ್ಲದೇ ಅನುಷ್ಠಾನ ಸಹ ಮಾಡಿದ್ದು, ಒಂದು ಬಾರಿಯಂತು ಅನುಷ್ಠಾನ ಕುಳಿತ ಸ್ಥಳವನ್ನು ನಾಲ್ಕು ದಿಕ್ಕುಗಳಿಂದ ಮುಚ್ಚಿ ಅಂದರೆ ಗೋಡೆ ಕಟ್ಟಿ ಅದರ ಮಧ್ಯ ಅನುಷ್ಠಾನಗೈದಂತಹ ಈ ಶ್ರೀಗಳು ಆಂದ್ರ ಪ್ರದೇಶದ ಶ್ರೀಶೈಲಂನಲ್ಲಿಯೂ ಕೂಡ ಅನುಷ್ಠಾನಗೈದಿದ್ದಾರೆ. ಎಂದು ಪ್ರಕಟಣೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…