ಕಲಬುರಗಿ: ಪರಿಶಿಷ್ಟ ಜಾತಿ ಜನಾಂಗದ ಒಳಮೀಸಲಾತಿ ದೇಶಾದ್ಯಂತ ಜಾರಿ ಮಾಡಬಹುದೆಂದ ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ಕೆಲವು ರಾಜಕೀಯ ರಾಷ್ಟ್ರ ಮಟ್ಟದ ನಾಯಕರು, ರಾಜ್ಯ ಮಟ್ಟದ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ಮಾದಿಗ ಸಮಾಜದ ಯುವ ಹೋರಾಟಗಾರರಾದ ರಾಜು ಎಸ್.ಕಟ್ಟಿಮನಿ ಅವರು ಖಂಡಿಸಿದ್ದಾರೆ.
ಸುಮಾರು 30 ವರ್ಷಗಳಿಂದ ಸತತವಾಗಿ ಮಾದಿಗ ಸಮುದಾಯದವರು ಹಾಗೂ ಮಾದಿಗ ಪರ ಹಲವಾರು ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಮಿಸಲಾತಿಯಲ್ಲ ಒಳ ಮೀಸಲಾತಿಯನ್ನು ಪರಿಶಿಷ್ಠ ಜಾತಿಯಲ್ಲಿರುವ ಬಹು ಸಂಖ್ಯಾತ ಜನಾಂಗಕ್ಕೆ ಯಾವುದೇ ಸರ್ಕಾರಿ ಸೌಲಭ್ಯಗಳಲ್ಲಾಗಲಿ, ಶಿಕ್ಷಣದಲ್ಲಾಗಲಿ, ರಾಜಕೀಯದಲ್ಲಾಗಲಿ ವಿಶೇಷವಾಗಿ ಮಾದಿಗ ಸಮುದಾಯಕ್ಕೆ ಮೀಸಲಾತಿಯಲ್ಲಿ ಬರುವಂತಹ ಯವುದೇ ಸೌಲಭ್ಯ ಇಲ್ಲಿಯವರೆಗು ಮಾದಿಗ ಸಮುದಾಯಕ್ಕೆ ದೊರಕಿರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟನಲ್ಲಿ 7 ಜನ ನ್ಯಾಯಾದೀಶರ ಪೀಠ ತೀರ್ಪು ಪರಿಶಿಷ್ಟ ಜಾತಿ ಜನಾಂಗದವರಿಗೆ ಸಂವಿಧಾನಿಕ ಬದ್ಧವಾಗಿ ಮತ್ತು ಸಮಾನವಾಗಿ ತೀರ್ಪನ್ನು ನೀಡಿರುವುದು ನಾವು ಸ್ವಾಗತಿಸುತ್ತೇವೆ. ಹಾಗೂ ಅಭಿನಂದನೆ ಸಲ್ಲಿಸುತ್ತೇವೆ.
ಇದನ್ನು ಕೆಲವು ಜನ, ಕೆಲವು ರಾಜಕೀಯ ನ್ಯಾಯಕರು ಏನು ವಿರೋಧ ಮಾಡುತ್ತಿದ್ದೀರೊ ನ್ಯಾಯಲಯದ ಬಗ್ಗೆ ಮತ್ತು ನ್ಯಾಯಾಧೀಶರ ಬಗ್ಗೆ ಗೌರವ ಇದ್ದಿದ್ದೆ ಆದರೆ, ವಿರೋಧ ಮಾಡುವವರು ಕೂಡ ನ್ಯಾಯಲಯಕ್ಕೆ ತಲೆಬಾಗಿಸಿ, ನ್ಯಾಯಾಧೀಶರಿಗೆ ತಲೆಬಾಗಿ ಈ ತೀರ್ಪನ್ನು ತಾವು ಸ್ವಾಗತಿಸಬೇಕು.
ನ್ಯಾಯಲಯಕ್ಕಿಂತ ಮತ್ತು ನ್ಯಾಯಾಧೀಶರಿಗಿಂತ ದೊಡ್ಡವರು ನಿವ್ಯಾರೂ ಇಲ್ಲವೆಂದು ತಿಳಿಸುತ್ತೇನೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಜಾರಿ ಮಾಡಬೇಕು. ಎಂದು ಕಟ್ಟಿಮನಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…