ನೀತಿ ಆಯೋಗದಿಂದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿಗೆ ಎರಡನೇ ರ‍್ಯಾಂಕ್ ಘೋಷಣೆ

ಮಹತ್ವಕಾಂಕ್ಷೆ ತಾಲೂಕಿನಲ್ಲಿ ಉತ್ತಮ ಪ್ರಗತಿ ಹಿನ್ನೆಲೆ

ಕಲಬುರಗಿ: ಶಿಕ್ಷಣ, ಆರೋಗ್ಯ, ಕೌಶಲ್ಯ, ಮಹಿಳಾ ಮತ್ತು ಮಕ್ಕಳ, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ತಾಲೂಕುಗಳಿಗೆ ಇತ್ತೀಚೆಗೆ ನೀತಿ ಆಯೋಗವು ಡೆಲ್ಟಾ ರ‍್ಯಾಂಕ್-2024 ಘೋಷಿಸಿದ್ದು, ದಕ್ಷಿಣ ಭಾರತ ವಲಯದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಯಶಸ್ವಿಯಾಗಿದೆ.

ಒಟ್ಟಾರೆ 500 ತಾಲೂಕಿನಲ್ಲಿ ಒಟ್ಟಾರೆ ಕಾರ್ಯಕ್ಷಮತೆ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ 6 ವಲಯಗಳಲ್ಲಿ ಪ್ರಥಮ, ದ್ವಿತೀಯ ರ‍್ಯಾಂಕ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಭಾರತ ವಲಯದಡಿ ಆಂಧ್ರ ಪ್ರದೇಶದ ಭಾಮಿನಿ ತಾಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಸಫಲವಾಗಿದೆ.

ಕೇಂದ್ರದ ನೀತಿ ಆಯೋಗವು ದೇಶದಾದ್ಯಂತ 500 ಹಿಂದುಳಿದ ಬ್ಲಾಕುಗಳನ್ನು ಮಹತ್ವಾಕಾಂಕ್ಷೆ ತಾಲೂಕುಗಳೆಂದು ಗುರುತಿಸಿ ಇಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯ, ಅಪೌಷ್ಠಿಕತೆ ನಿವಾರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆಗೆ ಪ್ರಸಕ್ತ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರಲು ಒತ್ತು ನೀಡುತ್ತಿದೆ. ವಿಶೇಷವಾಗಿ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಮತ್ತು ಜನರ ಭಾಗೀದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯ ಅಫಜಲಪೂರ, ಶಹಾಬಾದ ಹಾಗೂ ಕಾಳಗಿ ಮೂರು ತಾಲೂಕುಗಳನ್ನು ಮಹತ್ವಕಾಂಕ್ಷೆ ತಾಲೂಕುಗಳೆಂದು ಗುರುತಿಸಲಾಗಿತ್ತು. ಇದೀಗ ಕಾಳಗಿ ತಾಲೂಕಿನ ಪ್ರಗತಿಗೆ ನೀತಿ ಆಯೋಗ ರ‍್ಯಾಂಕ್ ಘೋಷಿಸಿರುವುದರಿಂದ ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಿಸಿದೆ. ಶೀಘ್ರದಲ್ಲಿಯೇ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಅಧಿಕಾರಿಗಳನು ಆಹ್ವಾನಿಸಿ ಅಧಿಕೃತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.

ಹೆಚ್ಚಿನ ಅನುದಾನ ನಿರೀಕ್ಷೆ: ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಪಡೆದಿರುವುದರಿಂದ ಕಾಳಗಿ ತಾಲೂಕಿಗೆ ಕೇಂದ್ರದಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಅನುದಾನ ಹರಿದು ಬಂದಲ್ಲಿ ಅದು ತಾಲೂಕಿನ ಪ್ರಗತಿಗೆ ವರವಾಗಲಿದೆ.

ಅಭಿನಂದನೆ ಸಲ್ಲಿಸಿದ ಡಿ.ಸಿ: ಕಾಳಗಿ ತಾಲೂಕಿನಲ್ಲಿ ಕಾರ್ಯಕ್ರಮಗಳ ಉತ್ತಮ ನಿರ್ವಹಣೆಗೆ ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಘೋಷಿಸಿರುವುದಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಳಗಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮುಖ್ಯ ಯೋಜನಾಧಿಕಾರಿ ಮತ್ತು ಎ.ಬಿ.ಪಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಶರಣಯ್ಯ ಎಸ್. ಮಠಪತಿ, ತಾಲೂಕಿನ ಎ.ಬಿ.ಪಿ. ಫೆಲೋ ಶಿವರಾಜ ಹೋಳ್ಕರ್ ಸೇರಿದಂತೆ ಇಡೀ ತಾಲೂಕು ಆಡಳಿತ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮುಂದೆಯೂ ಇದೇ ರೀತಿಯಲ್ಲಿ ಅಫಜಲಪೂರ ಮತು ಶಹಾಬಾದ ತಾಲೂಕುಗಳು ಸಹ ರ‍್ಯಾಂಕ್ ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

emedialine

Recent Posts

ನಾಳಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಕೋರಿಕೆ

ಕಲಬುರಗಿ: ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲ ನ್ಯಾಯವಾದಿಗಳು ಹೆಚ್ಚಿನ…

4 hours ago

ಕೊಪ್ಪಳದಲ್ಲಿ ವಧು ವರರ ಸಮಾವೇಶ, ಪ್ರತಿಭಾ ಪುರಸ್ಕಾರ

ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು…

4 hours ago

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆ ಮಾನವ ಸರಪಳಿ ಯಶಸ್ವಿಗೊಳಿಸಿ; ಜಗದೀಶ ಚೌರ್

ಶಹಾಬಾದ: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ…

4 hours ago

ಪಡಿತರ ಚೀಟಿ ಶಾಶ್ವತವಾಗಿ ರದ್ದು ಪಡಿಸುವ ಸರಕಾರದ ವಿರುದ್ಧ ಆಕ್ರೋಶ

ಶಹಾಬಾದ: ಅನ್ನಭಾಗ್ಯಕ್ಕೆ ಕನ್ನಹಾಕುತ್ತಿರುವ ಸರಕಾರಗಳ ವಿರುದ್ಧ ಪ್ರಬಲ ಜನಾಂದೋಲನವನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ…

4 hours ago

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಕಲಬುರಗಿ: ಸೈಯದ್ ಚಿಂಚೋಳಿಯಲ್ಲಿರುವ ಚಂದ್ರಶೇಖರ ಪಾಟೀಲ್ ರೇವೂರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ 2024-25 ನೇ ಸಾಲಿನ ಕಲಬುರಗಿ…

4 hours ago

ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಕಲಬುರಗಿ: ನಗರದ ಪಬ್ಲಿಕ್ ಗಾರ್ಡನನಲ್ಲಿ ಆರೋಗ್ಯ ಸಹಾಯಕರ (ಹಿರಿಯ, ಕಿರಿಯ) ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಮಹಾನಗರ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420