ಶಹಾಪುರ: ವೈದಿಕರು ಸೃಷ್ಟಿಸಿದ ದೇವಾನು ದೇವತೆಗಳನ್ನು ಪೂಜಿಸುತ್ತ ನಮ್ಮದೆ ಅದ ವಚನ ತತ್ವ ಸಿದ್ಧಾಂತವನ್ನು ಮರೆತಿದ್ದೇವೆ. ವಚನಗಳು ಜನ ಸಾಮಾನ್ಯರಾಗಿದ್ದ ದುಡಿಯುವ ವರ್ಗ ರಚನೆ ಮಾಡಿದ್ದಾರೆ.

ವೇದಗಳು ದುಡಿಯದೆ ತಪಸ್ಸು ಮಾಡುತ್ತಿದ್ದವರು, ಋಷಿಗಳೆಂದು ಕರೆಯಿಸಿಕೊಂಡವರು ರಚನೆ ಮಾಡಿದ್ದಾರೆ. ನಮ್ಮದಲ್ಲದ ಸಂಸ್ಕøತಿಯನ್ನು ನಾವು ಎತ್ತಿ ಹಿಡಿದುಕೊಂಡು ಹೊರಟಿದ್ದೇವೆ ಇದು ತುಂಬಾ ಕಳವಳವನ್ನುಂಟು ಮಾಡುವ ಸಂಗತಿ ಎಂದು ಕಲಬುರ್ಗಿಯ ಬಸವ ತತ್ವ ಪ್ರಸಾರಕ ಪ್ರೊ. ಸಂಜಯ ಮಾಕಲ್ ನುಡಿದರು.

ಸ್ಥಳಿಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ , ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು 118ರ ಕಾರ್ಯಕ್ರಮದಲ್ಲಿ ಶಿವಶರಣೆ ಅಕ್ಕನಾಗಮ್ಮ ಮತ್ತು ನುಲಿಯ ಚೆಂದಯ್ಯ ಶರಣರ ಜಯಂತೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೇದಗಳು ಮತ್ತು ಬಸವಣ್ಣ ಎಂಬ ವಿಷಯ ಕುರಿತು ಮಾತನಾಡಿದರು.

ವೇದಗಳು ಅಪೌರುಷಯ ಎಂದು ಹೇಳುತ್ತಲೆ ಸಮಾಜದಲ್ಲಿ ಹಲವಾರು ಕಟ್ಟು ಪಾಡುಗಳನ್ನು , ಕಂದಾಚಾರ, ಮೌಢ್ಯಗಳನ್ನು ಜಾರಿಗೆ ತಂದರು. ಅವರವರ ಕರ್ಮಗಳ ಅನುಸಾರ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರನಾಗಿ ಹುಟ್ಟುತ್ತಾನೆ ಎಂದು ಪ್ರಸಾರ ಮಾಡಿದರು. ಮೇಲ್ವರ್ಗದಲ್ಲಿ ಹುಟ್ಟಿದವನು ನೇರವಾಗಿ ದೇವರಿಗೆ ಸಮಾಜ ಎಂದು ಹೇಳುತ್ತ ಸಮಾಜವನ್ನು ದೇವರ ಹೆಸರಿನ ಮೇಲೆ ಸುಲಿಗೆ ಮಾಡಲು ಆರಂಭಿಸಿದರು ಎಂದು ತುಂಬಾ ಕಟುವಾಗಿ ವೈದಿಕರ ನಿಲುವುಗಳನ್ನು ಖಂಡಿಸಿದರು.

ಪಟ್ಟಭದ್ರರ ಹಿತಾಸಕ್ತಿಯನ್ನು ಸಂಪೂರ್ಣ ಅರಿತುಕೊಂಡ ಬಸವಣ್ಣನವರು ಇವರೆಲ್ಲರ ಮೂಲ ಆಶಯವನ್ನು ಸಮಾಜದ ಮುಂದೆ ತೆಗೆದಿರಿದರು. ಏನಯ್ಯಾ ವಿಪ್ರರು ನುಡಿದಂತೆ ನಡೆಯರು ಎಂಬ ಸರಳ ಸತ್ಯವನ್ನು ತೋರಿದರು. ದೇವರು ಧರ್ಮಗಳು ಮನುಷ್ಯನ ಅಭ್ಯುದಯಕ್ಕಾಗಿ ಇದೆಯೆ ಹೊರತು ಆತನನ್ನು ಭಯ ಪಡಿಸುವುದಕ್ಕಲ್ಲ ಎಂಬ ಸತ್ಯವನ್ನು ಜಗತ್ತಿನ ಮೊಟ್ಟ ಮೊದಲು ತೋರಿಸಿ, ಗಟ್ಟಿಯಾಗಿ ಮಾತನಾಡಿದರು.

ಶರಣ ಪರಂಪರೆ ಸತ್ಯ ಶುದ್ಧ ಕಾಯಕ ಮಾಡಿ, ಉಳಿದಷ್ಟನ್ನು ದಾಸೋಹ ಮಾಡುವ ಸಂಸ್ಕøತಿ. ದೇವರಿಗಾಗಿ ಎಲ್ಲೂ ಅಲೆಯಬೇಕಾಗಿಲ್ಲ ಸಚರಾಚರ ವಸ್ತುಗಳಲ್ಲೂ ದೇವರು ಅಡಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯೊಳಗೂ ದೇವರಿದ್ದಾನೆ ಎಂಬ ಪ್ರಜ್ಞೆಯಿಂದ ವರ್ತಿಸಿದರೆ ಸಾಕು, ಮತ್ರ್ಯಲೋಕ ಕರ್ತಾರನ ಕಮ್ಮಟ ಆಗುತ್ತದೆ. ವೈದಿಕರ ತಂತ್ರಗಳನ್ನು ಅರಿಯದ ಲಿಂಗಾಯತರು, ಅವರು ಸೃಷ್ಟಿಸಿದ ಕಂದಕಗಳಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಯಜ್ಞ ಯಾಗಳನ್ನು ವೀರಭದ್ರನ ಮೂಲಕ ಧಿಕ್ಕರಿಸಿದ್ದು ಲಿಂಗಾಯತ ಮಾರ್ಗ ಎಂದು ಮಾರ್ಮಿಕವಾಗಿ ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಜಗತ್ತು ಕೊಂಡಾಡುವಂಥ ಬಸವಾದಿ ಶರಣರ ಬದುಕು ಹಾಗೂ ವಚನಗಳು ಮಾರ್ಗದರ್ಶಿಯಾಗಿರುವಾಗ ಅವನ್ನು ಮರೆತು ಪಟ್ಟಭದ್ರರ ಹಿತಾಸಕ್ತಿಗೆ ಲಿಂಗಾಯತರು ಬಲಿಯಾಗುತ್ತಿರುವುದು ದುರಂತದ ಸಂಗತಿ. ಲಿಂಗಾಯತರು ವೇದ ಶಾಸ್ತ್ರ ಆಗಮ ಪುರಾಣ ಇತ್ಯಾದಿಗಳನ್ನು ಮೀರಿ ಬೆಳೆದ ವಿಶಿಷ್ಟವಾದ ಮಾರ್ಗದವರು. ಇತಿಹಾಸದ ಪ್ರಜ್ಞೆ ಇಲ್ಲದ ಕಾರಣಕ್ಕೆ ಲಿಂಗಾಯತರು ಪಟ್ಟಭದ್ರರ ಹಿಂದೆ ಬೆನ್ನುಬಿದ್ದು ತಮ್ಮತನವನ್ನು ಮರೆತಿದ್ದಾರೆ. ವಚನ ಸಾಹಿತ್ಯದ ನಿರಂತರ ಓದು ಮಾತ್ರ ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗಬಲ್ಲುದು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭೆಯ ತಾಲೂಕು ಅಧ್ಯಕ್ಷ ಸಿದ್ದಣ್ಣ ಆರಬೋಳ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಚರಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ. ಬಸವಯ್ಯ ಶರಣರು ವಹಿಸಿದ್ದರು. ರಾಜಶೇಖರ ಗೀತಾ ವಾಗಾ ಸಭೆಯನ್ನು ಉದ್ಘಾಟಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಫಜಲುದ್ದೀನ ರಹೀಮಾನಸಾಬ ವಚನ ಪ್ರಾರ್ಥನೆ ಮಾಡಿದರು.

