ಆಳಂದ: ತಾಲೂಕಿನ ಲಾಡ ಚಿಂಚೊಳಿಯ ಭಾರತ ಮಾತಾ ಮಂದಿರದಲ್ಲಿ ಜೈಭಾರತ ಮಾತಾ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಉತ್ಸವದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ, ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಹಾಗೂ ಕ್ರಾಂತಿ ವಿರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಹಾಗೂ ಆಳಂದ ತಾಲೂಕಿನ ಶಾಸಕರಾದ ಬಿ.ಆರ್.ಪಾಟಿಲ ಅವರು ದೇವಸ್ಥಾನದ ಆವರಣದಲ್ಲಿ ಕೆಎಂಎಫ್ ನ ಅಧ್ಯಕ್ಷ ಆರ್.ಕೆ.ಪಾಟೀಲ ಅವರು ನಿರ್ಮಿಸಿರುವ 100 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯರು ಶಾಸಕರಿಗೆ ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಹೆಚ ಎಮ ಪಟೆಲ, ಬಿ.ಡಿ.ಹಂಗರಗಿ, ಮುಖಂಡರಾದ ಶಾಹಾಜಿರಾವ ಪಾಟಿಲ, ಗುರುಸಿದ್ದಪ್ಪಾ ಬೆನಕನಳ್ಳಿ, ಸಂದೇಶ ಪವಾರ, ಸಿದ್ದರಾಮ ದೇಶಮುಖ, ಮಲ್ಲಿಕಾರ್ಜುನ ಸಾರವಾಡ, ಮಂಜುನಾಥ ಬಿರಾದಾರ, ರವಿಂದ್ರ ಜಮಾದಾರ, ಪಿರದೊಷ ಅನ್ಸಾರಿ, ಪ್ರಕಾಶ ಮೂಲ ಭಾರತಿ, ನಾಮದೆವ ಬಬಲಾದ, ದಿಲಿಪ ಕ್ಷಿರಸಾಗರ, ದಯಾನಂದ ಪಾಟಿಲ, ಸಂಜಯ ನಾಯಕ, ಶ್ರೀಶೈಲ ಪಾಟಿಲ ಚಲಗೆರಿ, ಶಿವರಾಜ ವಾರದ, ದಯಾನಂದ ಹಾಗೂ ಅನೇಕ ಮುಖಂಡರು ಆಗಮಿಸಿದ್ದರು, 100 ಅಡಿ ಧ್ವಜ ಸ್ಥಂಬದ ಮೇಲೆ ತ್ರಿವರ್ಣ ಧ್ವಜಾರೋಹಣ ನೋಡಲು ತುಂಬಾ ಉತ್ಸಾಹದಿಂದ ಅಪಾರ ಸಂಖ್ಯೆಯಲ್ಲಿ ಕರ್ನಾಟಕ, ಮಾಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ದೇಶಬಾಂಧವರು ಆಗಮಿಸಿದ್ದು ಎಲ್ಲರಿಗೂ ಸಮಿತಿ ವತಿಯಿಂದ ಅಚ್ಚುಕಟ್ಟಾಗಿ ದಿನವಿಡಿ ನಿರಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಎಂದು ಸಮಿತಿ ವಕ್ತಾರರಾದ ವೈಜನಾಥ ಎಸ್ ಝಳಕಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…