ಕಲಬುರಗಿ: ಕಲಬುರಗಿ-ಶಹಾಬಾದ ರಸ್ತೆಯಲ್ಲಿರುವ ನಂದೂರು ಕೈಗಾರಿಕಾ ಪ್ರದೇಶದಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ರಾಸಾಯಿನಿಕ ವಿಪತ್ತು ನಿರ್ವಹಣೆ ಅಂಗವಾಗಿ ಅತಿ ಅಪಾಯಕಾರಿ ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟುವ ಸಂಬಂಧ ಕಾರ್ಮಿಕರಿಗೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಪಾಯಗಳ ಕುರಿತು ಅರಿವು ಮೂಡಿಸಲು ಶನಿವಾರ ಅಫ್-ಸೈಟ್ ಅಣುಕು ಪ್ರದರ್ಶನ ನಡೆಯಿತು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಹಾಗೂ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್ ಸಹಯೋಗದೊಂದಿಗೆ ನಡೆದ ಈ ಅಣಕು ಪ್ರದರ್ಶನದಲ್ಲಿ ನಂದೂರು ಎಚ್.ಪಿ.ಸಿ.ಎಲ್ ಡಿಪೋನಲಿ 3,200 ಕಿ.ಲೋ. ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕಿಗೆ ಸಿಡಿಲು ಬಡಿದು ಬೆಂಕಿ ಆಹುತಿಯಾಗಿದೆ ಎಂದು ಕಲ್ಪಿಸಿಕೊಂಡು ರಕ್ಷಣಾ ಕಾರ್ಯಚರಣೆ ನಡೆಸಲಾಯಿತು.
ಹೆಚ್.ಪಿ.ಸಿ.ಲ್ ಕಾರ್ಖಾನೆ ಆಡಳಿತ ವರ್ಗ ಸಿಡಿಲಿನಿಂದ ಟ್ಯಾಂಕಿಗೆ ಹತ್ತಿದ ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ ತಮ್ಮ ಸುತ್ತಮುತ್ತಲಿನ ಕಾರ್ಖಾನೆಗೆಳಿಗೆ ಅದರಿಂದ ಆಗಬಹುದಾದ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕೂಡಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರು.
ಅಗ್ನಿ ದುರಂತ ಮಾಹಿತಿ ದೊರೆತ ಕೂಡಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಅವರು ಸಹಾಯಕ ಆಯುಕ್ತೆ ರೂಪಿಂದ್ ಸಿಂಗ್ ಕೌರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಕ್ಯಾಂಪ್ ತೆರೆದು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಅದರಂತೆ ಎ.ಸಿ. ರೂಪಿಂದರ್ ಸಿಂಗ್ ಕೌರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗ್ನಿ ದುರಂತ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ನಿರ್ದೇಶನ ನೀಡಿದ್ದರಿಂದ ಎಸ್.ಡಿ.ಆರ್.ಎಫ್., ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಆರ್.ಟಿ.ಓ, ಆಹಾರ, ಆರೋಗ್ಯ, ಲೋಕೋಪಯೋಗಿ, ಪಶು ಸಂಗೋಪನಾ, ಕೆ.ಐ.ಎ.ಡಿ.ಬಿ., ಗ್ರಾಮೀಣ ಕುಡಿಯುವ ನೀರು, ಡಿ.ಐ.ಸಿ, ಆರ್.ಡಿ.ಪಿ.ಆರ್ ಹಾಗೂ ಪಿ.ಆರ್.ಓ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಖಾನೆಯ ಇನ್ಸಿಡೆಂಟ್ ಕಮಾಂಡರ್‌ನಿಂದ ಪಡೆದು ರಕ್ಷಣಾ ಕಾರ್ಯಚರಣೆಗೆ ಇಳಿದರು. ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ರಕ್ಷಣಾ ಕಾರ್ಯಚರಣೆಯ ಮೇಲ್ವಿಚಾರಣೆ ವಹಿಸಿದ್ದರು.
