ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿ ಪ್ರದಾನ

ಕಲಬುರಗಿ: ಛಾಯಾಗ್ರಾಹಕರು ಇಂದಿನ ಸಮಾಜದ ಪ್ರತಿಬಿಂಬರಾಗಿ ಕಾಣುತ್ತಾರೆ. ಎಲ್ಲಾ ಛಾಯಾಗ್ರಾಹಕರು ಒಗ್ಗಟ್ಟು ಇಟ್ಟುಕೊಂಡು ಸಂಘಟಿತರಾದರೆ ಸಂಘಕ್ಕೆ ಇನ್ನೂ ಹೆಚ್ಚಿನ ಬಲ ಬರುತ್ತದೆ. ನಿಯಮನೂಸಾರ ಸಾಧ್ಯತ್ತೆ ಇದಲ್ಲಿ ಸಂಘಟಕ್ಕೆ ಕುಡಾ ದಿಂದ ಒಂದು ನಿವೇಶನ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್ ಭರವಸೆ ನೀಡಿದರು.

ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ನಮ್ಮ ಮಹತ್ವದ ಸನ್ನಿವೇಶಗಳು ಮತ್ತು ನಮ್ಮ ಜೀವನದಲ್ಲಿನ ಮರೆಯಲಾಗದ ಸಮತಸದ ಕ್ಷಣಗಳನ್ನು ತಮ್ಮ ಛಾಯಾಚಿತ್ರಗಳ ಮೂಲಕ ಹಿಡಿದಿಡುವುದು ಛಾಯಾಗ್ರಾಹಕ ವೃತ್ತಿಯ ಬಹಳ ವಿಶೇಷತೆ ಆಗಿದೆ. ಇತ್ತೀಚಿನ ದಿನಮಾನಗಳಲ್ಲಿ ಛಾಯಾಗ್ರಾಹಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಛಾಯಾಗ್ರಾಹಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವ ಛಾಯಾಗ್ರಾಹಕರ ಸೇವೆ ಈ ಸಮಾಜದಲ್ಲಿ ಅಮೋಘವಾಗಿದೆ ಎಂದರು.

ಮೇಯರ್ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ಒದಗಿಸಲಾದ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಬಸವರಾಜ ತೋಟದ ಮಾತನಾಡಿ, ಇಂದು ಎಲ್ಲರ ಕೈಯಲ್ಲಿ ಸ್ಮಾರ್ಟ್‍ಫೋನ್ ಇರುವುದರಿಂದ ಛಾಯಾಗ್ರಾಹಕರಾದ ನಾವುಗಳು ನಮ್ಮ ವೃತ್ತಿಯಲ್ಲಿ ತೀವೃ ಸ್ಪರ್ಧೆ ನಡೆಸಬೇಕಾಗಿದೆ. ಹಾಗಾಗಿ ಛಾಯಾಗ್ರಾಹಕ ವೃತ್ತಿ ಘನತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗುವ ಉದ್ದೇಶದಿಂದ ಸಂಘ ಸ್ಥಾಪಿಸಿದ್ದು, ಆ ಮೂಲಕ ಹಿರಿಯ ಛಾಯಾಗ್ರಾಹಕರಿಗೆ ವಿಶೇಷ ಗೌರವ ಕೊಡುವ ಮತ್ತು ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಪಾಲಿಕೆ ಸದಸ್ಯ ನಿಂಗಮ್ಮ ಕಟ್ಟಿಮನಿ, ಪವನಸಿಂಗ್ ಠಾಕೂರ, ವಿಜಯಕುಮಾರ ರಾಠೋಡ, ಸಂಜೀವಕುಮಾರ ಗಾರಂಪಳ್ಳಿ, ಮಲ್ಲಿಕಾರ್ಜುನ ತುಪ್ಪದಮಠ, ಸಿದ್ರಾಮಪ್ಪ ಕಬಾಡೆ, ಪ್ರಕಾಶ ಜಂಗಲೆ, ಈರಣ್ಣಾ ಸಿ ಕಿರಣಗಿ, ರಮೇಶ ಲಾಲಬುಂದ್ರೆ, ಗುರುಪಾದಯ್ಯ ಮಠ, ಪ್ರಕಾಶ ಎಂ ಶೇರಖಾನೆ, ಅರುಣಕುಮಾರ ತೆಗನೂರ, ಶಿವಕುಮಾರ ಪಾಟೀಲ, ಶರಣು ಕಟ್ಟಿಮನಿ, ಮಹ್ಮದ್ ಅಫಸರ್ ಪಟೇಲ್, ರಾಚಯ್ಯ ಪತ್ರೆ ವೇದಿಕೆ ಮೇಲಿದ್ದರು.

ಹಣಮಂತರಾಯ ಎಸ್ ಹೂವಿನಹಳ್ಳಿ, ಎಂ ಡಿ ಅದಮ್,  ಶ್ರೀನಿವಾಸ ಚಾಂದಿಮನಿ, ರವೀಂದ್ರ ಪಾಂಚಾಳ, ಶರಬಣ್ಣ ಪಟ್ಟೇದಾರ, ಸಾಹೇಬಗೌಡ ಮೇಟಿ, ಬಸವರಾಜ ಕಗ್ಗೋಡು, ಶಿವಕುಮಾರ ಧನ್ನಿ ಅವರಿಗೆ ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅನೀಲಕುಮಾರ ಹುಮನಾಬಾದ, ವಿದ್ಯಾಪ್ರಕಾಶ ಗುಮ್ಮಟ, ಲಕ್ಷ್ಮೀಕಾಮತ ಕೋಗನೂರ, ಜೀತೇಂದ್ರ ಸಿಂಗ್, ಶ್ರೀಕಾಂತ ಅಕ್ಕಾ, ಪ್ರವೀಣ ಮುಚಳಂಬಿ ಅವರನ್ನು ಸಹ ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು. ಮಲ್ಲಿಕಾಜುನ ಮರತೂರ ಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago