ಕಲಬುರಗಿ: ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಜಯಪುರದ ಹಿರಿಯ ಗಜಲ್ ಕವಯಿತ್ರಿ ಪ್ರಭಾವತಿ ಎಸ್.ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಸಂಯೋಜಕ ಅಬ್ದುಲ್ ಹೈ.ತೋರಣಗಲ್ಲು ಅವರು, ಕಲಬುರಗಿ ನಗರದಲ್ಲಿ ಇದೇ ತಿಂಗಳು ೨೫ ರಂದು ನಡೆಯಲಿರುವ ಗಜಲ್ ಸಮ್ಮೇಳನಾಧ್ಯಕ್ಷರನ್ನಾಗಿ ಪ್ರಭಾವತಿ ದೇಸಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರು ಸಹಯೋಗ ನೀಡಿದೆ ಎಂದು ತಿಳಿಸಿದ್ದಾರೆ.
ಸುಮಾರು ಕನ್ನಡದಲ್ಲಿ ಒಂಬತ್ತು ಗಜಲ್ ಕೃತಿಗಳನ್ನು ಕೊಟ್ಟಿದ್ದು, ೭೭ ವರ್ಷದ ಪ್ರಭಾವತಿ ದೇಸಾಯಿ ಅವರು ಕಲಬುರಗಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯವರು. ವಿಜಯಪುರದ ದೇಸಾಯಿ ಕುಟುಂಬದ ಸೊಸೆಯಾಗಿದ್ದಾರೆ. ಮದುವೆಯಾದ ಮೇಲೂ ಬರಹವನ್ನು ಮುಂದುವರಿಸಿದ್ದಾರೆ.
ಹುಬ್ಬಳ್ಳಿಯ ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್‌ದಲ್ಲಿ ಡಿಪ್ಲೋಮಾ ಮಾಡಿದ್ದಾರೆ. ವಿಜಯಪುರದ ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಹೊಲಿಗೆಯ ಮುಖ್ಯ ಬೋಧÀಕರೆಂದು ಕಾರ್ಯ ನಿರ್ವಹಿಸುತ್ತಾ ಎರಡು ಪದವಿ ಮಾಡಿದ್ದಾರೆ. ನಿವೃತ್ತಿ ಹೊಂದಿದ ಮೇಲೆ ಎಂ.ಎ.ತೇರ್ಗಡೆ. ಸೇವೆಯಿಂದ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಟ್ಟು ೨೩ ಕೃತಿಗಳು ಪ್ರಕಟವಾಗಿವೆ. ಕವಿತೆ, ಹನಿಗವನ, ಪ್ರಬಂಧ, ಆಧುನಿಕ ವಚನಗಳು, ಕಥೆ, ಪ್ರವಾಸ ಕಥನ, ಗಜಲ್ (ಕನ್ನಡ), ವಿಮರ್ಶೆ… ಹೀಗೆ ಎಲ್ಲಾ ಸಾಹಿತ್ಯ ಪ್ರಕಾರದಲ್ಲಿ ಕೃತಿಗಳು ಪ್ರಕಟವಾಗಿವೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿ, ವಿಜಯಪುರದಲ್ಲಿ ನಡೆಯುವ ನವರಸಪುರ ಉತ್ಸವ, ಅಖಿಲ ಭಾರತ ಕವಿಯತ್ರಿಯರ ಸಮ್ಮೇಳನದ ಕವಿಗೋಷ್ಠಿ, ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ ವತಿಯಿಂದ ನಡೆದ ಕನ್ನಡ ಗಜಲ್ ಸಂಜೆ ಕಾರ್ಯಕ್ರಮ, ಮೈಸೂರು ದಸರಾ ವಿಶ್ವ ವಿಖ್ಯಾತ ಕವಿಗೋಷ್ಠಿ, ಮಹಾರಾಷ್ಟ್ರ ಪುನಾದಲ್ಲಿ, ಗುಜರಾತದ ವಡೋಧರ ಹಾಗೂ ಮಧ್ಯಪ್ರದೇಶಗಳಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಗಜಲ್, ಕವಿತೆ, ವಚನ ವಾಚನ ಮಾಡಿದ್ದಾರೆ.
ಕರ್ನಾಟಕ ಸರಕಾರದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ರಾಷ್ಟ್ರಮಟ್ಟದ ಮಾ.ಶಾರದಾ ಪ್ರಶಸ್ತಿ, ರಾಷ್ಟ್ರಮಟ್ಟದ ಪರವಿನ್ ಭಾನು ಪ್ರಶಸ್ತಿ, ಡಾ ಶೈಲಜಾ ಹಾಸನ ದತ್ತಿ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು ಗದಗ ಕೊಡುವ “ಅಖಿಲ ಭಾರತ ಗಜಲ್ ಕಾವ್ಯ ಪ್ರಶಸ್ತಿ”, ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲುನಾಡು ಪ್ರಕಾಶನ ಕಲಬುರಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ `ಸಾಧಕ ಶ್ರೀ ಪ್ರಶಸ್ತಿ’ ಪಡೆದಿದ್ದಾರೆ.
ಕನ್ನಡ ಗಜಲ್ ಕೃತಿಗಳು: ಮೌನ ಇಂಚರ, ಮಿಡಿತ, ನಿನಾದ, ಭಾವಗಂಧಿ, ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ (ತರಹೀ ಗಜಲ್), ಒಲವ ಹಾಯಿದೋಣಿ, ಜೀವ ಭಾವದ ಉಸಿರು (ಜುಗಲ್‌ಬಂದಿ ಗಜಲ್), ಒಳನೋಟ (ಗಜಲ್ ಕೃತಿಗಳ ವಿಶ್ಲೇಷಣೆ), ಸೆರಗಿಗಂಟಿದ ಕಂಪು, ಬೆಸೆದ ಭಾವಕೆ ಒಲವ ನಾದ (ಜುಗಲ್‌ಬಂದಿ ಗಜಲ್), ಪಿಸುಮಾತು (ದ್ವಿಪದಿಗಳು-ಅಚ್ಚಿನಲ್ಲಿ) ಎಂದು ಸಮ್ಮೇಳನ ಸಂಘಟಕರಾದ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅಬ್ದುಲ್ ಹೈ.ತೋರಣಗಲ್ಲು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…