ಬಿಸಿ ಬಿಸಿ ಸುದ್ದಿ

ಮನದ ಮೈಲಿಗೆ ಕಳೆದ ಮಡಿವಾಳ ಮಾಚಿದೇವರು

ಕಲಬುರಗಿ: ಬಸವಣ್ಣನವರ ಹಿರಿಯ ಸಮಕಾಲೀನರಾದ ಮಡಿವಾಳ ಮಾಚಿದೇವರು ಕೇವಲ ಬಟ್ಟೆಗಂಟಿದ ಕೊಳೆ ಮಾತ್ರ ತೊಳೆಯಲಿಲ್ಲ. ಮನಕ್ಕೆ ಅಂಟಿದ ಮೈಲಿಗೆ ಕೂಡ ತೊಳೆದು ಒಳಗೂ ಹೊರಗೂ ಒಂದಾಗಿಸುವ ನಿರಂಜನ, ವೀರವ್ರತಿ, ಗಣಾಚಾರಿ ಶರಣರಾಗಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಶನಿವಾರ ಮಹಾತ್ಮ ಬಸವೇಶ್ವರ ನಗರದ ಜಗನ್ನಾಥ ರಾಚಟ್ಟೆಯವರ ಶರಣ ಸಂಕುಲ ಸಭಾಂಗಣದಲ್ಲಿ ಜರುಗಿದ ವಚನ ವೈಭವ ಕಾರ್ಯಕ್ರಮದಲ್ಲಿ ‘ವೀರಗಣಾಚಾರಿ ಮಾಚಿದೇವರು’ ಕುರಿತು ವಿಶೇಷ ಅನುಭಾವ ನೀಡಿದ ಅವರು, ಅಲ್ಲಮಪ್ರಭು, ಬಸವಣ್ಣನವರಿಗಿಂತ ಹೆಚ್ಚು ಕಾಲ ಬದುಕಿದ್ದ ಮಡಿವಾಳ ಮಾಚಿದೇವರು ಬರೆದ 300 ವಚನಗಳು ಲಭ್ಯವಿದ್ದು, ಅವರ ವಚನಗಳು ವೈಚಾರಿಕ,ವೈಜ್ಞಾನಿಕ ವಿಚಾರಗಳಿಂದ ಕೂಡಿವೆ ಎಂದರು.

ಬಸವಣ್ಣ ಮತ್ತು ಮಾಚಿದೇವರರಿಗೆ ಅವಿನಾಭಾವ ಸಂಬಂಧವಿತ್ತು. ಒಬ್ಬರದು ಮುಗಿದ ಕೈ ಬಾಗಿದ ತಲೆ. ಇನ್ನೊಬ್ಬರದು ವೀರಗಂಟೆಯ ಎಚ್ಚರಿಕೆ. ಮಡಿವಾಳ ಮಾಚಿದೇವರು ಬಸವಣ್ಣನವರಿಗೆ ಸಾರ್ವಜನಿಕ ಕೆಲಸಗಳಿಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆದರೂ “ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ” ಎಂದು ಬಸವಣ್ಣನವರು ಕೊಂಡಾಡಿದ್ದಾರೆ ಎಂದು ಮಡಿವಾಳ ಮಾಚಿದೇವರ ಬದುಕು ಹಾಗೂ ಬೋಧನೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರೊ. ಎಸ್.ಎಲ್. ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ ರಾಚಟ್ಟೆ ಸ್ವಾಗತಿಸಿದರು. ಡಾ. ಆದಿತ್ಯ ರಾಚಟ್ಟೆ ವಂದಿಸಿದರು. ಸಿದ್ಧರಾಮ ಯಳವಂತಗಿ ನಿರೂಪಿಸಿದರು.

ಆರ್.ಜಿ. ಶೆಟಗಾರ, ಹಣಮಂತರಾಯ ಕುಸನೂರ, ವಿರೇಶ ಮಾಲಿಪಾಟೀಲ, ಮಹಾಂತೇಶ ಕಲ್ಬುರ್ಗಿ, ಅಂಬಾರಾಯ ಬಿರಾದಾರ, ಶಶಿಕಾಂತ ಪಸಾರ, ಡಾ. ಶಿವಾನಿ ರಾಚಟ್ಟೆ, ಅರ್ಜನ ಎಸ್. ಖಂಡೋಜಿ ಇತರರಿದ್ದರು.

ಸಮಾನತೆ, ಸೌಹಾರ್ದತೆ, ಸ್ವಾವಲಂಬಿ ವಿಚಾರಗಳನ್ನೊಳಗೊಂಡ ವಚನ ಸಾಹಿತ್ಯವು ನಮ್ಮ ನೆಲೆದ ಮೊಟ್ಟ ಮೊದಲ ವಿಚಾರ ಸಾಹಿತ್ಯ.ವಾಗಿದೆ. ಇಂತಹ ವಿಚಾರಗಳು ಸಮಾಜದಲ್ಲಿ ನೆಲೆಗೊಂಡರೆ ಸಮಾಜ ಜಾಗೃತಿ ಉಂಟಾಗಿ ಸಾಮಾಜಿಕ ಪರಿವರ್ತನೆಯಾಗುತ್ತದೆ ಎಂಬುದನ್ನು ಅರಿತ ವೈದಿಕರು ಅನೇಕ ಹುನ್ನಾರಗಳನ್ನು ಹೆಣೆಯುತ್ತಲೇ ಇದ್ದಾರೆ. ಇದಕ್ಕೆ ಬಲಿಯಾಗದೆ ಬದುಕಿನಲ್ಲಿ ವೈಚಾರಿಕ ಶಿಸ್ತು ಬೆಳೆಎಸಿಕೊಳ್ಳಬೇಕು. -ಅಲ್ಲಮಪ್ರಭು ಬೆಟ್ಟದೂರು, ಸಾಹಿತಿಗಳು

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

24 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago