ಶಹಾಬಾದ: ಶಿಕ್ಷಣ ಒಂದು ಪ್ರಬಲ ಅಸ್ತ್ರ.ಅದನ್ನು ಅಲಂಕರಿಸಲು ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಬೇಕೆಂದು ಭಂಕೂರಿನ ಕರ್ನಾಟಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಿ.ವ್ಹಿ.ಅಂಗಡಿ ಹೇಳಿದರು.
ಅವರು ನಗರದ ಸಿ.ಎ.ಇಂಗಿನಶೆಟ್ಟಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯೆಗಿಂತ ದೊಡ್ಡದ ಸಂಪತ್ತು ಯಾವುದು ಇಲ್ಲ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಬಹಳಷ್ಟಿದೆ. ಆದ್ದರಿಂದ ವಿದ್ಯಾರ್ಥಿಗಳಾದವರೂ ನಾನು ಯಾರು? ನಾನು ಏಕೆ ಕಾಲೇಜಿಗೆ ಬಂದಿರುವೆ ? ಈಗ ನಾನು ಏನು ಮಾಡಬೇಕೆಂಬ ಪ್ರಶ್ನೆಗಳನ್ನು ಹಾಕಿಕೊಳ್ಳುವ ಅಗತ್ಯವಿದೆ. ಇದಕ್ಕೆ ಉತ್ತರ ನೀವೇ ಕಂಡುಕೊಂಡು ಅದರಂತೆ ನಡೆದರೇ ನಿಮ್ಮ ಬದುಕು ಹಸನನಾಗುವುದರಲ್ಲಿ ಸಂಶಯವಿಲ್ಲ. ಆದರೆ ಇಂದು ಮಕ್ಕಳು ಮೊಬೈಲ್, ಟಿವಿ, ದುಶ್ಚಟಗಳಿಗೆ ಬಿದ್ದು ಹಾಳಾಗುತ್ತಿದ್ದಾರೆ. ತಂದೆ-ತಾಯಿ ಕಷ್ಟಪಟ್ಟು ಸಾಲ ಮಾಡಿ ನಿಮ್ಮನ್ನು ಕಾಲೇಜಿಗೆ ದಾಖಲಿಸುತ್ತಾರೆ.ಆದರೆ ನೀವು ಎಡವಿದರೇ ತಂದೆ-ತಾಯಿಯರ ಕನಸು ನೂಚ್ಚು ನೂರಾಗುತ್ತದೆ.ಆದ್ದರಿಂದ ಓದಿನ ಕಡೆಗೆ ಹೆಚ್ಚಿನ ಒಲವು ತೋರಿ.ಕಠಿಣ ಪರಿಶ್ರಮ, ಸಮಯದ ಪರಿಪಾಲನೆ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಸಿ.ಎ.ಇಂಗಿನಶೆಟ್ಟಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಮಾತನಾಡಿ, ಕಾಲೇಜಿನಲ್ಲಿ ನಿಮಗೆ ಅಭ್ಯಾಸ ಮಾಡಲು ಎಲ್ಲಾ ರಿತೀಯ ಸೌಲಭ್ಯಗಳು ನೀಡಲಾಗಿದೆ. ಅದನ್ನು ಬಳಸಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ.ಅಲ್ಲದೇ ನುರಿತ ಉಪನ್ಯಾಸಕರು ಇದ್ದಾರೆ,ಅವರು ನಿಮಗೆ ಬೇಕಾದ ಜ್ಞಾನವನ್ನು ನೀಡುತ್ತಾರೆ.ಅದನ್ನು ಪಡೆದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಇರಬೇಕಷ್ಟೆ. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಇರದೇ ಇದ್ದರೇ ಹರಿ ಬ್ರಹ್ಮ ಬಂದರೂ ಏನು ಮಾಡುವುದಕ್ಕೆ ಬರುವುದಿಲ್ಲ.ಆದ್ದರಿಂದ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶರಣಪ್ಪ ಹಲಕರ್ಟಿ ಮತ್ತು ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು. ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ ಯಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸದಸ್ಯರಾದ ಸುಭಾಷ ವ್ಯಾಸ್, ಅನೀಲ ಬೋರಗಾಂವಕರ್ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಾಜಕುಮಾರ ಬಾಸೂತ್ಕರ್, ರಮೇಶ ವಾಲಿ,ಪ್ರವೀಣ ರಾಜನ್, ಸಾಬಣ್ಣ ಗುಡುಬಾ, ಪದ್ಮಶ್ರೀ ಜೋಷಿ,
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…