ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ ಪ್ರಾಧ್ಯಾಪಕರಾದ ಡಾ.ಜಯಶ್ರೀ ಅಗರಖೇಡ್, ಅವರಿಗೆ 2022ನೇ ಸಾಲಿನ ವಿಜ್ಞಾನಿಗಳು ಮತ್ತು ಇಂಜಿನಿಯರ್‍ಗಳಿಗೆ ನೀಡಲಾಗುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ ಪೆÇ್ರ.ಸತೀಶ್ ಧವನ್ ರಾಜ್ಯ ಪ್ರಶಸ್ತಿ ಲಭಿಸಿದೆ.
ಡಾ. ಜಯಶ್ರೀ ಅಗರಖೇಡ್ ಅವರು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ (ವಿಜಿಎಸ್‍ಟಿ) ದಿಂದ “ಸಂಶೋಧನಾ ಪ್ರಕಟಣೆ” ಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಕಲ್ಯಾಣ ಕರ್ನಾಟಕದ ಅತ್ಯಂತ ಕಿರಿಯ ಮಹಿಳೆಯಾಗಿದ್ದಾರೆ.
ಅದಲ್ಲದೆ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅವುಗಳೆಂದರೆ ISಖಿಇ ನವದೆಹಲಿ ವತಿಯಿಂದ ಅತ್ಯುತ್ತಮ ಮಹಿಳಾ ಇಂಜಿನಿಯರಿಂಗ್ ಕಾಲೇಜು ಶಿಕ್ಷಕಿ,. 3 ಸೂಪರ್ ಸ್ಟಾರ್‍ಗಳು, 3 ಡಿಸಿಪ್ಲಿನ್ ಸ್ಟಾರ್‍ಗಳು, 2 ಡೊಮೇನ್ ಸ್ಕಾಲರ್ ಪ್ರಶಸ್ತಿಗಳು, 1 ಉತ್ಸಾಹಿ ಪ್ರಶಸ್ತಿ, 4 ಚಿನ್ನದ ಪದಕ, 13 ಬೆಳ್ಳಿ ಪದಕಗಳೊಂದಿಗೆ ಪ್ರೇರಿತ ಲರ್ನರ್ ಪ್ರಶಸ್ತಿ, ISTE ಇತರ ಅಂತರರಾಷ್ಟ್ರೀಯ ಸಮ್ಮೇಳನಗಳಿಂದ Iಇಇಇ ಅತ್ಯುತ್ತಮ ಪೇಪರ್ ಪ್ರಶಸ್ತಿ, SWಂಙಂಒ ಓPಖಿಇಐ, ಭಾರತ ಸರ್ಕಾರದ ಒಊಖಆ ದಿಂದ 10 ಸ್ಟಾರ್ ಪ್ರಶಸ್ತಿ ಗಳೊಂದಿಗೆ ಅವರು ಅಗ್ರ 35 ರಲ್ಲಿ ಸ್ಥಾನ ಪಡೆದಿದ್ದಾರೆ. ಅದಲ್ಲದೆ 16 ಪೇಟೆಂಟ್‍ಗಳಲ್ಲಿ ಭಾರತೀಯ ಪೇಟೆಂಟ್‍ನೊಂದಿಗೆ ನೀಡಲಾದ ಮೂರು ಸಂಶೋಧನಾ ಕೃತಿಗಳು ಮತ್ತು ಮೂರು ಪ್ರಕ್ರಿಯೆ ಪೇಟೆಂಟ್‍ಗಳು ಮತ್ತು ನೋಂದಣಿಯೊಂದಿಗೆ ನೀಡಲಾದ ನಾಲ್ಕು ವಿನ್ಯಾಸ ಪೇಟೆಂಟ್‍ಗಳನ್ನು ಪ್ರಕಟಿಸಲಾಗಿದೆ. ಅವರು ಸಲ್ಲಿಸಿದ 200 ಸಂಶೋಧನಾ ಕೃತಿಗಳ ಪ್ರಕಟಣೆಗಳಲ್ಲಿ (SಅI/ Wಇಃ ಔಈ SಅIಇಓಅಇ / Uಉಅ), ಸುಮಾರು 100 ಪ್ರಕಟಣೆಗಳನ್ನು ಸ್ಕೋಪಸ್ ಇಂಡೆಕ್ಸ್ ಅಂತರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಗೊಂಡಿವೆ.
ಡಾ.ಜಯಶ್ರೀ ಅಗರಖೇಡ್ ಅವರು ವಿವಿಧ ವಿಶ್ವವಿದ್ಯಾಲಯಗಳು / ಕಾಲೇಜುಗಳಲ್ಲಿ ವಿಷಯ ಪರಿಣಿತರಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್ ಸಂಸ್ಥೆಯ (Iಇಖಿಇ) ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರಾಗಿ, Iಇಇಇ ಹಿರಿಯ ಸದಸ್ಯರಾಗಿ, ಬೌದ್ಧಿಕ ಆಸ್ತಿ ಹಕ್ಕುಗಳ ಸೆಲ್‍ನ (IPಖ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮಾರ್ಗದರ್ಶನದ ಅಡಿಯಲ್ಲಿ ಅನೇಕ ಯೋಜನೆಗಳು, ಪ್ರಾಜೆಕ್ಟ್‍ಗಳು ವಿವಿಧ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿವೆ, Iಇಇಇ, ಅSI-iಟಿ ಂPP, ಏSಅSಖಿ ವತಿಯಿಂದ ಕೋವಿಡ್ ವಿರುದ್ಧ ಹೋರಾಡಲು ಪರಿಹಾರಕ್ಕಾಗಿ ಮೊಟ್ಟಮೊದಲ ಆನ್‍ಲೈನ್ ಕೋಡ್ ಹ್ಯಾಕಥಾನ್ ಅನ್ನು ಅವರ ಮಾರ್ಗದರ್ಶನದ ಅಡಿಯಲ್ಲಿ ನಡೆಸಲಾಗಿದೆ, ಸ್ಮಾರ್ಟ್ ಸಿಟಿ ಪರಿಹಾರಗಳಿಗಾಗಿ ರಾಷ್ಟ್ರೀಯ ಕೋಡ್ ಹ್ಯಾಕಥಾನ್ ನಡೆಸುವ ಮುಖಾಂತರ ಅವರ ಸೇವೆ ಸಮಾಜಕ್ಕೆ ಸಲ್ಲಿಸಿದಂತಾಗಿದೆ.
ಸಂಸ್ಥೆಯ ಕುಟುಂಬ ಸದಸ್ಯರು ಹಾಗೂ ಪ್ರಾಧ್ಯಾಪಕರಾದ ಡಾ.ಜಯಶ್ರೀ ಅಗರಖೇಡ್ ಅವರ ಸಾಧನೆಗೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಉಪಪ್ರಾಂಶುಪಾಲರು ಹಾಗೂ ಎಲ್ಲಾ ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದ್ದಾರೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಯೋಜಕರಾದ ಐ. ಕೆ. ಪಾಟೀಲ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…