ಕಲಬುರಗಿ: ನಗರದ ಆಳಂದ ಕಾಲೋನಿಯಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಗಿಲ್ಡಾ ಪರಿವಾರದಿಂದ ದಿವಂಗತ ಸೇಠ್ ಶಂಕರಲಾಲ್ ಗಿಲ್ಡಾ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ನಿಮಿತ್ತ ಅಂಧ, ಕಿವುಡ, ಹಾಗೂ ಮೂಕ ಮಕ್ಕಳಿಗೆ ಶಾಲೆಯ ಸಮವಸ್ತ್ರವನ್ನು ವಿತರಿಸುವ ಮೂಲಕ ಅರ್ಥಪೂಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಖ್ಯಾತ ಉದ್ಯಮಿ, ದಿವಂಗತ ಸೇಠ್ ಶಂಕರಲಾಲ್ ಗಿಲ್ಡಾ ಅವರ ಪುತ್ರ ಸಂಪತ್ತ ಗಿಲ್ಡಾ ಅವರು, ನಮ್ಮ ತಂದೆ ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಜನಪರ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುತ್ತಿದೆವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಮಾರವಾಡಿ ಸಮಾಜದ ಅಧ್ಯಕ್ಷ ಲಕ್ಷ್ಮೀ ರಮಣ ಮುದಡಾ ಅವರು, ದಿವಂಗತ ಸೇಠ್ ಶಂಕರಲಾಲ್ ಗಿಲ್ಡಾ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ಅವರ ಪುಣ್ಯ ಸ್ಮರಣೆಯನ್ನು ಕುಟುಂಬಸ್ಥರು ಪ್ರತಿ ವರ್ಷ ಅರ್ಥಪೂಣವಾಗಿ ಆಚರಿಸುತ್ತಾ ಬರುತ್ತಿರುವುದು ಶಾಂಘನಿಯ ವಿಚಾರ ಎಂದರು.
ಈ ಸಮಾರಂಭದಲ್ಲಿ ಗಿಲ್ಡಾ ಫೈನಾನ್ಸ್ ಸಿಇಓ ಸಂಗೀತಾ ಗಿಲ್ಡಾ, ಮುಖಂಡರಾದ ಹಣಮಂತರಾವ್ ತೊಟ್ಟನಳ್ಳಿ, ಗಣೇಶ ತಾಪಾಡಿಯಾ, ಅನಿಲ ಕಳಸ್ಕಕರ್, ವಿಷ್ಣುದಾಸ ತಾಪಾಡಿಯಾ, ಸಂತೋಷ ಕುಲಕರ್ಣಿ, ಪ್ರಕಾಶ್, ಸುರೇಶ ಬುಲಬುಲೆ, ಸಂಪತ ತಾಪಾಡಿಯಾ, ನವಿನ್ ತಾಪಾಡಿಯಾ, ಮಯಾಂಕ್ ಗಿಲ್ಡಾ, ದೀರಜ್ ಗಿಲ್ಡಾ ಸೇರಿದಂತೆ ಗಿಲ್ಡಾ ಪರಿವಾರದ ಸದಸ್ಯರು ಹಾಗೂ ಅಂಧ ಬಾಲಕರ ಶಾಲೆಯ ಶಾಂತಪ್ಪ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…