ಸುರಪುರ: ನಗರದ ಕುಂಬಾರಪೇಟೆಯ ಎನ್.ಯು ಫಂಕ್ಷನ ಹಾಲ್‍ನಲ್ಲಿ ರಾಜಾ ಲಕ್ಷ್ಮೀನಾರಾಯಣ ನಾಯಕ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ತಹಸಿಲ್ದಾರ್ ಕೆ.ವಿಜಯಕುಮಾರ ಮಾತನಾಡಿ,ಫೋಟೊಗ್ರಾಫರ್ ವೃತ್ತಿ ಇದು ನಗಿಸುವ ಕಲೆ,ಈ ಕಲೆ ಕೇವಲ ಫೋಟೊಗ್ರಾಫರ್‍ಗೆ ಮಾತ್ರ ಇದೆ.ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣಗಳನ್ನು ಸದಾಕಾಲ ಮತ್ತೆ ಮತ್ತೆ ನೋಡಲು ಸಿಗುವುದು ಕೇವಲ ಫೋಟೊಗಳ ಮೂಲಕ.ಅಂತಹ ಫೋಟೊಗಳನ್ನು ಸೆರೆ ಹಿಡಿದು ಕೊಡುವ ಛಾಯಾಗ್ರಹಣ ಕಾರ್ಯ ಅಮೋಘವಾದುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಪಿಎ ಕಾರ್ಯದರ್ಶಿ ಎ.ಎಮ್.ಮುರಳಿ ಅವರು ಮಾತನಾಡಿ,ಇಂದು ರಾಜ್ಯದಲ್ಲಿನ ಛಾಯಾಗ್ರಾಹಕರು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಸರಕಾರ ಛಾಯಾಗ್ರಾಹಕರ ಬೆನ್ನಿಗೆ ನಿಂತು ಎಲ್ಲಾ ಛಾಯಾಗ್ರಾಹಕರ ಏಳಿಗೆಗಾಗಿ ಯೋಜನೆ ರೂಪಿಸಬೇಕು ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದರು.ಅಲ್ಲದೆ ಸರಕಾರ ಫೋಟೊ ಗ್ರಾಫರ್‍ಗಳನ್ನು ಈ ಶ್ರಮ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದ್ದು,ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕೆಪಿಎ ನಿರ್ದೇಶಕ ಸಿ.ಆರ್.ಮೋಹನ್ ಅವರು ಮಾತನಾಡಿ,ಇಂದು ಛಾಯಾಗ್ರಾಹಕ ವೃತ್ತಿ ಎಂಬುದು ಸಮಾಜದಲ್ಲಿ ಒಂದು ಅಗತ್ಯವಾದ ಮತ್ತು ಗೌರವಯುತವಾದ ಕಾರ್ಯವಾಗಿದೆ.ಛಾಯಾಗ್ರಾಹಕ ಉತ್ತಮ ಛಾಯಾಚಿತ್ರದ ಮೂಲಕ ವಿಶ್ವ ಖ್ಯಾತಿ ಗಳಿಸಲು ಸಾಧ್ಯವಿದೆ.ಸರಕಾರಗಳು ನಮಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಿದಲ್ಲಿ ಮತ್ತಷ್ಟು ಸಾಧನೆ ಮಾಡಲು,ಜನರಿಗೆ ಹೆಚ್ಚಿನ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದರು.
ರಕೆಪಿಎ ನಿರ್ದೇಶಕ ತಾಯಪ್ಪ ಬೊಮ್ಮನ್,ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದ ಗೌರವಾಧ್ಯಕ್ಷ ಗೋವಿಂದರಾವ್ ಕುಲಕರ್ಣಿ,ಅಧ್ಯಕ್ಷ ನಾಗರಾಜ ಅಲದರ್ತಿ,ಯಾದಗಿರಿ ಉಪಾಧ್ಯಕ್ಷ ಸೋಮನಾಥ ಪಾಲೆಪುಲೆ,ವಲಯ ಅಧ್ಯಕ್ಷ ನಿತ್ಯಾನಂದ,ಹುಣಸಗಿ ತಾ.ಅಧ್ಯಕ್ಷ ಶ್ರೀಕಾಂತ ನಾಗರಾಳ,ದೋರನಹಳ್ಳಿ ವಲಯ ಅಧ್ಯಕ್ಷ ಮೌನೇಶ ಪೂಜಾರಿ,ಆಶಿರ್ವಾದ ಎಂಟರ್‍ಪ್ರೈಸೆಸ್‍ನ ಮಲ್ಲಿಕಾರ್ಜುನ ಭಾಗವಹಿಸಿದ್ದರು.ಗೋವಿಂದರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು,ದೀಪಿಕಾ ಉದ್ಧಾರ ಪ್ರಾರ್ಥಿಸಿದರು.ಅಂಬರೇಶ ಚಿಲ್ಲಾಳ ನಿರೂಪಿಸಿ ವಂದಿಸಿದರು.ಸುರಪುರ ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…