ಬಿಸಿ ಬಿಸಿ ಸುದ್ದಿ

ಜಿಂದಾಲ್ ಕಂಪನಿಗೆ ಸರಕಾರಿ ಭೂಮಿ ಅಕ್ರಮ ಮಾರಾಟ ಬೊಕ್ಕಸಕ್ಕೆ ನಷ್ಠ; ಸಿಪಿಐಎಂ ವಿರೋಧ

ಕಲಬುರಗಿ: ಬಳ್ಳಾರಿ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಜಿಂದಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು  ಮಾರಾಟ ಮಾಡಲು ನಿರ್ಧರಿಸುವ ಸಚಿವ ಸಂಪುಟ ದ ಕ್ರಮವನ್ನು ಸಿಪಿಐಎಂ ತೀವ್ರವಾಗಿ ವಿರೋಧಿಸುತ್ತದೆ. ಈ ಕೂಡಲೆ ಸಚಿವ ಸಂಪುಟದ ನಿರ್ಣಯವನ್ನು ವಾಪಾಸು ಪಡೆಯುವಂತೆ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮತ್ತು ಕಲಬುರಗಿ ಕಾರ್ಯದರ್ಶಿ ಕೆ.ನೀಲಾ ಒತ್ತಾಯಿಸಿದ್ದಾರೆ.

ಈ ಪ್ರದೇಶದ ಅಭಿವೃದ್ಧಿ ಪಡಿಸಲಾದ ಜಮೀನುಗಳ ಬೆಲೆಯು ತಲಾ ಎಕರೆಗೆ ಕನಿಷ್ಠವೆಂದರೂ 3 ಕೋಟಿ ರೂಗಳಷ್ಠಾಗಿದೆ. ಅದರಂತೆ ಜಿಂದಾಲ್ ಕಂಪನಿಗೆ ನೀಡುವ ಒಟ್ಟು 3,667 ಎಕರೆಯ ಈಗಿನ ಮಾರಾಟದ ಮೌಲ್ಯ 11,001 ಕೋಟಿ ರೂ ಗಳಾಗುತ್ತದೆ. ಅಭಿವೃದ್ಧಿ ಪಡಿಸಲಾದ ಮೊತ್ತ ಶೇ 40 ಕಳೆದರೂ ಅದರ ಮೌಲ್ಯ ಸುಮಾರು 7,000 ಕೋಟಿ ರೂ ಗಳಾಗುತ್ತದೆ.  ಆದರೆ, ಸರಕಾರ ಈಗ 1,667 ಎಕರಗೆ ಕೇವಲ 1,20 ಲಕ್ಷ ರೂಗಳಂತೆ, 24.40 ಕೋಟಿ ನಿಗದಿಸಿದೆ. ಉಳಿದ 2,000 ಎಕರೆಗೆ ಕೇವಲ 1.5 ಲಕ್ಷ ರೂಗಳಂತೆ ಸುಮಾರು 25 ಕೋಟಿ ರೂ ನಿಗದಿಸಿ, ಒಟ್ಟು 50 ಕೋಟಿ ರೂಗಳಿಗೂ ಕಡಿಮೆ ದರಕ್ಕೆ ಮಾರಾಟಕ್ಕೆ ಕ್ರಮವನ್ನು ಖಂಡಿಸಿದ್ದಾರೆ.

