ಸುರಪುರ: ಕಳೆದ 12 ವರ್ಷಗಳಿಂದ ತಾಲೂಕಿನ ಸಮಾಜದ ಸೇವೆ ಮಾಡಲು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮೂಲಕ ಸೇವೆ ಸಲ್ಲಿಸಲು ನಮ್ಮೆಲ್ಲರಿಗೂ ಅವಕಾಶ ಮತ್ತು ಸಹಕಾರ ನೀಡಿದ ತಮ್ಮೆಲ್ಲರಿಗು ಧನ್ಯವಾದ ಅರ್ಪಿಸುತ್ತೇವೆ ಎಂದು ಗಂಗಾಧರ ನಾಯಕ ತಿಂಥಣಿ ತಿಳಿಸಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಇದುವರೆಗೆ ನಮ್ಮಿಂದ ಸಾಧ್ಯವಾದ ಮಟ್ಟಿಗೆ ಸಮಾಜದ ಕೆಲಸ ಮಾಡಿದ್ದೇವೆ,ಈ ಮುಂದೆ ಹೊಸಬರಿಗೆ ಅವಕಾಶ ನೀಡಿ ಸಮಾಜದ ಏಳಿಗೆಗೆ ಅವರೊಂದಿಗೆ ಶ್ರಮಿಸೋಣ ಎನ್ನುವ ಉದ್ದೇಶ ದಿಂದ ಇಂದು ಇದುವರೆಗೆ ಇದ್ದ ತಾಲೂಕ ಘಟಕದ ಎಲ್ಲಾ ಪದಾಧಿಕಾರಿಗಳು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.ಎಲ್ಲರು ಪದಾಧಿಕಾರಿಗಳ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.
ನಂತರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ನಗರ ಘಟಕದ ಅಧ್ಯಕ್ಷ ರಾಜಾ ಮುಕುಂದ ನಾಯಕ ಸೇರಿದಂತೆ ಅನೇಕರು ಮಾತನಾಡಿ, ಅವರು ಎಲ್ಲರ ನಿರ್ಣಯವನ್ನು ಪಡೆದು ನೂತನ ಪದಾಧಿಕಾರಿಗಳ ನೇಮಕಗೊಳಿಸಲು ಒಂದು ಸಮಿತಿಯನ್ನು ರಚನೆ ಮಾಡಿ ಅವರ ನೇತೃತ್ವದಲ್ಲಿ ಮುಂದಿನ ರವಿವಾರ ಸಪ್ಟೆಂಬರ್ 1 ರಂದು ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸೋಣ ಎಂದು ನಿರ್ಣಯಿಸಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಕುಂದು ಕೊರತೆಗಳ ಸಮಸ್ಯೆಗಳು,ವಾಲ್ಮೀಕಿ ನಾಯಕ ನೌಕರದಾರರ ಸಮಸ್ಯೆಗಳು,ಸಮಾಜದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ,ಸುರಪುರ ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.ಅಲ್ಲದೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡದಂತೆ ಅಧಿಕಾರಿಗಳಿಗೆ ತಿಳಿಸುವುದು,ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ರದ್ದು ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸುವು ಕುರಿತು ತೀರ್ಮಾನಿಸಿದರು.
ಇದೇ ಸಂದರ್ಭದಲ್ಲಿ ನಾಗರಾಜ ಪ್ಯಾಪಲಿ,ಚಂದ್ರಶೇಖರ ವಜ್ಜಲ್ ಕಕ್ಕೇರಾ,ಹಣಮಂತ್ರಾಯ ಮೇಟಿ ಚಿಗರಿಹಾಳ ಇವರು ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಮುಂದಿನ ರವಿವಾರದ ಸಭೆಗೆ ಬರಲು ಜನರಿಗೆ ತಿಳಿಸಲು ನೇಮಕಗೊಳಿಸಿ ಘೋಷಿಸಿದರು.
