ಚಿಕ್ಕ ಮಗುವಿನಿಂದ ಹಿಡಿದು ವ್ರದ್ದೆ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಇಡೀ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ದಿನ ಬೆಳಗಾದರೆ ಪತ್ರಿಕೆ, ಟಿವಿ ನ್ಯೂಸ್ ಗಳಲ್ಲಿ ಅತ್ಯಾಚಾರ,ಕೊಲೆ ಪ್ರಕರಣಗಳು ಕೇಳುತ್ತಲೇ ಇದ್ದೇವೆ. ಹಾಗಾದರೆ ಈ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಯಾವಾಗ?ಸುರಕ್ಷತೆ ಯಾವಾಗ? ಸ್ವಾತಂತ್ರ್ಯ ಯಾವಾಗ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 77 ವರ್ಷಗಳಾದರೂ ಇನ್ನೂ ಮಹಿಳೆ ಮಾತ್ರ ಲೈಂಗಿಕ ಕಿರುಕುಳ, ಕೊಲೆ ಒಂದಲ್ಲ ಒಂದು ರೀತಿಯಲ್ಲಿ ಪುರುಷನ ಕ್ರೌರ್ಯಕ್ಕೆ ಒಳಗಾಗುತ್ತಲೇ ಬದುಕುತ್ತಿದ್ದಾಳೆ. ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಖುಷಿ ಪಡಬೇಕೋ ಅಥವಾ ಭಯಪಡಬೇಕೋ ಎನ್ನುವಷ್ಟರ ಮಟ್ಟಿಗೆ ಈ ಸಮಾಜ ಬಂದು ನಿಂತಿದೆ. ಕಾಲೇಜು, ಕೆಲಸ, ಶಾಪಿಂಗ್ ಅಂತ ಹೊರಗೆ ಹೋದ ಹೆಣ್ಣು ಮಗಳು ತಿರುಗಿ ಮನೆಗೆ ಬರುವ ದಾರಿಯನ್ನು ನೋಡುವ ಮನೆಯವರು, ದೂರದ ಊರಿಗೆ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅಂತ ಹೋದ ಮಹಿಳೆಯರ ತಂದೆ ತಾಯಿಯ ಭಯ ಆತಂಕ ಇದು ನಿಜಕ್ಕೂ ಈ ಸಮಾಜದಲ್ಲಿ ನಮಗೆ ರಕ್ಷಣೆ ಇದೆಯೇ ಎನ್ನುವ ಪ್ರಶ್ನೆ ಹುಟ್ಟಿಸುತ್ತಿದೆ.
2012ರಲ್ಲಿ ನಡೆದ ನಿರ್ಭಯ ಪ್ರಕರಣ, ಧರ್ಮಸ್ಥಳದ ಸೌಜನ್ಯ ಎನ್ನುವ ಹುಡುಗಿಯ ಕೊಲೆಯ ಪ್ರಕರಣ, ಹೈದರಾಬಾದಿನಲ್ಲಿ ನಡೆದ ವೈದ್ಯೆ ಪ್ರಿಯಾಂಕಾ ರೆಡ್ಡಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, ರಾಯಚೂರಿನಲ್ಲಿ ವಿದ್ಯಾರ್ಥಿಯ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರದ ಆರೋಪ ಹೀಗೆ ಮುಗಿಯದ ಈ ಅಮಾನುಷ ಕೃತ್ಯ ಹೆಣ್ಣು ಮಕ್ಕಳಾಗಿ ಯಾಕಾದರೂ ಹುಟ್ಟಿದ್ದೇವೋ? ಎನ್ನುವ ಭಾವನೆಗೆ ತಂದು ನಿಲ್ಲಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆ ಇಂದು ಅತ್ಯಾಚಾರ, ಕೊಲೆ ಹೆಸರಿನಲ್ಲಿ ಪುರುಷರ ಕಾಮುಕ ಕಣ್ಣಿಗೆ ಬಲಿಯಾಗುತ್ತಿರುವುದು ಅಮಾನವೀಯ. ಶಾಸಕರು, ಸಂಸದರು, ಧಾರ್ಮಿಕ ಗುರುಗಳು, ವಿದ್ಯಾರ್ಥಿ ಮೇಲೆ ಶಿಕ್ಷಕನ ಅತ್ಯಾಚಾರ, ಮಗಳ ಮೇಲೆ ತಂದೆ ಅತ್ಯಾಚಾರ, ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪ ಎದುರಿಸುತ್ತಲೇ ಇದ್ದಾರೆ ಹಾಗಾದರೆ ನಮಗೆ ನ್ಯಾಯ ಯಾರಿಂದ?? ರಕ್ಷಣೆ ಯಾರಿಂದ??.