ಈ ಅಕ್ರಮ ಮಾರಾಟದಿಂದ  ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 10,950 ಕೋಟಿ ರೂಗಳಷ್ಠು ನಷ್ಠವಾಗುತ್ತದೆ ಎಂದು ಸಿಪಿಐಎಂ ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತದೆ. ರಾಜ್ಯ ಸರಕಾರ, ಸದಾ ಬಜೆಟ್ ಸಂಪನ್ಮೂಲದ  ಕೊರತೆ ತುಂಬಲು ಜನತೆಯ ಮೇಲೆ ತೆರಿಗೆ ಹಾಗೂ ಸಾಲದ ಹೊರೆ ಹೇರುವ ಬದಲು ಇಂತಹ ಸಂಪನ್ಮೂಲದ ಸಮರ್ಪಕವಾದ ಬಳಕೆಗೆ ಕ್ರಮವಹಿಸ ಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆ ಜೊತೆ ಮಾರಾಟ  ನೀತಿಯಲ್ಲಿ, ಮಾರಾಟದ ಕ್ರಮ ರದ್ದುಪಡಿಸಲು ಆಗ್ರಹ;  ಬಹುತೇಕ ಕಂಪನಿಗಳ ಜೊತೆ  ಕೆಐಏಡಿಬಿ ಮತ್ತು ಮಂತ್ರಿಮಂಡಲ ಶಾಮೀಲಾಗಿ ರೈತರನ್ನು ವಂಚಿಸಿ, ಬಲವಂತವಾಗಿ, ಅತ್ಯಂತ ಕಳಪೆ ಹಾಗು ಮೋಸದ ಬೆಲೆಗೆ ಖರೀದಿಸಿ, ರಾಜ್ಯದಾದ್ಯಂತ ದೊಡ್ಡ ದೊಡ್ಡ ಕಂಪನಿಗಳಿಗೆ ಸಾವಿರಾರು ಎಕರೆ ಜಮೀನುಗಳನ್ನು ಗುತ್ತಿಗೆ ಜೊತೆ ಮಾರಾಟ ಒಪ್ಪಂದ ( ಲೀಸ್ ಕಂ ಸೇಲ್ )ದಂತೆ ನೀಡಲಾಗುತ್ತದೆ. ಇದೂ ಕೂಡಾ ರಾಜ್ಯದ ಬೊಕ್ಕಸವನ್ನು  ವಂಚಿಸುವ ಭ್ರಷ್ಠಾಚಾರಕ್ಕೆ ಬಹುದೊಡ್ಡ ಅನುಕೂಲ ಮಾಡಿಕೊಡುವ  ಅಕ್ರಮ ನೀತಿಯಾಗಿದೆ ಎಂದು  ಯು.ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ರಾಜ್ಯದಲ್ಲಿ ಕಂಪನಿಗಳಿಗೆ ಕೆಐಏಡಿಬಿ ನೀಡಿದ ಹತ್ತಾರು ಸಾವಿರ ಎಕರೆ ಜಮೀನುಗಳಿಗೆ, ಪ್ರತಿವರ್ಷ ತಲಾ ಎಕರೆಗೆ ಬಹುತೇಕ ಕೇವಲ, 100 ರೂಗಳಿಂದ 1,000 ರೂಗಳಿಗೆ ಗುತ್ತಿಗೆ ಹಣ ನಿಗದಿಸಲಾಗಿದೆ. ಕೆಲವು ಕಂಪನಿಗಳಿಗೆ ತಲಾ ಎಕರೆಗೆ 10,000 ರೂ ನಿಗದಿಸಲಾಗಿದೆ ಎನ್ನಲಾಗಿದೆ. ನಿಗದಿಸಲಾದ ಮೋಸದ ಅಥವಾ ಭ್ರಷ್ಠಾಚಾರದ ಈ ದರವೂ ಕೂಡಾ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡುತ್ತಿದೆ.

ಹೊರಗಡೆ ರೈತರು ಗುತ್ತಿಗೆಗೆ ಪಡೆದ ಜಮೀನುಗಳಿಗೆ ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ 25 ರಿಂದ 30 ಸಾವಿರ ರೂ ದರ ನೀಡುತ್ತಿರುವಾಗ ರಾಜ್ಯ ಸರಕಾರ ಮತ್ತು ಕಂಪನಿಗಳಿಗೆ ಇಷ್ಠು ಕಳಪೆ ಬೆಲೆಗೆ ನೀಡುವುದೇಕೆ ? ಈ ಕೂಡಲೆ ಗುತ್ತಿಗೆಯ ಮೊತ್ತವನ್ನು ಕನಿಷ್ಟ 30,000 ರೂ ಗೆ ಹೆಚ್ಚಿಸಬೇಕು ಮತ್ತು ಇದರಲ್ಲಿ   ಜಮೀನು ನೀಡಿದ ರೈತ ಕುಟುಂಬಕ್ಕೆ  ತಲಾ ಎಕರೆಗೆ 25,000 ರೂ ನೀಡಲು ಅಗತ್ಯ ಕ್ರಮ ವಹಿಸುವಂತೆ ಸಿಪಿಐಎಂ ಒತ್ತಾಯಿಸಿದೆ.

ಗುತ್ತಿಗೆ ಜೊತೆ ಮಾರಾಟ (ಲೀಸ್ ಕಂ ಸೇಲ್) ಒಪ್ಪಂದದ  ಮೂಲಕ ಹಳೆಯ ದರಕ್ಕೆ ಮಾರಾಟ ಮಾಡುವ ಅಕ್ರಮವು ಅಕ್ಷಮ್ಯವಾಗಿದೆ. ಈ ಕೂಡಲೇ (ಲೀಸ್ ಕಂ ಸೇಲ್ )  ಗುತ್ತಿಗೆ ಜೊತೆ ಮಾರಾಟ  ಕ್ರಮದಲ್ಲಿ  ಮಾರಾಟದ ಒಪ್ಪಂದವನ್ನು  ತಕ್ಷಣವೇ ರದ್ದುಪಡಿಸಬೇಕೆಂದು ಸಿಪಿಐಎಂ ಒತ್ತಾಯಿಸಿದ್ದಾರೆ.

