ಬಿಸಿ ಬಿಸಿ ಸುದ್ದಿ

ಕಲಬುರಗಿ ಮಟ್ಟದ ತರಬೇತಿ ಕಾರ್ಯಗಾರ

ಕಲಬುರಗಿ: ಭಾರತ ಸ್ವಾತಂತ್ರ್ಯ ಗಳಿಸಿ 77 ವರ್ಷ ಕಳೆದರೂ ಇಂದಿಗೂ ದಲಿತರು ಹೋಟೆಲ್ಗಳಿಗೆ ದೇವಾಲಯಗಳಿಗೆ ಪ್ರವೇಶ ನಿರಾಕರಣೆ ಸಾಮಾಜಿಕ ಬಹಿಷ್ಕಾರದಂತಹ ಪ್ರಾಣಿ ಪಕ್ಷಿಗಳಿಗೂ ಕಡೆಯಾಗಿ ಬದುಕುವ ಸ್ಥಿತಿ ಹವಾಮಾನ ಅನುಭವಿಸುವುದು, ಬದಲಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಮುಖಂಡರಲ್ಲಿ ಒಬ್ಬರಾದ ಯು ಬಸವರಾಜ್ ರವರು ಕರೆ ನೀಡಿದರು.

ಅವರು ಕಲ್ಬುರ್ಗಿಯಲ್ಲಿ ಆಗಸ್ಟ್ 17ರಂದು ಏರ್ಪಡಿಸಿದ್ದ ಕಾರ್ಯಕರ್ತರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು 50,000 ಎಕ್ಕರೆ ಜಮೀನುಗಳನ್ನು ಉದ್ಯಮ ಸ್ಥಾಪಿಸುವವರಿಗೆ ನೀಡುವ ಸರ್ಕಾರಗಳು ಬಡತನ ಅಸಹಾಯಕ ಸ್ಥಿತಿಯಲ್ಲಿರುವ ದಲಿತರಿಗೆ ಸ್ವಾವಲಂಬಿ ಯಾಗಿ ಬದುಕಲು ಸರ್ಕಾರದ ಬಳಿ ಇರುವ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಅವರ ಬದುಕು ಸಾಗಿಸಲು ಅವಶ್ಯವಿರುವ ದಲಿತರಿಗೆ ಭೂಮಿ ನೀಡಿ ಆತನ ಆರ್ಥಿಕ ಸ್ಥಿತಿ ಸ್ಥಾನ ಮಾನ ಬದಲಿಸುವ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದ್ದು ದಲಿತರ ತಲಾದಾಯ ಗ್ರಾಮೀಣ ಭಾಗದಲ್ಲಿಕೇವಲ 100 ರೂಗಳಾಗಿದ್ದು ಸುಮಾರು 12 ಲಕ್ಷ ಕೋಟಿ ರೂಗಳ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ಸರ್ಕಾರಗಳು ಶ್ರೀಮಂತರನ್ನು ಬೆಳೆಸುವ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.

ಎಲ್ಲಾ ಮನುಷ್ಯರೂ ಸಮಾನರು ಎಂದು ಬುದ್ಧ ಬಸವ ಅಂಬೇಡ್ಕರ್ ಅವರು ಸಾರಿದರು ಭೇದಭಾವವನ್ನು ಉಳಿಸಿಕೊಂಡು, ಭೂಮಾಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಮುಂದುವರಿಸುವ ಹುನ್ನಾರ ಇಂದಿನ ಸರ್ಕಾರಗಳದ್ದು ಎಂದರು.

ದಲಿತ ಯುವಕರನ್ನು ಹಿಂದೂ ರಾಷ್ಟ್ರದ ಮೋಹದಲ್ಲಿ ಸಿಲುಕಿಸಿ ಜನತೆಯಲ್ಲಿ ಧರ್ಮದ ಅಮಲನ್ನು ಬೆಳೆಸುವ ಬಿಜೆಪಿ ಆರ್ ಎಸ್ ಎಸ್ ನ ನೀತಿಯನ್ನು ಧಿಕ್ಕರಿಸಬೇಕು ಎಲ್ಲಾ ಜಾತಿಯ ಬಡವರು ಒಗ್ಗಟ್ಟಾಗಿ ಐಕ್ಯತೆಯಿಂದ ಆರ್ಥಿಕ ,ಸಾಮಾಜಿಕ ಅಸಮಾನತೆ ವಿರುದ್ಧ ವಿಮೋಚನೆಯ ಕಡೆಗೆ ಹೆಜ್ಜೆ ಹಾಕಬೇಕೆಂದು ಕರೆ ನೀಡಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರಾಜಣ್ಣ ರಾಜ್ಯದಲ್ಲಿ ಡಿ ಎಚ್ ಎಸ್ ಸಂಘಟನೆ ಬೆಳೆದು ಬಂದ ದಾರಿ ಹೋರಾಟಗಳ ಕುರಿತು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಸುಧಾಮ ಧನಿ ಅಧ್ಯಕ್ಷತೆ ವಹಿಸಿದ್ದರು ಪ್ರಾರಂಭದಲ್ಲಿ ಕಾರ್ಯದರ್ಶಿ ಪಾಂಡುರಂಗ ಮಾವಿನಕ ರ ಎಲ್ಲರನ್ನೂ ಸ್ವಾಗತಿಸಿದರು.

ಖಜಾಂಚಿ ಚಂದ ಮಗೋಳ ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರಮುಖ ಮುಖಂಡರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

11 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

11 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

13 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

13 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

13 hours ago