ಸುರಪುರ: ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯವಾದುದು,ಆ ಮೋಕ್ಷವನ್ನು ಕಾಣಬೇಕಾದರೆ ಸಂಸ್ಕಾರಯುಕ್ತ ಆಚರಣೆಗಳು ಹಾಗೂ ಧರ್ಮ ಮತ್ತು ಜ್ಞಾನ ಮಾರ್ಗ ದಿಂದ ಗಳಿಸಲು ಸಾಧ್ಯವಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಬಡಿಗೇರ ಬಾವಿ ಬಳಿಯಲ್ಲಿನ ರೇಣುಕಾ ಮಾತಾ ದೇವಸ್ಥಾನದಲ್ಲಿ ಶ್ರೀ ಮಹಾ ಶಿವಶರಣೆ ರೇಣುಕಾ ಮಾತೆಯ 8ನೇ ಆರಾಧನಾ ಮಹೋತ್ವ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಗೀತೋತ್ಸವ,ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ನಾವು ಹುಟ್ಟುವಾಗ ಯಾರೂ ಕುಲಜರಲ್ಲ ಶ್ರೀಕೃಷ್ಣ ಪರಮಾತ್ಮ ಹಾಗೂ ಶಂಕರಾಚಾರ್ಯರು ಹೇಳಿರುವಂತೆ ನಾವೆಲ್ಲರೂ ಆರ್ತರು ಮನುಷ್ಯ ಭೂಮಿಗೆ ಬಂದಾಗ ಅಳುತ್ತಾ ಬರುತ್ತಾನೆ ಆದರೆ ಬೆಳೆದಂತೆ ಶ್ರೀಮಂತನಾಗಬೇಕು ಎಂಬ ಆಸೆ ಹುಟ್ಟುತ್ತದೆ ಅರ್ಥಾತ್ ಸಂಪತ್ತ ಬರಬೇಕು ಎಂದು ಬರುತ್ತದೆ ಐವತ್ತು ವರ್ಷಗಳು ದಾಟಿದ ನಂತರ ಅರ್ಥಾತ್ ದಾಟಿ ಜಿಜ್ಞಾಸು ಬರುತ್ತದೆ ನಾನು ಮಾಡಿರುವ ಸಾಧನೆ ಭಗವಂತನಿಗೆ,ಕುಟುಂಬ,ಸಮಾಜ ಹಾಗೂ ದೇಶಕ್ಕೆ ಏನು ಮಾಡಿದ್ದಾನೆ ಎಂಬ ಜಿಜ್ಞಾಸೆ ಪ್ರತಿಯೊಬ್ಬರಲ್ಲಿ ಬರಬೇಕು ಇದನ್ನು ಸಾಧಿಸಲು ಜ್ಞಾನ ಮಾರ್ಗ ಅವಶ್ಯಕ ಎಂದು ಹೇಳಿದರು.
ಹೆಡಗಿಮುದ್ರಾ ಶಾಂತ ಶಿವಯೋಗಿ ಮಠದ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಾಧನಾ ಮಹೋತ್ಸವವನ್ನು ಸಂಗೀತ,ಗ್ರಂಥ ಬಿಡುಗಡೆ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಉತ್ತಮ ಕಾರ್ಯ ಎಂದ ಅವರು ಇವತ್ತು ಆಧುನಿಕ ಶಿಕ್ಷಣದ ಹಿಂದೆ ಹೋಗಿ ನಾವು ನಮ್ಮ ಕಲೆ,ಸಾಹಿತ್ಯ,ಸಂಗೀತ,ಚಿತ್ರಕಲೆ ನಮ್ಮ ಸಂಸ್ಕøತಿ ಪರಂಪರೆಗಳನ್ನು ನಾವು ಮರೆತು ಹೋಗುತ್ತಿದ್ದೇವೆ ಸಂಗೀತಕ್ಕೆ ಬಹಳಷ್ಟು ಶಕ್ತಿ ಇದೆ ಎಂತಹವರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅದಕ್ಕೆ ಇದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು ಟ್ರಸ್ಟ್‍ನ ಕಾರ್ಯದರ್ಶಿ ಜಯರಾಮ ಕಟ್ಟಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಎ.ಎಲ್.ದೇಸಾಯಿ ನಿರೂಪಿಸಿದರು ಪ್ರಿಯಾಂಕ ಪತ್ತಾರ ಪ್ರಾರ್ಥಿಸಿದರು ರೋಶನಾ ಪಟ್ಟಣಕರ ವಂದಿಸಿದರು.ಪ್ರವೀಣ ಕಟ್ಟಿಮನಿ,ಪ್ರಶಾಂತ ಕಟ್ಟಿಮನಿ ಇತರರಿದ್ದರು.
ಪ್ರಲ್ಹಾದ ಕಟ್ಟಿಮನಿ ವಿರಚಿತ ದಾಸಾನುದಾಸ ಕೃತಿಯನ್ನು ಬಿಡುಗಡೆಗೊಳಿಸಲಾಯಿತು, ಯುವ ಗಾಯಕ ರವಿಕುಮಾರ ದಾವಣಗೆರೆ ಅವರಿಗೆ ಶಿವಶರಣೆ ಶ್ರೀ ರೇಣುಕಾ ಮಾತೆ ಜ್ಞಾನ ಸಿಂಚನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ನಂತರ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಶರಣುಕುಮಾರ ವಠಾರ,ಮಲ್ಲಯ್ಯ ಹಿರೇಮಠ,ಮಾಸ್ಟರ್ ವಿಹಾನಸಾಗರ ಮಳಲಿ ಹಾಗೂ ಮಾತಾಶ್ರಮದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು,ಭೀಮಾಶಂಕರ ಬಿದನೂರು ಮೈಸೂರು ತಬಲಾ ಹಾಗೂ ಹನಮಂತ ಮಳಲಿ ಹಾರ್ಮೋನಿಯಂ ಸಾಥ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…