ಈ ಮಾರಾಟದ ಅಕ್ರಮ ಒಪ್ಪಂದವು ಭ್ರಷ್ಠಾಚಾರದ ಬಹುದೊಡ್ಡ ಹಗರಣವೆಂದು  ಕಟುವಾಗಿ ಠೀಕಿಸುತ್ತದೆ. ಇದರ ವಂಚಕತನವನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ನಿಗದಿಸಿದ ಅಕ್ರಮ ದರದಲ್ಲಿ ಢಾಳಾಗಿ ಕಾಣುತ್ತಿದೆ ಎಂದು ಹೇಳಿದೆ.

ಈ ಹಿಂದೆ ಬಿಜೆಪಿ ಸರಕಾರ ಮತ್ತು ಜೆಡಿಎಸ್ ಕುಮಾರ ಸ್ವಾಮಿ ನೇತೃತ್ವದ ಸರಕಾರಗಳು ಅಧಿಕಾರದಲ್ಲಿದ್ದಾಗ ಜಿಂದಾಲ್ ಕಂಪನಿಗೆ ಈ ಜಮೀನುಗಳ ಶುದ್ದ ಕ್ರಯ ಪತ್ರಕ್ಕೆ ಕ್ರಮವಹಿಸಿದುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋದಿಸಿತ್ತು. ಇದೀಗ ಅದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಾವು ವಿರೋಧಿಸಿದ ಕ್ರಮವನ್ನೆ ಯಥಾರ್ಥವಾಗಿ ಜಾರಿಗೊಳಿಸಲು ಹೊರಟಿದೆ.  ಅವರು ಅಧಿಕಾರದಲ್ಲಿದ್ದಾಗ ಇವರು ಮತ್ತು ಇವರು ಅಧಿಕಾರದಲ್ಲಿದ್ದಾಗ ಅವರು ವಿರೋದಿಸುವುದು‌ ಅವರ ಎಡಬಿಡಂಗಿ ಜನ ವಿರೋಧಿ ನಿಲುಮೆಯನ್ನು ಬಯಲುಗೊಳಿಸುತ್ತದೆ.

ದುರಂತವೆಂದರೆ, ಈ ಹಿಂದೆ ಇದನ್ನು ವಿಧಾನ ಸಭೆಯಲ್ಲಿ ತೀವ್ರವಾಗಿ ವಿರೋದಿಸಿದ್ದ ಶಾಸಕರಾಗಿದ್ದ ಶ್ರೀ ಹೆಚ್.ಕೆ. ಪಾಟೀಲರು ಇದೀಗ ಕಾನೂನು ಸಚಿವರಾಗಿ ಸರಕಾರದ ನಿರ್ಧಾರದಲ್ಲಿ ಭಾಗಿಯಾಗಿರುವುದು ಮಾತ್ರವಲ್ಲಾ ! ಸರಕಾರ ವಕ್ತಾರರಾಗಿ ಬಹಿರಂಗ ಪಡಿಸಿರುವುದು ನಾಚಿಕೆಗೇಡಿತನದ ಪರಾಕಾಷ್ಠೆಯಾಗಿದೆ ಈ ಎಲ್ಲವೂ ಇವರೆಲ್ಲರ ಈ ನಾಚಿಕೆ ಗೇಡಿನ ಮತ್ತು ಹೊಣೆಗೇಡಿತನದ ಹಾಗು ಭ್ರಷ್ಠಾಚಾರದ ನಡೆಗಳನ್ನು ಎತ್ತಿ ತೋರುತ್ತವೆ ಮತ್ತು ಅಣಕಿಸುತ್ತಿವೆ ಎಂದು ಪಕ್ಷದ ಪರವಾಗಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಂಪನಿಗಳ ಜೊತೆ ಹೇಗೆ ಶಾಮೀಲಾಗಿ, ಸರಕಾರಿ ಆಸ್ತಿಗಳನ್ನು ಅಕ್ರಮವಾಗಿ ಮಾರಾಟಮಾಡಿ, ರಾಜ್ಯ ಸರಕಾರದ ಬೊಕ್ಕಸಕ್ಕೆ ಹೇಗೆ ನಷ್ಟ ಉಂಟು ಮಾಡುತ್ತಿವೆ ಎಂಬುದನ್ನು ಇವು ಬಯಲುಗೊಳಿಸುತ್ತಿವೆ. ಸಾರ್ವಜನಿಕರು,ಈ ಅಕ್ರಮವನ್ನು ಅರಿಯಲು ಮತ್ತು ತೀವ್ರವಾಗಿ ಪ್ರತಿರೋದಿಸಿ ಸಾರ್ವ ಜನಿಕ ಆಸ್ತಿಗಳನ್ನು ಉಳಿಸಿಕೊಳ್ಳಲು ಸಿಪಿಐಎಂ ಪಕ್ಷ ಕರೆ ನೀಡಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago