ಕಲಬುರಗಿ; ನಗರದ ಸೇಡಂ ರಸ್ತೆ ವಿದ್ಯಾನಗರ ಕಾಲೋನಿ ಮಲ್ಲಿಕಾರ್ಜುನ ದೇವಸ್ಥಾನದ ಭಕ್ತರ ಹರಕೆ ಈಡೇರಿಸುವ ದೇವಸ್ಥಾನವೆ ಶ್ರೀಶೈಲ ಮಲ್ಲಿಕಾರ್ಜುನ ಇಲ್ಲಿನ ಅನೇಕ ವರ್ಷಗಳಿಂದ ಹಮ್ಮಿಕೊಳ್ಳಲಾಯಿತು.
ಪುರಾಣ-ಪ್ರವಚನ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಟ್ಟಿಲು ಸೇವೆ ಮಾಡಿದ, ಹರಾಜಿನಲ್ಲಿ ತೊಟ್ಟಿಲು ತೆಗೆದುಕೊಂಡ ಅನೇಕ ಭಕ್ತರಿಗೆ ಸಂತಾನ ಭಾಗ್ಯ ಕರುಣಿಸಿದ ಹಿನ್ನೆಲೆಯಲ್ಲಿಯೇ ಪುರಾಣ ಮುಕ್ತಾಯ ಕಾರ್ಯಕ್ರಮದಲ್ಲಿ ಪುರಾಣ ಕಥೆಗಳಲ್ಲಿ ಬಳಸಿದ ತೊಟ್ಟಿಲು ಹಾಗು ವಿವಿಧ ಸಲಕರಣೆಗಳು ದುಬಾರಿ ಬೆಲೆಗೆ ಹರಾಜಿನಲ್ಲಿ ಭಕ್ತರು ತೆಗೆದುಕೊಳ್ಳುತ್ತಿರುವುದು ಇತಿಹಾಸವಾಗಿದೆ.
ಇಂತಹ ಪುಣ್ಯಕ್ಷೇತ್ರದಲ್ಲಿ ಪುರಾಣ-ಪ್ರವಚನ ನಡೆಸಲು ನನಗೆ ಅವಕಾಶ ಸಿಕ್ಕಿದ್ದೇ ನನಗೆ ಪುಣ್ಯ ಎಂದು ಪುರಾಣ-ಪ್ರವಚನದಲ್ಲಿ ಮಹಾತ್ಮಾ ಚರಬಸವೇಶ್ವರ ತೊಟ್ಟಿಲು ಕಾರ್ಯಕ್ರಮದಲ್ಲಿ ಪುರಾಣ-ಪ್ರವಚನಕಾರರಾದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಶ್ಯರಾದ ವೇ.ಮೂ.ಶಂಭುಲಿಂಗ ಶಾಸ್ತ್ರಿಗಳು ತೊಟ್ಟಿಲು ಮಹತ್ವ ಹಾಗು ಅನೇಕ ವಿಷಯಗಳನ್ನು ಕುರಿತು ಮಾತನಾಡಿದರು.
ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಸಹಯೋಗದಲ್ಲಿ ಶಿವಶರಣೆ ಅಕ್ಕಮಹಾದೇವಿ ಮಹಿಳಾ ಟ್ರಸ್ಟ ಪದಾಧಿಕಾರಿಗಳಾದ ಮಧು ಹಿಂದೊಡ್ಡಿ, ಶರಣಮ್ಮ ಬೀದಿಮನಿ, ರೇಖಾ ಅಂಡಗಿ, ವಿಜಯಲಕ್ಷ್ಮಿ ರಟಕಲ್, ಉಮಾದೇವಿ ಹೆಬ್ಬಾಳ, ಶ್ರೀದೇವಿ ತಂಬಾಕೆ, ರಾಜಶ್ರೀ ಕಂಠಿ, ಪಂಚಮಿ ದಿವಟಗಿ, ದಮಯಂತಿ ಜಾಜಿ, ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಮತಿ ಭಾರತಿ ಶಿವರಾಜ ಪಾಟೀಲ, ತೊಟ್ಟಿಲು ಕೆಳಗೆ ಕುಳಿತು ಭಕ್ತಿ ಸೇವೆ ಸಲ್ಲಿಸಿದರು, ತಾರಾ ಪಾಟೀಲ, ನಾಗರಾಜ ಹೆಬ್ಬಾಳ, ಗುರುಲಿಂಗಯ್ಯ ಮಠಪತಿ ತೊಟ್ಟಿಲು ಆಯೇರಿ ಬರೆದು ಸೇವೆ ಸಲ್ಲಿಸಿದರು.
ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ಕಲಾವಿದರಾದ ಶಿವಶಂಕರ ಎಂ. ಹಿರೇಮಠ ಜಾಲಹಳ್ಳಿ, ಸಿದ್ಧಣ್ಣ ದೇಸಾಯಿ ಕಲ್ಲೂರ, ಅವರು ತೊಟ್ಟಿಲು ಮಹತ್ವ ಅನೇಕ ಜಾನಪದ ಹಾಗು ಭಕ್ತಿಗೀತೆ ಹಾಡಿ ಭಕ್ತರ ಮನಸೆಳೆದರು. ಮಲ್ಲಿಕಾರ್ಜುನ ಹುಲಸಗೂಡ, ವಿನೋದ ಗೋರೆ ಪ್ರಸಾದ ವ್ಯವಸ್ಥೆ ಮಾಡಿ ಭಕ್ತಿ ಸೇವೆ ಸಲ್ಲಿಸಿದ್ದಾರೆ ಎಂದು ಕಾರ್ಯಕ್ರಮದ ¸ಂಚಾಲಕತ್ವ ವಹಿಸಿದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…