ವಾಡಿ: ಭಾರತ ಸ್ವಾತಂತ್ರ್ಯ ಚಳವಳಿಗೆ ಕ್ರಾಂತಿಕಾರಿ ಹೋರಾಟಗಾರರ ತ್ಯಾಗ ಬಲಿದಾನದ ಇತಿಹಾಸವಿದೆ. ಅದರಲ್ಲಿ ಯುವ ಕ್ರಾಂತಿಕಾರಿ ಖುದಿರಾಂ ಬೋಸ್ ಸ್ವಾತಂತ್ರ್ಯದ ಸಿಡಿಗುಂಡಾಗಿ ಸಿಡಿದ ಕೆಚ್ಚೆದೆಯ ತರುಣ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‍ಒ) ಜಿಲ್ಲಾ ಸಮಿತಿ ಸದಸ್ಯ ಸಿದ್ಧಾರ್ಥ ತಿಪ್ಪನೋರ ಹೇಳಿದರು.
ಪಟ್ಟಣದ ಸಾರ್ವಜನಿಕ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ಮಹಾನ್ ಕ್ರಾಂತಿಕಾರಿ ಖುದಿರಾಂ ಬೋಸ್ ಅವರ 116ನೇ ಹುತಾತ್ಮ ದಿನದ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಬ್ರಿಟೀಷರ ಗುಲಾಮಿ ಆಡಳಿತವನ್ನು ಕೊನೆಗಾಣಿಸಲು ಶಹೀದ್ ಭಗತ್ ಸಿಂಗ್, ಚಂದ್ರಶೇಖರ ಆಜಾದ್, ನೇತಾಜಿ ಸುಭಾಷಚಂದ್ರ ಬೋಸ್, ರಾಜ್‍ಗುರು, ಸುಖದೇವ, ಅಶ್ಫಾಖುಲ್ಲಾ ಖಾನ್, ಬಾಲಗಂಗಾದರ ತಿಲಕ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಜೀವದ ಹಂಗು ತೊರೆದು ಹೋರಾಡಿದ್ದಾರೆ. ಭಗತ್‍ಸಿಂಗ್ ನಗುನಗುತ್ತಲೇ ನೇಳಿಗೆ ಮುತ್ತಿಟ್ಟು ಕೊರಳೊಡ್ಡಿದ್ದರು.
ಅಂತಹ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಖುದಿರಾಂ ಬೋಸ್ ಒಬ್ಬರು. ಈ ಅಪ್ರತಿಮ ಕ್ರಾಂತಿಕಾರಿ ತರುಣ ತಮ್ಮ ಹದಿನೆಂಟನೇ ಹರೆಯದಲ್ಲೇ ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಭಾರತೀಯರಿಗೆ ಅಷ್ಟು ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಗಾಂಧಿ ನೇತೃತ್ವದ ಸಂಧಾನಪರ ನಾಯಕರ ಯಾವ ಹೋರಾಟವೂ ಬ್ರಿಟೀಷರ ಎದೆ ಗುಂಡಿಗೆಯನ್ನು ನಡುಗಿಸಲಿಲ್ಲ. ಬ್ರಿಟೀಷರು ದೇಶಬಿಟ್ಟು ತೊಲಗಲು ಅದರ ಹಿಂದೆ ಇಂತಹ ಅನೇಕ ಯುವ ಕಿಡಿಗಳ ಪ್ರಾಣತ್ಯಾಗದ ಇತಿಹಾಸವಿದೆ. ನಾವು ಅವರನ್ನು ಮರೆಯಬಾರದು ಎಂದು ವಿವರಿಸಿದರು.
ಎಐಡಿಎಸ್‍ಒ ಜಿಲ್ಲಾ ಉಪಾಧ್ಯಕ್ಷ ನಾಗರಾಜ ರಾವೂರ, ಮುಖಂಡ ಜೈಭೀಮ ದಾಸ್, ಹಿರಿಯರಾದ ವಿ.ಕೆ.ಕೆದಿಲಾಯ, ಜಯದೇವ ಜೋಗಿಕಲ್ ಮಠ, ಮಲ್ಲಿಕಾರ್ಜುನ ಕರಗರ, ದೇವಿಂದ್ರ ಕರದಳ್ಳಿ, ಕಾಶೀನಾಥ ಶೆಟಗಾರ, ಮಡಿವಾಳಪ್ಪ ಹೇರೂರ, ಶಂಕ್ರಪ್ಪ ಜುಮಲಾಪುರ, ಆನಂದ ಇಂಗಳಗಿ, ಅನಿಕೇತ್ ಹೇರೂರ, ಪ್ರೀತಮ್ ಹೇರೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…