ಸಭೆಯಲ್ಲಿ ಡಾ.ಚಂದ್ರಶೇಖರ ಸುಬೇದಾರ, ಸಲಾದಪುರ ಶರಣಪ್ಪ, ಶಿವಯೋಗಪ್ಪ ಮುಡಬೂಳ,ಗುರುಬಸವಯ್ಯ ಗದ್ದುಗೆ, ವಿರೂಪಾಕ್ಷಿ ಸಿಂಪಿ, ಷಣ್ಮುಖ ಅಣಬಿ, ಹೊನ್ನರೆಡ್ಡಿ ವಕೀಲರು, ಶಂಭುಲಿಂಗ ದೇಸಾಯಿ, ತಿಪ್ಪಣ್ಣ ಜಮಾದಾರ, ಶರಾವತಿ ಸತ್ಯಂಪೇಟೆ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಸಿದ್ಧಲಿಂಗಪ್ಪ ಆನೇಗುಂದಿ, ಲಕ್ಷ್ಮಣ ಲಾಳಸೇರಿ, ಕವಿತಾ ಗುಡಗುಂಟಿ, ಮಹಾದೇವಿ ವಡಿಗೇರಿ, ಸಂಗಮ್ಮ ಹರನೂರ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ, ಹಣಮಂತ ಕೊಂಗಂಡಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದು ಕೇರವಂಟಿಗಿ,ಭೀಮನಗೌಡ,ಬಸವರಾಜ ಹುಣಸಗಿ,ಭೀಮಣ್ಣ ಪಾಡಮುಖಿ, ಶ್ರೀಶೈಲ ಪಡಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

emedialine

Recent Posts

ಸ್ಪರ್ಧಾ ಮನೋಭಾವನೆಯೊಂದಿಗೆಉನ್ನತಗುರಿ ಹೊಂದಿ: ವಿ.ಎಸ್. ಹಿರೇಮಠ್

ಕಲಬುರಗಿ: ಪ್ರಸ್ತುತ ಸಂದರ್ಭದಲ್ಲಿಎಲ್ಲ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಂಡು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಉನ್ನತಗುರಿ ಹೊಂದಬೇಕುಎಂದು ನಿವೃತ್ತ ಪ್ರಿನ್ಸಿಪಾಲ್…

3 mins ago

ನಿಗಮದಿಂದ ಸೌಲಭ್ಯ ಒದಗಿಸಿ

ಕಲಬುರಗಿ: ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿ 100 ಕೋಟಿ ರೂ. ಮೀಸಲು ಇಟ್ಟರೂ ಸಮುದಾಯಕ್ಕೆ ಸೌಲಭ್ಯ ಸಿಗುತ್ತಿಲ್ಲ.…

7 mins ago

ಕಾಮ್ರೇಡ್ ಸೀತಾರಾಮ್ ಯೆಚೂರಿಯವರಿಗೆ DYFI, SFI ಸಂಘಟನೆಗಳಿಂದ ಶ್ರದ್ಧಾಂಜಲಿ

ಕಲಬುರಗಿ: SFI ಸಂಘಟನೆಯ ಮೂಲಕ ಹೋರಾಟ ಮಾಡುತ್ತಾ ರಾಜಕೀಯ ಜೀವನ ಆರಂಭಿಸಿದ,ಸಾಮಾಜಿಕ ಬದ್ಧತೆಯುಳ್ಳ ಕಾಮ್ರೇಡ್ ಸೀತಾರಾಮ್ ಯೆಚೂರಿಯವರಿಗೆ DYFI ಮತ್ತು…

19 mins ago

ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಶಾಸಕಿ ಕನೀಜ್ ಫಾತೀಮಾ ಚಾಲನೆ

ಕಲಬುರಗಿ: ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಉತ್ತರ ವಲಯ ಪ್ರಾಥಮಿಕ ಹಾಗೂ…

23 mins ago

ಸುರಪುರ:ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಸುರಪುರ:ಅಮೇರಿಕದ ಸುದ್ಧಿಗೋಷ್ಠಿ ಒಂದರಲ್ಲಿ ಕಾಂಗ್ರೇಸ್ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸಲಾಗುವುದು…

31 mins ago

ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ

ಕಲಬುರಗಿ: ವಿದ್ಯಾನಗರ ಶ್ರೀ ಮಲ್ಲಿಕಾರ್ಜನತರುಣ ಸಂಘ 26ನೆ ವಾರ್ಷಿಕೊತ್ಸವ ಹಾಗೂ ಗಣೇಶ ಉತ್ಸವ 2024 ರ ನಿಮಿತ್ತ ಹಮ್ಮಿಕೋಂಡ ಸಂಸ್ಕ್ರುತಿಕ…

34 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420