ಕಲಬುರಗಿ: ನಾಡಿಗೆ ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ನೀಡಿದ ಭಾಗ ನಮ್ಮದು. ಈ ಪ್ರದೇಶದಲ್ಲಿ ಅನೇಕ ಸಾಹಿತಿಗಳಿದ್ದು, ತಮ್ಮದೇ ಆದ ಅನುಭಾವಿಕ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ವ್ಯಕ್ತಿತ್ವ, ಸಾಹಿತ್ಯ ಹೆಚ್ಚಿನ ಮಟ್ಟದಲ್ಲಿ ಪ್ರಚುರಪಡಿಸುವ ಮೂಲಕ, ನಾಡಿನ ಇತರೆ ಪ್ರದೇಶಗಳಿಗಿಂತ ನಾವೇನೂ ಕಡಿಮೆಯಿಲ್ಲವೆಂದು ತೋರಿಸಿಕೊಡುವ ಕಾರ್ಯ ಜರುಗಬೇಕಾಗಿದೆಯೆಂದು ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಸಲಹೆ ನೀಡಿದರು.
ಅವರು ’ಕನ್ನಡ ಸಾಹಿತ್ಯ ಸಂಘ’ದ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಸಂಘದ ಸಭಾಂಗಣದಲ್ಲಿ ವಿಜಯದಶಮಿ ಪ್ರಯುಕ್ತ ಒಂದು ವಾರ ಕಾಲ ಹಮ್ಮಿಕೊಳ್ಳಲಾಗಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಭಾನುವಾರ ಜರುಗಿದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಹಿತಿಗಳಿದ್ದಾರೆ. ಅವರನ್ನು ಗುರ್ತಿಸಿ ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚಿನ ಸಾಹಿತ್ಯ ಹೊರಬರಲು ಸಾಧ್ಯವಿದೆ. ಬದುಕನ್ನು ಕಟ್ಟಿಕೊಡುವ ಸಾಹಿತ್ಯಕ್ಕೆ ಆದ್ಯತೆಯನ್ನು ನೀಡಬೇಕು. ಕವಿತ್ವ ಹೊಂದಿದರೆ ಮೇರು ವ್ಯಕ್ತಿ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಲ್ಲಿ ಕನ್ನಡತನ ಪ್ರವೃತ್ತಿ ಬೆಳಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ನರಸಿಂಗರಾವ ಹೇಮನೂರ, ನಮ್ಮ ಭಾಗದ ಕನ್ನಡ ಅಸ್ಮಿತೆಯ ಪ್ರಶ್ನೆ ಉದ್ಬವಿಸಿದಾಗ, ಅದಕ್ಕೆ ಇಲ್ಲಿನ ಸಾಹಿತ್ಯ ಸಂಘದ ಕೊಡುಗೆ ಮರೆಯುವಂತಿಲ್ಲ. ಕವಿತ್ವ ಎಲ್ಲರಿಗೂ ದೊರೆಯುವದಿಲ್ಲ. ಕೆಲವು ಸಾಲಗಳನ್ನು ಬರೆದು ದಿಢೀರನೆ ಸಾಹಿತಿಯೆಂದು ಗುರ್ತಿಸಿಕೊಳ್ಳಬೇಕೆಂಬ ಬಯಕೆ ಬೇಡ. ಹಣತೆಯು ತನ್ನ ಮೈ ಸುಟ್ಟಿಕೊಂಡು ಬೆಳಕು ನೀಡುವಂತೆ, ಕವಿಯಾದವನು ಎಂತಹ ಕಷ್ಟ ಬಂದರೂ ಕೂಡಾ ಸಮಾಜಮುಖಿ ಸಾಹಿತ್ಯವನ್ನೆ ರಚಿಸಬೇಕು. ಈ ನಿಟ್ಟನಲ್ಲಿ ಪ್ರೊ.ವಸಂತ ಕುಷ್ಟಗಿ ಅವರ ಸಾಹಿತ್ಯ ಪ್ರಮುಖವಾಗಿದೆ. ಅವರ ಸಮಗ್ರ ಸಾಹಿತ್ಯ ಕೊಡುಗೆಯನ್ನು ಪರಿಗಣಿಸಿ ಕಲಬುರಗಿಯಲ್ಲಿ ಬರುವ ಡಿಸೆಂಬರನಲ್ಲಿ ಜರಗುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನೇಮಿಸುವುದು ಸೂಕ್ತವೆಂದು ಹೇಳಿದರು. ಇದಕ್ಕೆ ಭಾಗವಹಿಸಿದ್ದ ಎಲ್ಲರೂ ಒಕ್ಕೋರಲಿನಿಂದ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಕವಿಗಳಾದ ಡಿ.ಕೆ.ಭೀ, ತವಗ ಭೀಮಶೇನರಾಯರು, ದತ್ತಾತ್ರೇಯ ಹೇರೂರ, ಸಗರ ಕೃಷ್ಣಾಚಾರ್ಯ, ರೇವಸಿದ್ಧಯ್ಯ ರುದ್ರಸ್ವಾಮಿ, ಕೆ.ಮುದ್ದಣ್ಣ, ಶೈಲಜಾ ಉಡಷಣ, ಜಿ.ಕೆ.ಪ್ರಾಣೇಶಚಾರ್ಯ, ದೇವೇಂದ್ರಕುಮಾರ ಹಕಾರಿ, ಲಿಂಗನ್ಣ ಸತ್ಯಂಪೇಟ, ಮಢಿಕರಾವ ಧನಶ್ರೀ ಅವರ ಕೆಲವು ಆಯ್ದ ಕವಿತೆಗಳನ್ನು ಕವಿಗಳಾದ ಪ್ರೊ.ಎಚ್.ಬಿ.ಪಾಟೀಲ, ರತ್ನಾ ಮಣೂರ, ಗಿತಾ ಜೋಶಿ, ಡಾ.ಸವಿತಾ ಸಿರಗೋಜಿ, ಡಾ.ಸದಾನಂದ ಪಾಟೀಲ, ರೇಣುಕಾ ಕುಳಗೇರಿ, ಅಣೆಮ್ಮ ಕುಂಬಾರ, ಮೇಘಾ ಪಾಟೀಲ, ಅಖ್ತರ ಅಲಿ ಮುದಗಲ್ಲು, ವೇಂಕಟೇಶ ಮುದಗಲ್ಲು ಅವರು ವಾಚಿಸಿದರು.
ಇದಕ್ಕೂ ಮುಂಚೆ ಇದೇ ವೇದಿಕೆಯ ಮೇಲೆ ಕಾವ್ಯಶ್ರೀ ಅವರಿಂದ ಸುಗಮ ಸಂಗೀತ ಹಾಗೂ ಡಾ.ಸವಿತಾ ಸಿರಗೋಜಿ ಅವರಿಂದ ಜೈಮಿನಿ ಭಾರತದ ಗಮಕ ವಾಚನ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೈಲಾಸನಾಥ ದೀಕ್ಷಿತ, ಎಂ.ಬಿ.ನಿಂಗಪ್ಪ, ನರಸಪ್ಪ ಬಿರಾದಾರ ದೇಗಾಂವ, ಬಾಬು ಜಾಧವ,ಸೋಮನಾಥ ಡಿ, ಪ್ರಭಾಕರ ಸಾತಖೇಡ, ಕಾಂತರಾಜ ತವಗ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…