ಸಭೆಯಲ್ಲಿ ರಾಜಾ ಪಿಡ್ಡ ನಾಯಕ ಪ್ಯಾಪಕಿ,ರಾಜಾ ಅಪ್ಪು ಧಣಿ,ಶ್ರೀನಿವಾಸ ನಾಯಕ ಮಾಲಗತ್ತಿ,ದೇವೆಂದ್ರಪ್ಪ ಬಳಿಚಕ್ರ,ವಾಸುದೇವ ಗಂಗೆ,ದೇವೆಂದ್ರಪ್ಪ ಚಿಕ್ಕನಹಳ್ಳಿ ದೇವರಗೋನಾಲ,ಸಿದ್ದನಗೌಡ ಕರಿಬಾವಿ, ದಶರಥ ದೊರೆ ಕಚಕನೂರ,ಮಾನಪ್ಪ ನಾಯಕ ವನದುರ್ಗ,ಸಂಜೀವಪ್ಪ ದರಬಾರಿ,ಶರಣಪ್ಪ ಪಿಎಸ್‍ಐ,ಗುರುನಾಥ ಹುಲ್ಕಲ್ ವೇದಿಕೆಯಲ್ಲಿದ್ದರು.ಸಭೆಯ ಕುರಿತು ಶಿಕ್ಷಕ ಮಹಾಂತೇಶ ಗೋನಾಲ ಮಾತನಾಡಿದರು,ಉಪನ್ಯಾಸಕ ಯಲ್ಲಪ್ಪ ನಾಯಕ ಸ್ವಾಗತಿಸಿದರು,ಗಂಗಾಧರ ನಾಯಕ ನಿರೂಪಸಿದರು,ನ್ಯಾಯವಾದಿ ಬಲಭೀಮ ನಾಯಕ ದೇವಾಪುರ ವಂದಿಸಿದರು.ಸಮಾಜದ ಅನೇಕ ಮುಖಂಡರು ಹಾಗೂ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ಸಮಿತಿ:ರಾಜಾ ಕೃಷ್ಣಪ್ಪ ನಾಯಕ ಸುರಪುರ ಸಂಸ್ಥಾನ,ರಾಜಾ ವೇಣುಗೋಪಾಲ ನಾಯಕ ಶಾಸಕರು,ನರಸಿಂಹ ನಾಯಕ (ರಾಜುಗೌಡ) ಮಾಜಿ ಶಾಸಕರು,ರಾಜಾ ಮುಕುಂದ ನಾಯಕ ನಗರ ಘಟಕದ ಅಧ್ಯಕ್ಷರು,ರಾಜಾ ಪಿಡ್ಡ ನಾಯಕ ಪ್ಯಾಪಲಿ, ದಶರಥ ನಾಯಕ ಪ್ಯಾಪ್ಲಿ,ಸಿದ್ದನಗೌಡ ಪಾಟೀಲ್ ಕರಿಬಾವಿ,ಶಂಕರಗೌಡ ಪಾಟೀಲ್ ಕೋಳಿಹಾಳ,ಗುಂಡಪ್ಪ ಸೋಲಾಪುರ ಕಕ್ಕೇರಾ,ದೇವೆಂದ್ರಪ್ಪ ಚಿಕ್ಕನಹಳ್ಳಿ ದೇವರಗೋನಾಲ,ರಾಜಾ ಅಪ್ಪು ಧಣಿ,ಪ್ರಕಾಶ ಗುತ್ತೇದಾರ,ಅಯ್ಯಣ್ಣ ಹಾಲಬಾವಿ
ರಾಜೀನಾಮೆ ನೀಡಿದ ಪದಾಧಿಕಾರಿಗಳು: ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ್ ಕರಿಬಾವಿ,ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ,ಉಪಾಧ್ಯಕ್ಷ ಸೋಮನಾಥ ನಾಯಕ ಡೊಣ್ಣಿಗೇರ,ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಪ್ರ.ಕಾರ್ಯದರ್ಶಿ ವೆಂಕಟೇಶ ಬೇಟೆಗಾರ,ಸಂ.ಕಾರ್ಯದರ್ಶಿ ಬಸವರಾಜ ಬಡಿಗೇರ,ಖಜಾಂಚಿ ಪರಶುರಾಮ ಮಲ್ಲಿಬಾವಿ,ಸಹ ಕಾರ್ಯದರ್ಶಿ ಶರಣಪ್ಪ ಲಿಂಗದಳ್ಳಿ,ಸಹ ಸಂ.ಕಾರ್ಯದರ್ಶಿ ಹಣಮಂತ್ರಾಯ ದೊರೆ ಅಮ್ಮಾಪುರ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…