ಮಾನವೀಯತೆ ಸತ್ತು ಹೋದಾಗ ಕಾನೂನು ಬಲವಾಗಬೇಕು. ಏಕೆಂದರೆ ಅತ್ಯಾಚಾರದ ಸಂಖ್ಯೆ ಹೆಚ್ಚುತ್ತಲೇ ಇದೆ ಹಾಗೆ ತಪ್ಪಿತಸ್ಥರು ಕಾನೂನಿನ ಶಿಕ್ಷೆಯಿಂದ ಪಾರಾಗುತ್ತಲೇ ಇದ್ದಾರೆ. ಪತ್ರಿಕೆಯ ವರದಿ ಪ್ರಕಾರ 2023ರಲ್ಲಿ 537 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಆದರೆ ಎಷ್ಟು ಪ್ರಕರಣಗಳು ಶಿಕ್ಷೆಗೆ ಒಳಗಾಗಿದೆಯೋ?? 2013-23ರ ವರೆಗಿನ 10 ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾದ 1,322 ಅತ್ಯಾಚಾರ ಪ್ರಕರಣಗಳ ಅಂಕಿ ಅಂಶ ಗಮನಿಸಿದರೆ, ಇವರಿಗೆ 10 ಪ್ರಕರಣಗಳಲ್ಲಿ ದಂಡನೆ ದೊರೆತಿದೆ! ಅದೆಷ್ಟು ಪ್ರಕರಣಗಳು ಸಾಕ್ಷಗಳಿಲ್ಲದೆ ‘ಬಿ’ ರಿಪೆÇೀರ್ಟ ಸಲ್ಲಿಸಲಾಗಿದೆ ಗೊತ್ತಿಲ್ಲ. ಶಿಕ್ಷೆಯ ಪ್ರಮಾಣ ಮಾತ್ರ ಕೇವಲ ಶೇಕಡ 0.76ರಷ್ಟಿದೆ. 2020ರಲ್ಲಿ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣ ಮತ್ತು ಮೊನ್ನೆ ತಾನೆ ಕೊಲ್ಕತ್ತಾದಲ್ಲಿ ವೈದ್ಯೆ ಮೇಲಿನ ಅತ್ಯಾಚಾರದ ಕೊಲೆ ಪ್ರಕರಣದಲ್ಲಿ ಪೆÇಲೀಸರು ಅನುಸರಿಸಿದ ವಿಳಂಬ ನೀತಿ ಜನರಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ನಂಬಿಕೆ ಕಳೆದು ಹೋದಂತಾಗಿದೆ.
ನ್ಯಾಯಾಂಗ, ಕಾನೂನು ಸಂವಿಧಾನದಲ್ಲಿ ಇರುವುದೇ ಪ್ರಜೆಗಳಿಗೆ ರಕ್ಷಣೆ ನೀಡುವುದಕ್ಕೋಸ್ಕರ. ಕಠಿಣ ಮತ್ತು ತ್ವರಿತ ಶಿಕ್ಷೆ ವಿಧಿಸುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಇನ್ನ ಅದೆಷ್ಟು ಪ್ರಕರಣಗಳು ಆಗಬೇಕು ಗೊತ್ತಿಲ್ಲ. ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗಬಾರದು ಪಾರಾದರೆ ಇದು ಇನ್ನೊಂದು ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಯಾವುದೇ ವ್ಯಕ್ತಿಯು ಈ ಭೂಮಿ ಮೇಲೆ ಬದುಕಲು ಯೋಗ್ಯನಾಗಿರುವುದಿಲ್ಲ. “ಭೇಟಿ ಪಡಾವೋ ಬೇಟೋಸೆ ಬಚಾವೋ “.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…