ಕಲಬುರಗಿ: ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿದಿಯೆ, ಪೋಷಕರ ಹೆಸರಲ್ಲಿ ಅಕ್ಷರ ದೋಷವಿಧಿಯೆ, ಜನ್ಮ ದಿನಾಂಕ ನಮೂದಾಗಿಲ್ವಾ, ಎಪಿಕ್ ಚೀಟಿಯಲ್ಲಿ ಭಾವಚಿತ್ರ ತುಂಬಾ ಹಳೆಯದಾ. ಚಿಂತೆ ಬೇಡ, ಇದೆಲ್ಲವನ್ನು ಮೋಬೈಲ್ ಮೂಲಕ ತಿದ್ದ್ಡುಪಡಿ ಮಾಡಿಕೊಳ್ಳಲು ಮತ್ತು ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸ್ವಯಂ ಮತದಾರರೆ ದೃಢೀಕರಿಸಲು ಭಾರತ ಚುನಾವಣಾ ಆಯೋಗವು ಈ ಬಾರಿ ಸುವರ್ಣಾವಕಾಶ ನೀಡಿದೆ.
ಯಾವುದೇ ಗೊಂದಲಕ್ಕೆ ಅಸ್ಪದ ನೀಡದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರರ ಪಟ್ಟಿಯೆ ಮೂಲವಾಗಿದೆ. ಮತದಾನ ದಿನದಂದು ಮತದಾರ ಮತ ಚಲಾಯಿಸಲು ಮತಗಟ್ಟೆಗೆ ಹೋದಾಗ ಅಲ್ಲಿ ತಮ್ಮ ಹೆಸರೇ ಇರುವುದಿಲ್ಲ, ಎಪಿಕ್ ಇದ್ದರು ಪಟ್ಟಿಯಲ್ಲಿ ಹೆಸರು ನಾಪತ್ತೆ ಅಥವಾ ಮತದಾರರ ಹೆಸರನ್ನು ಬೇರೆ ಮತದಾನ ಕೇಂದ್ರಕ್ಕೆ ವರ್ಗಾಯಿಸಿರುವಂತಹ ಪ್ರಕರಣಗಳನ್ನು ಮತದಾನ ಸಂದರ್ಭದಲ್ಲಿ ಸರ್ವೇ ಸಾಮಾನ್ಯ. ಇದನ್ನು ಮತದಾನ ಪೂರ್ವ ಮತದಾರನು ಖಾತ್ರಿ ಪಡಿಸಿಕೊಂಡಿದಲ್ಲಿ ಇಂತಹ ಗೊಂದಲಕ್ಕೆ ತೆರೆ ಎಳೆಯಬಹುದು.
ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಶುದ್ಧ ಮತದಾರರ ಪಟ್ಟಿ ಸಿದ್ದಪಡಿಸಲು ಒತ್ತು ನೀಡಿದ್ದು, ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಜೊತೆಗೆ ಮತದಾರರು ದೃಢೀಕರಿಸುವ ಕಾರ್ಯಕ್ರಮ ವಿಶೇಷವಾಗಿ ಹಮ್ಮಿಕೊಂಡಿದೆ. ಅಕ್ಟೋಬರ್ 15 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆದು ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಆಯೋಗವು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದೆ.
ಮತದಾರರು ಖುದ್ದಾಗಿ ಮತದಾರರ ಪಟ್ಟಿಯಲ್ಲಿನ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ Voter Helpline App ಡೌನಲೋಡ್ ಮಾಡಿಕೊಂಡು ತಮ್ಮ ಹಾಗೂ ಕುಟುಂಬದ ಸದಸ್ಯರ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಮೋಬೈಲ್ ಮೂಲಕವೆ ಸ್ವವಿವರಗಳನ್ನು ದೃಢೀಕರಿಸಬಹುದು. ಭಾವಚಿತ್ರ ಸರಿಯಿಲ್ಲದಿದ್ದರೆ ಸೆಲ್ಫಿ ಫೋಟೊ ಹಾಕಿಕೊಳ್ಳಬಹುದು. ಅಲ್ಲದೆ ಕುಟುಂಬದ ಸದಸ್ಯರನ್ನು ಇಲ್ಲಿ ಟ್ಯಾಗ್ ಮಾಡಿದಲ್ಲಿ ಎಲ್ಲರೂ ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಬಹುದಾಗಿದೆ. http://www.nvsp.in ಭೇಟಿ ನೀಡಿ ಇದೇ ಮಾದರಿಯ ಸೇವೆಯನ್ನು ಪಡೆಯಬಹುದು.
ಇನ್ನು ಬಿ.ಎಲ್.ಓ.ಗಳು ಮನೆಗೆ ಭೇಟಿ ನೀಡಿದಾಗ ೧-೧-೨೦೨೦ ಅರ್ಹತಾ ದಿನವನ್ನಾಗಿ ಪರಿಗಣಿಸಿ ೧೮ ವರ್ಷ ಪೂರ್ಣಗೊಂಡಿರುವ ಯುವ ಮತದಾರರನ್ನು ಮತಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-೬, ವಿದೇಶದಲ್ಲಿರುವ ಭಾರತೀಯರನ್ನು ಮತದಾರರ ಪಟ್ಟಿಗೆ ಸೇರಿಸಲು ನಮೂನೆ ೬ಎ, ಆಕ್ಷೇಪಣೆ ಮತ್ತು ತೆಗೆದುಹಾಕುವಿಕೆಗೆ ನಮೂನೆ-೭, ತಿದ್ದುಪಡಿಗೆ ನಮೂನೆ-೮, ಕ್ಷೇತ್ರದಲ್ಲಿನ ವರ್ಗಾವಣೆಗೆ ೮ಎ, ಚುನಾವಣಾ ಗುರುತಿನ ಚೀಟಿಗಾಗಿ ನಮೂನೆ-೦೦೧ರಲ್ಲಿ ಮತದಾರರು ಅರ್ಜಿ ಸಲ್ಲಿಸಬಹುದಾಗಿದೆ.
ಇದಲ್ಲದೆ ನಾಡ ಕಚೇರಿಗಳು, ಬಾಪೂಜಿ ಸೇವಾ ಕೇಂದ್ರಗಳು, ವೋಟರ್ ಫಿಸಿಲಿಟೇಶನ್ ಸೆಂಟರ್ (Facilitation center), ಪಾಲಿಕೆಯ ವಲಯ ಕಚೇರಿಗಳಿಗೆ ಭೇಟಿ ನೀಡಿ ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಆಯೋಗವು ತಿಳಿಸಿರುವ ಇನ್ನಿತರ ಯಾವುದೇ ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಿ ದೃಢೀಕರಿಸಿಕೊಳ್ಳಬಹುದಾಗಿದೆ. ವಿಕಲಚೇತನರು 1950 ಟೋಲ್ ಫ್ರೀ ಸಂಖ್ಯೆ ಕರೆ ಮಾಡಿದಲ್ಲಿ ಅವರ ಸಮಸ್ಯೆ ಬಗೆಹರಿಯಲಿದೆ.
ಈ ವಿಶೇಷ ಕಾರ್ಯಕ್ರಮ ಅಕ್ಟೋಬರ್ ೧೫ರ ವರೆಗೆ ಇರುವುದರಿಂದ ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುದ್ಧ ಮತದಾರರ ಪಟ್ಟಿ ತಯಾರಿಸಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಮನವಿ ಮಾಡಿಕೊಂಡಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…