ನಂತರ ನಡೆದ ಅಣುಕು ಪ್ರದರ್ಶನದ ರಕ್ಷಣಾ ಕಾರ್ಯಚರಣೆಯಲ್ಲಿ ರಕ್ಷಣಾ ಪಡೆಯ ಒಂದು ತಂಡ ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾದರೆ, ಇನ್ನೊಂದೆಡೆ ಹೆಚ್.ಪಿ.ಸಿ.ಎಲ್. ಡಿಪೋ ಮತ್ತು ಸುತ್ತಮುತ್ತಲಿನ ಕಾರ್ಖಾನೆಯಲ್ಲಿರುವ ಕಾರ್ಮಿಕರನ್ನು ರಿಲೀಫ್ ಕ್ಯಾಂಪ್‌ಗೆ ಸ್ಥಳಾಂತರಿಸಿದರು. ಪೆಟ್ರೋಲ್ ಟ್ಯಾಂಕ್ ಸಂಪೂರ್ಣ ಬೆಂಕಿಯ ಆಹುತಿಗೆ ಒಳಗಾಗಿದ್ದ ಕಾರಣ ಟ್ಯಾಂಕ್ ಪಕ್ಕದಲ್ಲಿಯೇ ಇದ್ದ ಇಬ್ಬರು ಕಾರ್ಮಿಕರು ಬೆಂಕಿ ಆವರಿಸಿ ಸಾವನಪ್ಪಿದ್ದರಿಂದ ಅವರ ದೇಹಗಳನ್ನು ಹೊರ ತೆಗೆಯಲಾಯಿತು.
ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದರಿಂದ ಅವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಉಳಿದಂತೆ ಗಂಭೀರ ಗಾಯಳುಗಳಾಗಿದ್ದ ಐವರಲ್ಲಿ ಮೂವರನ್ನು ರಿಲೀಫ್ ಕ್ಯಾಂಪ್‌ಗೆ ತಂದು ಚಿಕಿತ್ಸೆ ನೀಡಿದರೆ, ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರಕ್ಷಣಾ ಪಡೆಗಳು ಕಾರ್ಯಚರಣೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಆಫ್‌ಸೈಟ್ ಅಣಕು ಪ್ರದರ್ಶನದಲ್ಲಿ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಕೇಶ.ವಿ, ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಹೆಚ್.ಪಿ.ಸಿ.ಎಲ್. ಚೀಫ್ ಡಿಪೋ ಮ್ಯಾನೇಜರ್ ವಿಪಿನ್ ತೋತಲಾ, ಎಸ್.ಡಿ.ಆರ್.ಎಫ್. ಇನ್ಸೆಪೆಕ್ಟರ್ ಅಂಬ್ರೇಶ್ ಚವ್ಹಾಣ, ಅಗ್ನಿಶಾಮಕ ಠಾಣಾಧಿಕಾರಿ ಅಂಕುಶ್, ತಾಲೂಕ ವೈದ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ಡಾ.ಎಂ.ಎ.ಬೇಗ್, ಸಂತೋಷ ಪಾಟೀಲ, ಡಾ. ಶ್ವೇತಾ ಸೇರಿದಂತೆ ಮೆ.ಹೆಚ್.ಪಿ.ಸಿ.ಎಲ್, ಮೆ. ಬಿ.ಪಿ.ಸಿ.ಎಲ್, ಮೆ. ಎ2ಎ ಪೆಟ್ರೋಪ್ರೋಡಕ್ಟ್ಸ್ ಮತ್ತು ಮೆ. ಯುನೈಟೆಡ್ ಸ್ಪಿರಿಟ್ಸ್ ಕಾರ್ಖಾನೆ ಅಧಿಕಾರಿ-ಸಿಬ್ಬಂದಿಗಳು ಭಾಗಿಯಾಗಿದ್ದರು.
ಕಾರ್ಖಾನೆ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಮಾನವ ಹಾನಿ ತಪ್ಪಿಸಲು ಏನೆಲ್ಲ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಆಯಾ ಇಲಾಖೆಗಳ ಪಾತ್ರ ಏನು? ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಆಡಳಿತ ವರ್ಗಕ್ಕೆ ಮನವರಿಕೆ ಮಾಡಲು ಮತ್ತು ಕಾರ್ಮಿಕರಿಗೆ, ಕಾರ್ಖಾನೆ ಆಡಳಿತ ವರ್ಗ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂದಿಲ್ಲಿ ಆಫ್‌ಸೈಟ್ ಅಣಕು ಪ್ರದರ್ಶನ ಆಯೋಜಿಸಿದೆ ಎಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಅವರು ಆಫ್ ಸೈಟ್ ಅಣಕು ಪ್ರದರ್ಶನಕ್ಕೆ ಸಾಥ್ ನೀಡಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…