ಕಲಬುರಗಿ: ಅನುವಂಶಿಯತೆ, ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ ಬೊಜ್ಜು, ಹೆಚ್ಚು ಕೊಬ್ಬುಯುಕ್ತ ಆಹಾರದ ಸೇವೆನೆ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಕಾರಣಗಳಿಂದ ಹೃದಯಘಾತ ಸಂಭವಿಸುತ್ತದೆ. ವಿದೇಶಿ ಜೀವನ ಶೈಲಿಯ ಅಳವಡಿಕೆಯಿಂದ ಭಾರತದಲ್ಲಿ ಇತ್ತೀಚೆಗೆ ಹೃದಯಘಾತಗಳ ಸಂಖ್ಯೆ ಅಧಿಕವಾಗುತ್ತಿರುವುದು ತುಂಬಾ ಕಳವಳಕಾರಿಯಾದ ಸಂಗತಿಯಾಗಿದೆ. ಒತ್ತಡಮುಕ್ತ ಜೀವನ, ವ್ಯಾಯಾಮ, ಯೋಗ, ದೈಹಿಕ ಕಸರತ್ತಿನ ಕಾರ್ಯ, ಹಣ್ಣು, ತರಕಾರಿ ಸೇವನೆಯಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಹೃದಯಘಾತ ಮತ್ತು ಅದರ ಸಂಬಂಧಿತ ರೋಗಗಳು ಬರುವುದಿಲ್ಲವೆಂದು ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದಯ ರೋಗ ತಜ್ಞ ಡಾ.ಬಸವರಾಜ ಎಸ.ಹಾಗರಗಿ ಹೇಳಿದರು.
ಅವರು ನಗರದ ಆಳಂದ ರಸ್ತೆಯ, ಖಾದ್ರಿ ಚೌಕ್‌ನಲ್ಲಿರುವ ’ಶ್ರೀ ಶರಣ ಕ್ಲಿನಿಕ್’ನಲ್ಲಿ, ’ನಾರಾಯಣ ಹೆಲ್ತ್ ಸಿಟಿಯ ಹಾರ್ಟ ಕೇರ್ ಕ್ಲಿನಿಕ’ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ಹೃದಯ ಆರೋಗ್ಯ ವಿಶೇಷ ಉಪನ್ಯಾಸ, ತಪಾಸಣೆ ಹಾಗೂ ಚಿಕಿತ್ಸೆ’ಯ ಒಂದು ದಿನದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಒಂದು ಕಾಲದಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿದ್ದವು. ಆದರೆ ಪ್ರಸ್ತುತವಾಗಿ ೩೫-೪೦ ವರ್ಷ ವಯೋಮಾನದವರಿಗೆ ಕಂಡುಬರುತ್ತದೆ. ಅನುವಂಶಿಯತೆಯಿಂದ ಶೇ.೩೦-೪೦ ಹೃದಯಘಾತವಾಗುವ ಸಂಭವವಿದೆ. ಎದೆ ನೋವು ಕಾಣಿಸಿಕೊಂಡರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಕೊಳ್ಳಬೇಕು. ಸ್ಥೂಲಕಾಯ, ಬೊಜ್ಜು, ಮಧುಮೇಹ, ರಕ್ತದೊತ್ತಡಗಳ ಮೂಲಕವು ಕೂಡಾ ಹೃದಯರೋಗ ಹೊಂದುವ ಸಾಧ್ಯತೆಯಿದೆಯಿದ್ದು, ಇದರ ಬಗ್ಗೆ ಎಚ್ಚರ ವಹಿಸಬೆಕೆಂದು ಅನೇಕ ಸಲಹೆಗಳನ್ನು ನೀಡಿದರು.
ನಾನು ಇಲ್ಲಿಯವರೆಗೆ ೫೨ ಹೃದಯ ವರ್ಗಾವಣೆ ಮತ್ತು ೭ ಕೃತಕ ಹೃದಯ ಜೋಡಣೆ ಯಶಸ್ವಿಯಾಗಿ ಮಾಡಿದ್ದೇನೆ. ಹೃದಯರೋಗ ಬಂದ ಮೇಲೆ ನಿವಾರಣೆಗಾಗಿ ಅಲೆದಾಡುವುದಕ್ಕಿಂತ, ಇದು ಬರದಂತೆ ಮುಂಜಾಗ್ರತೆಯನ್ನು ವಹಿಸುವುದು ತುಂಬಾ ಅವಶ್ಯಕತೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯಕ್ಕೆ ಸಂಬಂಧಿಸಿದಂತೆ ಉದಾಸೀನ ಮಾಡದೆ ಕಾಜಿಯನ್ನು ವಹಿಸಬೇಕೆಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಕ್ಲಿನಿಕ್ ಮುಖ್ಯಸ್ಥ ಡಾ.ಸಂಜೀವಕುಮಾರ ಪಾಟೀಲ, ಡಾ.ಆಶಾ ಎಸ್.ಪಾಟೀಲ, ಪ್ರೊ. ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಪ್ರಮುಖರಾದ ಗೋಪಾಲ ಎ.ಆರ್, ಶ್ರೀಕಾಂತ ಮಡಿವಾಳ, ಹಣಮಂತ ಚುಂಚೂರೆ, ಲಕ್ಷ್ಮೀಕಾಂತ ಮೇತ್ರಿ, ಸಿದ್ಧು ಸವದಿಮಠ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…